ಯಾರು ಸ್ತ್ರೀಯರಿಗೆ ಅಪಮಾನ ಮಾಡುತ್ತಾರೋ ಅವರ ಪತನ ನಿಶ್ಚಿತ – ಕಂಗನಾ ಹಳೇ ವೀಡಿಯೋ ವೈರಲ್

ಮುಂಬೈ: ಮಹಾ ವಿಕಾಸ ಅಘಾಡಿ ಸರ್ಕಾರ ಪತನಗೊಳ್ಳುತ್ತಿದ್ದಂತೆ ಬಾಲಿವುಡ್ ನಟಿ ಕಂಗನಾ ರಣಾವತ್ ಈ ಹಿಂದೆ ಹೇಳಿದ್ದ ಮಾತೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಸುಶಾಂತ್ ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಕಂಗನಾ ರಣಾವತ್ ಕಿಡಿಕಾರಿದ್ದರು. ಈ ತಿಕ್ಕಾಟ ಜೋರಾದ ಸಮಯದಲ್ಲೇ ಕಂಗನಾ ರಣಾವತ್ ಮನೆ ಅಕ್ರಮವಾಗಿ ನಿರ್ಮಿಸಲಾಗಿದೆ ಎಂದು ಈ ಹಿಂದೆ ಬಿಎಂಸಿ ಮನೆಯನ್ನು ಕೆಡವಿತ್ತು. ಇದಕ್ಕೆ ಅಂದು ತಿರುಗೇಟು ಕೊಟ್ಟಿದ್ದ ನಟಿ, ನೆನಪಿರಲಿ ಉದ್ಧವ್ ಠಾಕ್ರೆಜೀ ಇಂದು ನನ್ನ ಮನೆ ಕೆಡವಿದ್ದೀರಿ. ನೋಡುತ್ತಾ ಇರಿ. ಮುಂದೊಂದು ದಿನ ನಿಮ್ಮ ದುರಹಂಕಾರ ಕೂಡ ನಾಶವಾಗುತ್ತದೆ ಎಂದಿದ್ದರು. ಇದನ್ನೂ ಓದಿ: ಸರ್ಕಾರ ರಚನೆ ಅನುಮತಿ ಕೇಳಲಿದ್ದಾರೆ ಫಡ್ನವಿಸ್‌ – ಶಿಂಧೆ ಟೀಂ ಸೇರಿದ ಮತ್ತೊಬ್ಬ ಶಾಸಕ

ಈ ವೀಡಿಯೋದ ಜೊತೆ ಮತ್ತೊಂದು ವೀಡಿಯೋ ವೈರಲ್ ಆಗುತ್ತಿದೆ. ನೀವು ನಮ್ಮ ಇತಿಹಾಸದಲ್ಲಿ ಗಮನಿಸಿರಬಹುದು, ಯಾರು ಸ್ತ್ರೀಯರಿಗೆ ಅಪಮಾನ ಮಾಡುತ್ತಾರೋ ಅವರ ಪತನ ನಿಶ್ಚಿತವಾಗಿರುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸೀತೆಗೆ ಅವಮಾನ ಮಾಡಿದ ರಾವಣ, ದ್ರೌಪದಿಗೆ ಅವಮಾನ ಮಾಡಿದ ಕೌರವರು ನಾಶವಾದರು. ನಾನು ಆ ದೇವಿಗಳಿಗೆ ಸಮಾನಳಲ್ಲ. ಆದರೆ ನಾನು ಕೂಡ ಮಹಿಳೆ. ನಾನು ನನ್ನ ಆಲೋಚನೆಗೆ ಬಂದಿದ್ದನ್ನು ಮಾತನಾಡುತ್ತೇನೆ. ನಾನು ಒಬ್ಬ ಮಹಿಳೆಯಾಗಿ ನನ್ನನ್ನು ನಾನು ರಕ್ಷಿಸಿಕೊಳ್ಳುತ್ತೇನೆ. ನನಗೂ ಈಗ ಅವಮಾನವಾಗಿದೆ. ಒಂದು ಅರ್ಥ ಮಾಡಿಕೊಳ್ಳಬೇಕಾದ ವಿಚಾರವೆಂದರೆ ಯಾವತ್ತು ನೀವು ಮಹಿಳೆಯರಿಗೆ ಮಾರ್ಯದೆ ನೀಡುವುದಿಲ್ಲವೋ ನಿಮ್ಮ ನಾಶ ಕಂಡಿತವಾಗಿರುತ್ತದೆ ಎಂದು ಹೇಳಿದ್ದರು. ಇದನ್ನೂ ಓದಿ: ಶಿವಸೇನೆಯ ಉಳಿವಿಗಾಗಿ ಮೈತ್ರಿಯಿಂದ ಹೊರಬರುವುದು ಅನಿವಾರ್ಯ: ಏಕನಾಥ್ ಶಿಂಧೆ

ಮಹಾ ವಿಕಾಸ ಅಘಾಡಿ ಸರ್ಕಾರ ಅಲ್ಪ ಮತಕ್ಕೆ ಕುಸಿದ ಬೆನ್ನಲ್ಲೇ ಸಿಎಂ ಉದ್ಧವ್ ಠಾಕ್ರೆ ಸಿಎಂ ಅಧಿಕೃತ ನಿವಾಸವನ್ನು ತೊರೆದಿದ್ದಾರೆ. ಸಿಎಂ ನಿವಾಸ ತೊರೆಯುತ್ತಿರುವ ವೀಡಿಯೋ ಜೊತೆ ಕಂಗನಾ ಹೇಳಿಕೆ ಹೇಳಿಕೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Live Tv

Comments

Leave a Reply

Your email address will not be published. Required fields are marked *