ಅಶ್ಲೀಲ ಮೆಸೇಜ್‌ಗೆ ಬೇಸತ್ತ ನಟಿ- 1 ಸಾವಿರ ಅಕೌಂಟ್ ಬ್ಲಾಕ್ ಮಾಡಿದ ಜ್ಯೋತಿ ರೈ

ರಾವಳಿ ಬೆಡಗಿ ಜ್ಯೋತಿ ರೈ (Jyothi Rai) ಸದ್ಯ ಕಾಲಿವುಡ್ (Kollywood) ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಅಶ್ಲೀಲ ಮೆಸೇಜ್ ಮಾಡುವವರಿಗೆ ನಟಿ ಖಡಕ್ ಆಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಕೆಟ್ಟ ಸಂದೇಶ ಕಳುಹಿಸುತ್ತಿದ್ದ 1 ಸಾವಿರ ಅಕೌಂಟ್ ಅನ್ನು ನಟಿ ಬ್ಲಾಕ್ ಮಾಡುವ ಮೂಲಕ ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ.

cropped-JYOTHI-RAI-4.jpg

ಇನ್ಸ್ಟಾಗ್ರಾಂ ಬ್ಲಾಕ್ ಫೀಚರ್ ಅನ್ನು ನಾನು ಉತ್ತಮವಾಗಿ ಬಳಸಿಕೊಂಡಿದ್ದೇನೆ. ಕಾಮೆಂಟ್ ಸೆಕ್ಷನ್‌ನಲ್ಲಿ ಕೆಟ್ಟ ಹಾಗೂ ಅಗೌರವದಿಂದ ಮೆಸೇಜ್ ಮಾಡುವ ಮೂಲಕ ಕೆಟ್ಟ ವರ್ತನೆ ತೋರಿದ್ದ 1 ಸಾವಿರಕ್ಕೂ ಅಧಿಕ ವೈಯಕ್ತಿಕ ಖಾತೆಗಳನ್ನು ನಾನು ತೆಗೆದು ಹಾಕಿದ್ದೇನೆ. ಅವರೊಂದಿಗೆ ಮಾತುಕತೆ ಮಾಡುವ ಮೂಲಕ ಚರ್ಚೆ ಮಾಡೋದು ನನಗೆ ಇಷ್ಟವಿಲ್ಲ. ಪಾಸಿಟಿವ್ ಆಗಿ ಪರಿಸರವನ್ನು ರಚನೆ ಮಾಡಲು ನೀವು ಕೂಡ ಇಂಥ ಟೂಲ್‌ಗಳನ್ನು ಬಳಕೆ ಮಾಡಿ ಎಂದಿದ್ದಾರೆ. ಈ ವಿಚಾರದಲ್ಲಿ ಯಾರಾದರೂ ಕಲಿಯಬೇಕು ಎಂದಿದ್ದರೆ, ಅದಕ್ಕೆ ನಾನು ಸ್ವಾಗತ ನೀಡುತ್ತಿದ್ದೇನೆ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಜ್ಯೋತಿ ರೈ ಬರೆದುಕೊಂಡಿದ್ದಾರೆ. ಇದನ್ನೂ ಓದಿ:ನಮ್ಮ ಮೇಲೆ ಅತ್ಯಾಚಾರ ಮಾಡೋದನ್ನ ಈಗಲಾದ್ರೂ ನಿಲ್ಲಿಸಿ; ಟ್ರೈನಿ ವೈದ್ಯೆ ಕೇಸ್‌ ಬಗ್ಗೆ ಪೂನಂ ಪಾಂಡೆ ಪ್ರತಿಕ್ರಿಯೆ

ಅಂದಹಾಗೆ, ಇತ್ತೀಚೆಗೆ ಜ್ಯೋತಿ ರೈ ಬಿಗ್ ಬಾಸ್ ಬರುವ ಬಗ್ಗೆ ಹಬ್ಬಿದ್ದ ವದಂತಿಗೆ ಕ್ಲ್ಯಾರಿಟಿ ಕೊಟ್ಟಿದ್ದಾರೆ. ನಾನು ಕನ್ನಡ ‘ಬಿಗ್ ಬಾಸ್’ ಶೋನಲ್ಲಿ ಸ್ಪರ್ಧಿಸುವ ಬಗ್ಗೆ ಅನೇಕರು ನನ್ನನ್ನು ಕೇಳ್ತಿದ್ದಾರೆ. ನನಗೆ ಬಿಗ್ ಬಾಸ್ ತಂಡದಿಂದ ಆಫರ್ ಬಂದಿತ್ತು. ನಾನು ಅದನ್ನು ಗೌರವದಿಂದಲೇ ತಿರಸ್ಕರಿಸಿದ್ದೇನೆ. ಈ ಮೊದಲೇ ನಾನು ಕೆಲವು ಕೆಲಸಗಳನ್ನು ಒಪ್ಪಿಕೊಂಡಿದ್ದೇನೆ. ಹೀಗಾಗಿ ಆಫರ್ ತಿರಸ್ಕರಿಸಿದ್ದೇನೆ. ಅವಕಾಶಕ್ಕಾಗಿ ಹಾಗೂ ನನ್ನ ಅಭಿಮಾನಿಗಳ ಬೆಂಬಲಕ್ಕೆ ನಾನು ಸದಾ ಚಿರಋಣಿ ಎಂದು ಜ್ಯೋತಿ ರೈ ಬರೆದಿದ್ದಾರೆ.

ಇನ್ನೂ ಕನ್ನಡದ ಗೆಜ್ಜೆ ಪೂಜೆ, ಮೂರು ಗಂಟು, ಬಂದೇ ಬರತಾವ ಕಾಲ ಸೇರಿದಂತೆ ಹಲವು ಸೀರಿಯಲ್‌ಗಳಲ್ಲಿ ಜ್ಯೋತಿ ನಟಿಸಿದ್ದಾರೆ. ಸಿನಿಮಾಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ.