ಯೂಟ್ಯೂಬ್ ಟ್ರೆಂಡಿಂಗ್ ನಲ್ಲಿದೆ ಅನುಕ್ತ ಟ್ರೈಲರ್!

ಚಿತ್ರೀಕರಣ ಆರಂಭವಾದಾಗಿನಿಂದಲೂ ಅನುಕ್ತ ಚಿತ್ರ ಒಂದಲ್ಲಾ ಒಂದು ಕಾರಣಕ್ಕಾಗಿ ಸದಾ ಸುದ್ದಿಯಲ್ಲಿದೆ. ವಿಭಿನ್ನವಾದ ಪೋಸ್ಟರ್ ಗಳು, ಅಷ್ಟೇ ಚಕಿತಗೊಳಿಸೋ ಸುದ್ದಿಗಳ ಮೂಲಕ ಸದ್ದು ಮಾಡುತ್ತಾ ಬಂದಿರೋ ಈ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಇದನ್ನು ಜನ ಯಾವ ಪರಿಯಾಗಿ ಎಂಜಾಯ್ ಮಾಡುತ್ತಿದ್ದಾರೆಂದರೆ, ಅತ್ಯಂತ ಕಡಿಮೆ ಅವಧಿಯಲ್ಲಿಯೇ ಈ ಟ್ರೈಲರ್ ಯೂಟ್ಯೂಬ್ ಟ್ರೆಂಡಿಂಗ್ ನಲ್ಲಿದೆ.

ನಿಗೂಢ ಕೊಲೆಯ ಸುತ್ತ ಜರುಗೋ ಕಥಾ ಹಂದರವನ್ನ ಅನುಕ್ತ ಹೊಂದಿದೆ ಎಂಬ ವಿಚಾರ ಈ ಟ್ರೈಲರ್ ನಿಂದ ಜಾಹೀರಾಗಿದೆ. ಈ ಮೂಲಕವೇ ಅನುಕ್ತ ಎಂಥಾ ಸಂಚಲನ ಸೃಷ್ಟಿಸಿದೆ ಎಂದರೆ ರಂಗಿತರಂಗದಂಥಾದ್ದೇ ಮತ್ತೊಂದು ಸೂಪರ್ ಹಿಟ್ ಚಿತ್ರವಾಗಿ ಅನುಕ್ತ ದಾಖಲಾಗಲಿದೆ ಅನ್ನೋ ಮಾತುಗಳೂ ಕೇಳಿ ಬರುತ್ತಿವೆ. ಪಿ.ಆರ್.ಕೆ ಆಡಿಯೋ ಕಂಪೆನಿ ಕಡೆಯಿಂದ ಬಿಡುಗಡೆಯಾಗಿರೋ ಈ ಟ್ರೈಲರ್ ಈಗ ವೇಗವಾಗಿ ವೀಕ್ಷಣೆಯ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಲೇ ಇದೆ.

ಅಶ್ವತ್ಥ್ ಸ್ಯಾಮುಯಲ್ ನಿರ್ದೇಶನದ, ಹರೀಶ್ ಬಂಗೇರ ನಿರ್ಮಾಣ ಮಾಡಿರೋ ಅನುಕ್ತ ಚಿತ್ರವೀಗ ಬೇಗನೆ ಚಿತ್ರೀಕರಣ ಮುಗಿಸಿಕೊಂಡು ಬಿಡುಗಡೆಯ ಹಾದಿಯಲ್ಲಿದೆ. ಹೀಗೆ ವೇಗವಾಗಿ ಚಿತ್ರೀಕರಣ ಮುಗಿಸಿಕೊಳ್ಳೋದಕ್ಕೆ ಕಾರಣ ಪ್ಲಾನಿಂಗ್. ಕೇವಲ ಇಪ್ಪತ್ತೆಂಟು ದಿನಗಳಲ್ಲಿ ಚಿತ್ರೀಕರಣ ಸಮಾಪ್ತಿ ಮಾಡಿಕೊಂಡಿದ್ದರ ಹಿಂದೆ ಎಂಟು ತಿಂಗಳ ಶ್ರಮವಿದೆಯಂತೆ. ತುಳುನಾಡಿನ ಸಂಸ್ಕøತಿ ಅಂದರೆ ಮೊಗೆದಷ್ಟೂ ಮುಗಿಯದ ಅಕ್ಷಯ ಪಾತ್ರೆಯಂಥಾದ್ದು. ಈ ಬಗ್ಗೆ ಪ್ರೇಕ್ಷಕರ ಕೌತುಕ ತಣಿಯುವುದೇ ಇಲ್ಲ. ಅಂಥಾದ್ದರಲ್ಲಿ ಅದನ್ನೇ ಜೀವಾಳವಾಗಿಸಿಕೊಂಡಿರೋ ಅನುಕ್ತ ಬಗ್ಗೆ ಸಹಜವಾಗಿಯೇ ಪ್ರೇಕ್ಷಕರು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈಗ ಬೇರೆ ಭಾಷೆಗಳಿಗೂ ರೀಮೇಕ್ ಗಾಗಿ ಬಹು ಬೇಡಿಕೆ ಹೊಂದಿರುವ ಅನುಕ್ತ ಬಿಡುಗಡೆಗೆ ಸಜ್ಜುಗೊಂಡಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *