‘ಸೆಲ್ಫೀ’ ಚಿತ್ರದ ಫಸ್ಟ್ ಡೇ ಕಲೆಕ್ಷನ್ ಬಹಿರಂಗಪಡಿಸಿದ ಕಂಗನಾ: ಅಕ್ಷಯ್ ಚಿತ್ರಗಳಿಸಿದ್ದು 10 ಲಕ್ಷವಾ?

ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut) ಮತ್ತೆ ನಿರ್ಮಾಪಕ ಕರಣ್ ಜೋಹಾರ್ (Karan Johar) ವಿರುದ್ಧ ಯುದ್ಧ ಸಾರಿದ್ದಾರೆ. ಕರಣ್ ಕೂಡ ಹಣ ಹೂಡಿರುವ ‘ಸೆಲ್ಫೀ’ (Selfie) ಸಿನಿಮಾ ನಿನ್ನೆ ರಿಲೀಸ್ ಆಗಿದ್ದು, ಈ ಸಿನಿಮಾದ ಮೊದಲ ದಿನದ ಗಳಿಕೆ ಬಗ್ಗೆ ಕಂಗನಾ ಮಾತನಾಡಿದ್ದಾರೆ. ಅಕ್ಷಯ್ ಕುಮಾರ್ ನಟನೆಯ ಈ ಸಿನಿಮಾ ಈ ಪ್ರಮಾಣದಲ್ಲಿ ಹೀನಾಯವಾಗಿ ಸೋಲ್ತಿದೆಯಾ ಎಂದು ಅನುಮಾನ ಬರುವಂತೆ ಹಣದ ಲೆಕ್ಕಹಾಕಿದ್ದಾರೆ.

ಬಾಲಿವುಡ್ ಸಿನಿ ಪಂಡಿತರ ಲೆಕ್ಕಾಚಾರದಂತೆ ಸೆಲ್ಫೀ ಸಿನಿಮಾದ ಫಸ್ಟ್ ಡೇ ಕಲೆಕ್ಷನ್ ಮೂರು ಕೋಟಿ ಎಂದು ಅಂದಾಜಿಸಲಾಗಿದೆ. ಅಕ್ಷಯ್ ವೃತ್ತಿ ಜೀವನದಲ್ಲಿ ಅತ್ಯಂತ ಕಡಿಮೆ ಹಣ ಗಳಿಸಿದ ಸಿನಿಮಾ ಎನ್ನುವ ಅಪಕೀರ್ತಿಗೂ ಕಾರಣವಾಗಿದೆ. ಈ ನಡುವೆ ಉರಿವ ಬೆಂಕಿಗೆ ತುಪ್ಪ ಹಾಕುವಂತೆ ಕಂಗನಾ ತಮ್ಮದೇ ಆದ ಲೆಕ್ಕಾಚಾರವನ್ನು ಕೊಟ್ಟಿದ್ದಾರೆ. ಈ ಸಿನಿಮಾ ಮೊದಲ ದಿನ ಗಳಿಸಿದ್ದು ಕೇವಲ ಹತ್ತು ಲಕ್ಷ ರೂಪಾಯಿ ಮಾತ್ರ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಹೊಂಬಾಳೆ ಫಿಲ್ಮ್ ಯುವ ಚಿತ್ರಕ್ಕೆ ರುಕ್ಮಿಣಿ ವಸಂತ್ ನಾಯಕಿನಾ? ಸ್ಪಷ್ಟನೆ ನೀಡಿದ ನಟಿ

ಕಂಗನಾ ನಟನೆಯ ‘ಧಾಕಡ್’ ಸಿನಿಮಾ ರಿಲೀಸ್ ಆದಾಗ ಬಾಲಿವುಡ್ ನ ಅನೇಕರು  ಚಿತ್ರವನ್ನು ಸೋಲಿಸಲು ನಾನಾ ರೀತಿಯಲ್ಲಿ ಪ್ರಯತ್ನಪಟ್ಟರಂತೆ. ಮೊದಲ ದಿನದ ಕಲೆಕ್ಷನ್ ಬಗ್ಗೆ ಮಾತನಾಡಿದರಂತೆ. ಮೊದಲ ದಿನವೇ ಸಿನಿಮಾ ಸೋತಿದೆ ಎಂದು ಅಪಪ್ರಚಾರ ಮಾಡಿದರಂತೆ. ಆದರೆ, ಸೆಲ್ಫೀ ಬಗ್ಗೆ ಯಾರೂ, ಏಕೆ ಮಾತನಾಡುತ್ತಿಲ್ಲ ಎಂದು ಕಂಗನಾ ಪ್ರಶ್ನೆ ಮಾಡಿದ್ದಾರೆ. ತಮಗೆ ಅಪಹಾಸ್ಯ ಮಾಡಿದಂತೆ ಸೆಲ್ಫೀ ತಂಡಕ್ಕೆ ಯಾರೂ ಏಕೆ ಅಪಹಾಸ್ಯ ಮಾಡುತ್ತಿಲ್ಲ ಎಂದು ಕೇಳಿದ್ದಾರೆ.

Comments

Leave a Reply

Your email address will not be published. Required fields are marked *