Thalapathy 69: ವಿಜಯ್‌ ಜೊತೆ ಕನ್ನಡದ ನಟಿ ಪ್ರಿಯಾಮಣಿ ಹೊಸ ಸಿನಿಮಾ

ಹುಭಾಷಾ ನಟಿ, ಕನ್ನಡತಿ ಪ್ರಿಯಾಮಣಿ (Priyamani) ಸದ್ಯ ಸೌತ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ‘ಜವಾನ್’ (Jawan) ಸಿನಿಮಾದ ಸಕ್ಸಸ್ ನಂತರ ನಟಿಯ ಬೇಡಿಕೆ ಹೆಚ್ಚಾಗಿದೆ. ಇದೀಗ ವಿಜಯ್ ನಟನೆಯ ಕೊನೆಯ ಸಿನಿಮಾದಲ್ಲಿ ಪ್ರಿಯಾಮಣಿ ಕೂಡ ನಟಿಸುತ್ತಿದ್ದಾರೆ. ನಟಿ ಕೂಡ ಚಿತ್ರತಂಡ ಸೇರ್ಪಡೆಯಾಗಿರುವ ಬಗ್ಗೆ ತಂಡ ಅಧಿಕೃತ ಘೋಷಣೆ ಮಾಡಿದೆ.

ಇದೇ ಮೊದಲ ಬಾರಿಗೆ ನಟಿ ಪ್ರಿಯಾಮಣಿ ಅವರು ವಿಜಯ್ ದಳಪತಿ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ಅವರ ಪಾತ್ರದ ಬಗ್ಗೆ ರಿವೀಲ್ ಮಾಡಿಲ್ಲ. ಆದರೆ ಪವರ್‌ಫುಲ್ ಪಾತ್ರದಲ್ಲಿ‌ ನಟಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಈಗಾಗಲೇ ಪೂಜಾ ಹೆಗ್ಡೆ (Pooja Hegde), ಮಮಿತಾ ಬೈಜು (Mamitha Baiju), ಪ್ರಕಾಶ್ ರಾಜ್ ಚಿತ್ರತಂಡ ಸೇರಿಕೊಂಡ ಬೆನ್ನಲ್ಲೇ ಪ್ರಿಯಾಮಣಿ ಕೂಡ ‘ದಳಪತಿ 69’ ತಂಡ ಸೇರಿಕೊಂಡಿದ್ದಾರೆ. ಇದನ್ನೂ ಓದಿ:ರಾಷ್ಟ್ರ ಪ್ರಶಸ್ತಿ ವಿಜೇತ ‘ಮಧ್ಯಂತರ’ ಕಿರುಚಿತ್ರಕ್ಕೆ ಜಯಮಾಲಾ ಮೆಚ್ಚುಗೆ

 

View this post on Instagram

 

A post shared by KVN Productions (@kvn.productions)

ಇನ್ನೂ ಇತ್ತೀಚಿನ ದಿನಗಳಲ್ಲಿ ಅವರಿಗೆ ಬಾಲಿವುಡ್‌ನಿಂದ ಉತ್ತಮ ಅವಕಾಶಗಳು ಸಿಗುತ್ತಿವೆ. ಪ್ರಿಯಾಮಣಿ ನಟಿಸಿರುವ ಜವಾನ್, ಆರ್ಟಿಕಲ್ 370, ಮೈದಾನ್ ಚಿತ್ರಗಳು ಸಕ್ಸಸ್ ಕಂಡಿವೆ. ತೆಲುಗು, ತಮಿಳು, ಹಿಂದಿಯಲ್ಲಿ ಅವರಿಗೆ ಬೇಡಿಕೆ ಹೆಚ್ಚಾಗಿದೆ.

ಅಂದಹಾಗೆ, ಸ್ಯಾಂಡಲ್‌ವುಡ್‌ನಲ್ಲಿ ರಾಮ್, ಅಣ್ಣಾಬಾಂಡ್, ಚಾರುಲತಾ, ಅಂಬರೀಶ, ಕಲ್ಪನಾ 2 ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.