ಸೀಮಂತ ಸಂಭ್ರಮದಲ್ಲಿ `ನೀಲಕಂಠ’ ನಟಿ ನಮಿತಾ

ಸೌತ್ ಸಿನಿರಂಗದಲ್ಲಿ ಸಾಕಷ್ಟು ಸಿನಿಮಾಗಳ ಮೂಲಕ ಸಂಚಲನ ಮೂಡಿಸಿದ ನಾಯಕಿ ನಮಿತಾ, ಕನ್ನಡ ಸಿನಿಮಾಗಳಿಂದ ಕೂಡ ಕನ್ನಡ ಸಿನಿಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆ. ಸದ್ಯ ತಾಯ್ತನದ ಖುಷಿಯ ಕ್ಷಣಗಳನ್ನ ಕಳೆಯುತ್ತಿದ್ದಾರೆ. ಇತ್ತೀಚೆಗಷ್ಟೇ ನಟಿ ನಮಿತಾ ಸೀಮಂತದ ಶಾಸ್ತ್ರದ ಸಂಭ್ರಮ ಅದ್ದೂರಿಯಾಗಿ ನೆರವೇರಿದ್ದು, ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ತೆಲುಗು, ತಮಿಳು ಸಿನಿಮಾಗಳ ಜತೆ ಕನ್ನಡದ `ನೀಲಕಂಠ’ ಮತ್ತು `ಹೂ’ ಚಿತ್ರದಲ್ಲಿ ರವಿಚಂದ್ರನ್ ಜತೆ ನಮಿತಾ ಡ್ಯುಯೇಟ್ ಹಾಡಿದ್ದರು. ಹಾಗಾಗಿ ಕನ್ನಡ ಸಿನಿಪ್ರೇಕ್ಷಕರ ಮನದಲ್ಲಿ ನಮಿತಾ ಸ್ಥಾನ ಗಿಟ್ಟಿಸಿಕೊಂಡರು. ಚಿತ್ರರಂಗ ಜತೆ ರಾಜಕೀಯ ರಂಗದಲ್ಲೂ ನಮಿತಾ ಗುರುತಿಸಿಕೊಂಡಿದ್ದಾರೆ. ಇದನ್ನೂ ಓದಿ:ಸ್ವಿಮ್ ಸೂಟ್‌ನಲ್ಲಿ ಹಾಟ್‌ ಆಗಿ ಕಾಣಿಸಿಕೊಂಡ `ರಾ’ಗಿಣಿ

ಬಳಿಕ 2017ರಲ್ಲಿ ಉದ್ಯಮಿ ವೀರೇಂದ್ರ ಚೌಧರಿ ಜತೆ ಹಸೆಮಣೆ ಏರಿದ್ದರು. ಇತ್ತೀಚೆಗೆ ತಮ್ಮ ಹುಟ್ಟುಹಬ್ಬದಂದು ತಾವು ತಾಯಿಯಾಗುತ್ತಿರುವ ವಿಚಾರವನ್ನು ನಮಿತಾ ಹೇಳಿಕೊಂಡಿದ್ದರು. ಈಗ ಸೀಮಂತ ಶಾಸ್ತ್ರದ ಸಂಭ್ರಮದಲ್ಲಿದ್ದಾರೆ. ಸೀಮಂತದಲ್ಲಿ ತುಂಬಾ ಮುದ್ದಾಗಿ ಕಾಣಿಸಿಕೊಂಡಿದ್ದಾರೆ.

ಇತ್ತೀಚೆಗೆ ನಟಿ ನಮಿತಾ ಆಪ್ತರು, ಕುಟುಂಬಸ್ಥರ ಸಮ್ಮುಖದಲ್ಲಿ ಸೀಮಂತ ಶಾಸ್ತ್ರವನ್ನು ಅದ್ದೂರಿಯಾಗಿ ಆಚರಿಸಿಕೊಂಡಿದ್ದಾರೆ. ನಮಿತಾ ಅವರ ಆಪ್ತ ಚಿತ್ರರಂಗದ ಸ್ನೇಹಿತರು ಭಾಗಿಯಾಗಿ ಶುಭಹಾರೈಸಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ಇನ್ನು ಮದುವೆಯ ಬಳಿಕವೂ ಚಿತ್ರರಂಗದಲ್ಲಿ ಆಕ್ಟೀವ್ ಆಗಿದ್ದ ಬಹುಭಾಷಾ ನಟಿ ನಮಿತಾ ಈಗ ಹೊಸ ಅತಿಥಿಯ ಬರುವಿಕೆಯ ಖುಷಿಯಲ್ಲಿದ್ದಾರೆ. ತುಂಬು ಗರ್ಭೀಣಿಯಾಗಿರುವ ನಟಿ ಸದ್ಯ ತಾಯ್ತನದ ಖುಷಿಯಲ್ಲಿದ್ದಾರೆ. ಮಗುವಿನ ಆಗಮನದ ನಂತರ ಮತ್ತೆ ಚಿತ್ರರಂಗದಲ್ಲಿ ಆಕ್ಟೀವ್ ಆಗಲಿದ್ದಾರೆ. ಮತ್ತೆ ಚಿತ್ರಗಳಲ್ಲಿ ನಮಿತಾ ಕಾಣಿಸಿಕೊಳ್ಳಲಿದ್ದಾರೆ.

Live Tv

Comments

Leave a Reply

Your email address will not be published. Required fields are marked *