ಸಂಜನಾ ಗಲ್ರಾನಿ ಮತ್ತೆ ಗರ್ಭಿಣಿ – 2ನೇ ಮಗುವಿನ ನಿರೀಕ್ಷೆಯಲ್ಲಿ ನಟಿ

ಸ್ಯಾಂಡಲ್‌ವುಡ್ ನಟಿ ಸಂಜನಾ ಗಲ್ರಾನಿ (Sanjana Galrani) ಅವರ ಮನೆಯಲ್ಲಿ ಸಂತಸ ಮನೆ ಮಾಡಿದೆ. ಸದ್ಯ ಸಿನಿಮಾಗಳಿಂದ (Cinema) ಆಗಿ ದೂರ ಸರಿದು ಕುಟುಂಬದೊಂದಿಗೆ ಸಂತಸದ ದಿನಗಳನ್ನು ಕಳೆಯುತ್ತಿರುವ ನಟಿ ಈಗ 2ನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ಸಿನಿಮಾಗಳಿಂದ ವಿರಾಮ ಪಡೆದುಕೊಂಡಿರುವ ನಟಿ, ಪತಿ ಅಜೀಜ್‌ ಪಾಷಾ ಮತ್ತು ಮಗ ಅಲಾರಿಕ್‌ ಜೊತೆ ಸಂತಸದ ಕ್ಷಣಗಳನ್ನು ಕಳೆಯುತ್ತಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲೂ ಸಿಕ್ಕಾಪಟ್ಟೆ ಆಕ್ಟೀವ್‌ ಆಗಿರುವ ಸಂಜನಾ ಮತ್ತೆ ತಾಯಿಯಾಗುತ್ತಿರುವ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ತೆಲುಗಿನತ್ತ ಧರ್ಮ ಕೀರ್ತಿರಾಜ್- ಅಪ್ಸರ ರಾಣಿ ಜೊತೆ ಸಿನಿಮಾ

ಸಂಜನಾ ಗಲ್ರಾನಿ ತಾವು ಮತ್ತೆ ಗರ್ಭಿಣಿಯಾಗಿರುವ ಸಂತಸದ ಸುದ್ದಿಯನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಹಸಿರು ಸೀರೆಯುಟ್ಟು, ಸೀಮಂತದ ಫೋಟೋಗಳು (Sanjana Galrani Photoshoot) ಮತ್ತು ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಈ ಪೋಸ್ಟ್‌ಗೆ, ʻಈ ಯುಗಾದಿ ನನಗೆ ತುಂಬಾ ವಿಶೇಷವಾಗಿದೆ ಏಕೆಂದರೆ ನಮ್ಮ ಕುಟುಂಬದ ಹೊಸ ಸದಸ್ಯರು ಶೀಘ್ರದಲ್ಲೇ ನಮ್ಮೊಂದಿಗೆ ಸೇರಲು ನಾವು ಕಾಯುತ್ತಿದ್ದೇವೆ. ದಯವಿಟ್ಟು ನಿಮ್ಮ ಪ್ರಾರ್ಥನೆ ಮತ್ತು ಆಶೀರ್ವಾದದಲ್ಲಿ ನನ್ನನ್ನು ಇರಿಸಿʼ ಎಂದು ನಟಿ ಕ್ಯಾಪ್ಷನ್‌ ಸಹ ಕೊಟ್ಟಿದ್ದಾರೆ. ಸಂಜನಾ ಅವರ ಸೀಮಂತದ ಫೋಟೋಗಳು ಸಖತ್‌ ವೈರಲ್‌ ಆಗಿದ್ದು, ಅಭಿಮಾನಿಗಳು, ಸ್ನೇಹಿತರು ಮತ್ತು ಹಿತೈಶಿಗಳು ಶುಭ ಹಾರೈಸಿದ್ದಾರೆ.

ತೆಲುಗು ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ್ದ ಸಂಜನಾ, ಬಳಿಕ ಕನ್ನಡದಲ್ಲಿ ಹಲವು ಸಿನಿಮಾಗಳಲ್ಲಿ ಚಾನ್ಸ್‌ ಗಿಟ್ಟಿಸಿಕೊಂಡಿದ್ದರು. ಅಲ್ಲದೇ ತಮ್ಮ ಗ್ಲ್ಯಾಮರ್‌ ಪಾತ್ರಕ್ಕೆ ಹಲವು ಬಾರಿ ಸುದ್ದಿಯಾಗಿದ್ದರು. ಲಾಕ್‌ಡೌನ್‌ ಸಮಯದಲ್ಲಿ ಪ್ರೀತಿಸಿ ವೃತ್ತಿಯಲ್ಲಿ ವೈದ್ಯರಾಗಿರುವ ಅಜೀಜ್‌ ಪಾಷಾ ಅವರನ್ನು ವಿವಾಹವಾಗಿ ಸುದ್ದಿಯಲ್ಲಿದ್ದರು. ಇದನ್ನೂ ಓದಿ: ಯಶ್ ನಟನೆಯ ‘ಟಾಕ್ಸಿಕ್’ ಚಿತ್ರೀಕರಣಕ್ಕಾಗಿ ಮುಂಬೈಗೆ ಬಂದಿಳಿದ ನಯನತಾರಾ

2022ರ ಮೇ ತಿಂಗಳಲ್ಲಿ ಸಂಜನಾ ಗಲ್ರಾನಿ ತಮ್ಮ ಮೊದಲ ಮಗುವಿಗೆ ಜನ್ಮ ನೀಡಿದ್ದರು. ತಂಗಿ ನಿಕ್ಕಿ ಗಲ್ರಾನಿ ಮದುವೆಯ ದಿನವೇ ಮಗುವಿನ ಆಗಮನವಾಗಿತ್ತು. ಅಜೀಜ್‌ ಪಾಷಾ ಮತ್ತು ಸಂಜನಾ ಸಂಪತಿಗೆ ಅಲಾರಿಕ್‌ ಎಂಬ ಹೆಸರಿನ ಮಗನಿದ್ದಾನೆ. ಇದನ್ನೂ ಓದಿ: EXCLUSIVE: ಆಶ್ರಯ ಇಲ್ಲದೆ ವೃದ್ಧಾಶ್ರಮ ಸೇರಿದ ಹಿರಿಯ ನಟಿ ಶೈಲಶ್ರೀ – ನಟಿಗೆ ಧನ ಸಹಾಯ ಮಾಡಿದ ದರ್ಶನ್