ತಮಿಳಿನತ್ತ ನಟಿ- ಬಿಗ್ ಚಾನ್ಸ್ ಬಾಚಿಕೊಂಡ ಮೇಘಾ ಶೆಟ್ಟಿ

‘ಜೊತೆ ಜೊತೆಯಲಿ’ ಸೀರಿಯಲ್ ಖ್ಯಾತಿಯ ಮೇಘಾ ಶೆಟ್ಟಿ (Megha Shetty) ಕಾಲಿವುಡ್‌ನತ್ತ (Kollywood) ಮುಖ ಮಾಡಿದ್ದಾರೆ. ಕನ್ನಡದಲ್ಲೇ ಹಲವು ಅವಕಾಶಗಳು ಇರುವಾಗಲೇ ತಮಿಳಿನಲ್ಲಿ ಬಿಗ್ ಆಫರ್‌ವೊಂದು ಸಿಕ್ಕಿದೆ. ಇದನ್ನೂ ಓದಿ:ಸತತ 3 ಸಿನಿಮಾ, 500 ಕೋಟಿ ಕಲೆಕ್ಷನ್: ಯಾರು ಮಾಡಿರದ ಸಾಧನೆ ಮಾಡಿದ ರಶ್ಮಿಕಾ ಮಂದಣ್ಣ

ತಮಿಳಿನ ನಟ ಕಮ್ ನಿರ್ದೇಶಕ ಶಶಿಕುಮಾರ್ ಅವರ ಹೊಸ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಅವಕಾಶವನ್ನು ಮೇಘಾ ಶೆಟ್ಟಿ ಗಿಟ್ಟಿಸಿಕೊಂಡಿದ್ದಾರೆ. ಈ ಮೂಲಕ ಕಾಲಿವುಡ್‌ಗೆ ಮತ್ತೋರ್ವ ಕನ್ನಡತಿ ಪಾದಾರ್ಪಣೆ ಮಾಡುತ್ತಿದ್ದಾರೆ. ಇದೀಗ ಈ ಚಿತ್ರದ ಮುಹೂರ್ತ ಸಮಾರಂಭ ಸರಳವಾಗಿ ಜರುಗಿದೆ. ಈ ಪ್ರಾಜೆಕ್ಟ್ ಕುರಿತು ಮಾಹಿತಿಯನ್ನು ಸೋಶಿಯಲ್ ಮೀಡಿಯಾದಲ್ಲಿ ನಟಿ ಹಂಚಿಕೊಂಡಿದ್ದಾರೆ.

ಸದ್ಯ ಹೊಸ ಬಗೆಯ ಪಾತ್ರ ಹಾಗೂ ಕಥೆಗೆ ಮೇಘಾ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಕನ್ನಡದ ಆಪರೇಷನ್ ಲಂಡನ್ ಕೆಫೆ, ಗ್ರಾಮಾಯಣ, ಚೀತಾ ಸೇರಿದಂತೆ ಹಲವು ಚಿತ್ರಗಳು ನಟಿಯ ಕೈಯಲ್ಲಿವೆ.

ಅಂದಹಾಗೆ, ‘ಜೊತೆ ಜೊತೆಯಲಿ’ ಸೀರಿಯಲ್‌ನಲ್ಲಿ ಅನಿರುದ್ಧಗೆ ನಾಯಕಿಯಾಗಿ ಕಿರುತೆರೆ ಪ್ರವೇಶಿಸಿದರು. ಆ ನಂತರ `ತ್ರಿಬಲ್ ರೈಡಿಂಗ್’, ದಿಲ್ ಪಸಂದ್, ಕೈವ ಸಿನಿಮಾಗಳಲ್ಲಿ ಮೇಘಾ ನಟಿಸಿದ್ದಾರೆ.