ರಾಯಚೂರು: ಸ್ಯಾಂಡಲ್‍ವುಡ್ ನ ಹಿರಿಯ ಚಿತ್ರನಟ ದೊಡ್ಡಣ್ಣ ಅಸ್ವಸ್ಥರಾಗಿದ್ದು, ಅವರನ್ನು ರಾಯಚೂರಿನ ಶಕ್ತಿನಗರದ ಕೆಪಿಸಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ರಾಯಚೂರು ಸಮೀಪದ ದೇವಸಗೂರಿನಲ್ಲಿರುವ ಸೂಗೂರೇಶ್ವರ ದೇವಸ್ಥಾನಕ್ಕೆ ನಟ ದೊಡ್ಡಣ್ಣ ಬಂದಿದ್ದರು. ಈ ವೇಳೆ ಚಳಿ ಜ್ವರದಿಂದ ಬಳಲುತ್ತಿದ್ದು, ನಟ ದೊಡ್ಡಣ್ಣ ತಾವು ಉಳಿದುಕೊಂಡಿದ್ದ ವಸತಿ ಗೃಹದ ಬಾತ್ ರೂಮ್‍ನಲ್ಲಿ ಲೋ ಬಿಪಿಯಾಗಿದ್ದರಿಂದ ಕುಸಿದು ಬಿದ್ದಿದ್ದರು. ಇದನ್ನೂ ಓದಿ: ಶೂಟಿಂಗ್ ವೇಳೆ ಕುಸಿದು ಬಿದ್ದ ದೊಡ್ಡಣ್ಣ.. ಆಗಿದ್ದು ಏನು?

ಕೂಡಲೇ ಅವರನ್ನು ರಾಯಚೂರಿನ ಶಕ್ತಿನಗರದ ಕೆಪಿಸಿ ಆಸ್ಪತ್ರೆಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯ ಡಾ.ರಮೇಶ್ ಜಗ್ಲಿ ಅವರು ಚಿಕಿತ್ಸೆ ನೀಡಿದ್ದಾರೆ. ಆದರೆ ದೊಡ್ಡಣ್ಣ ಅವರ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶಕ್ತಿನಗರದ ಆಸ್ಪತ್ರೆಯಿಂದ ಅಂಬುಲೆನ್ಸ್ ಮೂಲಕ ದೊಡ್ಡಣ್ಣ ಅವರನ್ನು ಬೆಂಗಳೂರಿಗೆ ಕರೆತರಲಾಗುತ್ತಿದೆ.

ದೇವಸಗೂರಿನಲ್ಲಿರುವ ಸೂಗೂರೇಶ್ವರ ಅವರ ಮನೆಯ ದೇವರಾಗಿದ್ದರಿಂದ ಸೋಮವಾರ ದೊಡ್ಡಣ್ಣ ಅವರ ಕುಟುಂಬದಬರ ಜೊತೆ ಸೋಮವಾರ ಬಂದಿದ್ದರು. ಶ್ರಾವಣವಾಗಿದ್ದರಿಂದ ವಿಶೇಷ ಪೂಜೆ ಮಾಡಿಸಿ ಶಕ್ತಿನಗರದ ವಸತಿ ಗೃಹದಲ್ಲಿ ತಂಗಿದ್ದರು. ನಿನ್ನೆಯೂ ಕೂಡ ಅವರ ಆರೋಗ್ಯದಲ್ಲಿ ಏರುಪೇರು ಕಂಡಿದ್ದು, ಲೋ ಬಿಪಿಯಿಂದಾಗಿ ಬಾತ್‍ರೂಮಿನಲ್ಲಿ ಕುಸಿದು ಬಿದ್ದಿದ್ದರು. ಇಂದು ಬೆಳಗ್ಗೆ ಶಕ್ತಿನಗರದ ಕೆಪಿಸಿ ಆಸ್ಪತ್ರೆಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ 45 ನಿಮಿಷ ಚಿಕಿತ್ಸೆ ಪಡೆದು ಈಗ ಮತ್ತೆ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಕೂಡಲೇ ಅಂಬುಲೆನ್ಸ್ ಮೂಲಕ ಬೆಂಗಳೂರಿಗೆ ಕರೆತರಲಾಗುತ್ತಿದೆ.
ದೊಡ್ಡಣ್ಣ ಅವರಿಗೆ ಲೋ ಬಿಪಿ ಆಗಿದ್ದು, ಕುಸಿದು ಬಿದ್ದಿದ್ದಾರೆ. ಈ ಆಸ್ಪತ್ರೆಯಲ್ಲಿ ಸರಿಯಾದ ಸೌಲಭ್ಯವಿಲ್ಲ. ಆದ್ದರಿಂದ ಉತ್ತಮ ಚಿಕಿತ್ಸೆ ನೀಡುವ ಸಲುವಾಗಿ ಬೆಂಗಳೂರಿಗೆ ರವಾನಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply