ಬೆಂಗಳೂರು: ಡೈರೆಕ್ಟರ್ ಡ್ರೀಂ ಕ್ರಿಯೇಷನ್ಸ್ ಲಾಂಛನದಲ್ಲಿ ಗಿರೀಶ್ ಜಿ ರಾಜ್ ನಿರ್ಮಿಸುತ್ತಿರುವ ‘ಯಾವಾಗಲೂ ನಿನ್ನೊಂದಿಗೆ’ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಚಿತ್ರಕ್ಕೆ ಈಗ ಜಾನ್ಸನ್ ಸ್ಟುಡಿಯೋದಲ್ಲಿ ಮಾತಿನ ಜೋಡಣೆ ನಡೆಯುತ್ತಿದೆ. ಬೆಂಗಳೂರು, ಮೈಸೂರು, ಹಾಸನ ಮತ್ತು ಚಿಕ್ಕಮಗಳೂರಿನಲ್ಲಿ ಚಿತ್ರೀಕರಣ ನಡೆದಿದೆ. ಚಿತ್ರ ಡಿಸೆಂಬರ್ನಲ್ಲಿ ತೆರೆಗೆ ಬರಲಿದೆ.
ರೂಪೇಶ್ ಜಿ ರಾಜ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಸತೀಶ್ ಬಾಬು ಅವರ ಸಂಗೀತ ನಿರ್ದೇಶನವಿದೆ. ರೇಣುಕುಮಾರ್ ಛಾಯಾಗ್ರಹಣ, ಕೌರವ ವೆಂಕಟೇಶ್ ಸಾಹಸ ನಿರ್ದೇಶನ ಹಾಗೂ ರಾಜು ಅವರ ನೃತ್ಯ ನಿರ್ದೇಶನವಿರುವ ಈ ಚಿತ್ರದ ನಾಯಕನಾಗಿ ರೂಪೇಶ್ ಜಿ ರಾಜ್ ಅಭಿನಯಿಸಿದ್ದಾರೆ. ಅರ್ಚನಾ ಈ ಚಿತ್ರದ ನಾಯಕಿ. ವಿ.ಮನೋಹರ್, ಹರೀಶ್ ರಾಯ್, ಟೆನ್ನಿಸ್ ಕೃಷ್ಣ, ಕುರಿ ರಂಗ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply