‘ಧಾಕಡ್’ ಸೋಲಿಗೆ ಕಂಗೆಟ್ಟ ಕಂಗನಾ ರಣಾವತ್ : ವೀಕೆಂಡ್ ನಲ್ಲೂ ವೀಕ್ ಕಲೆಕ್ಷನ್

ಮೇ 20 ರಂದು ರಿಲೀಸ್ ಆಗಿರುವ ಕಂಗನಾ ರಣಾವತ್ ನಟನೆಯ ‘ಧಾಕಡ್’ ಸಿನಿಮಾ ಅಂದುಕೊಂಡಷ್ಟು ಬಾಕ್ಸ್ ಆಫೀಸಿನಲ್ಲಿ ಕಲೆಕ್ಷನ್ ಮಾಡುತ್ತಿಲ್ಲ. ಸಾಮಾನ್ಯ ದಿನದಲ್ಲಿ ಮಾತ್ರವಲ್ಲ, ವಾರಾಂತ್ಯದಲ್ಲೂ ಅದು ದುಡ್ಡು ಮಾಡದೇ ಇರುವುದಕ್ಕೆ ಸ್ವತಃ ಕಂಗನಾ ಕಂಗೆಟ್ಟಿದ್ದಾರೆ. ಹಾಕಿದ ಬಂಡವಾಳವಲ್ಲ, ಕಂಗನಾಗೆ ಕೊಟ್ಟಿರುವ ಸಂಭಾವನೆ ಕೂಡ ಬರುವುದು ಅನುಮಾನ ಎನ್ನಲಾಗುತ್ತಿದ್ದು, ನಿರ್ಮಾಪಕರು ಕಂಗಾಲಾಗಿದ್ದಾರೆ. ಇದನ್ನೂ ಓದಿ : ಶೀಘ್ರದಲ್ಲೇ ಶಿವರಾಜ್ ಕುಮಾರ್ ಮತ್ತು ಪ್ರಭುದೇವ ಸಿನಿಮಾ ಶುರು : ಯೋಗರಾಜ್ ಭಟ್ ನಿರ್ದೇಶಕ

ಕಂಗನಾ ರಣಾವತ್ ವೃತ್ತಿ ಜೀವನದಲ್ಲಿ ಅದ್ಭುತ ಸಿನಿಮಾ ಇದಾಗಲಿದೆ ಎಂದು ನಂಬಲಾಗುತ್ತು. ಸಿನಿಮಾದ ಪ್ರಚಾರದ ವೇಳೆಯೂ ಅದೇ ಮಾತುಗಳನ್ನು ಚಿತ್ರತಂಡ ಆಡಿತ್ತು. ಇದೊಂದು ಸಾಹಸ ಪ್ರಧಾನ ಮತ್ತು ಸಸ್ಪೆನ್ಸ್, ಥ್ರಿಲ್ಲರ್ ಮಾದರಿಯ ಚಿತ್ರವಾಗಿದ್ದರಿಂದ ಬಾಕ್ಸ್ ಆಫೀಸ್ ತುಂಬಿದೆ ಎನ್ನುವ ಮಾತಿತ್ತು. ಅದೆಲ್ಲವನ್ನೂ ಮೂರೇ ದಿನಕ್ಕೆ ಸುಳ್ಳು ಮಾಡಿದೆ ಧಾಕಡ್ ಚಿತ್ರ. ಇದನ್ನೂ ಓದಿ: ವೀಲ್‍ಚೇರ್ ರೋಮಿಯೋಗೆ ಮಯೂರಿ ಜೂಲಿಯಟ್ – ‘ಆ’ ಸವಾಲಿನ ಪಾತ್ರ ಒಪ್ಪಿಕೊಂಡಿದ್ದರ ಹಿಂದಿದೆ ಒಂದು ಕಥಾನಕ!

ಮೊದಲ ದಿನದ ಕಲೆಕ್ಷನ್ ಕೇವಲ 50 ಲಕ್ಷ ರೂಪಾಯಿ ಮಾತ್ರ ಎನ್ನಲಾಗಿದ್ದು, ಈವರೆಗೂ ಒಂದುವರೆ ಕೋಟಿಯಷ್ಟು ಮಾತ್ರ ಆದಾಯ ತಂದಿದೆಯಂತೆ. ಹಾಗಾಗಿ ಕಂಗನಾಗೆ ಕೊಟ್ಟಿರುವ ಸಂಭಾವನೆ ಕೂಡ ವಾಪಸ್ಸು ಬರುವುದು ಅನುಮಾನ ಎನ್ನುತ್ತಿದೆ ಬಾಕ್ಸ್ ಆಫೀಸ್ ರಿಪೋರ್ಟ್. ಇದನ್ನೂ ಓದಿ : ನಂದಮೂರಿ ಬಾಲಕೃಷ್ಣ ಸಿನಿಮಾದಲ್ಲಿ `ಕಿಸ್’ ಬ್ಯೂಟಿ ಶ್ರೀಲೀಲಾ

ಕಂಗನಾ ಸಿನಿಮಾದ ಜೊತೆಗೆ ಭೂಲ್ ಭುಲಯ್ಯ 2 ಸಿನಿಮಾ ರಿಲೀಸ್ ಆಗಿದ್ದು, ಈ ಸಿನಿಮಾವನ್ನು ಪ್ರೇಕ್ಷಕರು ಒಪ್ಪಿಕೊಂಡಿದ್ದಾರೆ. ಬಾಕ್ಸ್ ಆಫೀಸಿನಲ್ಲೂ ಈ ಸಿನಿಮಾ ಮಸ್ತ್ ಕಮಾಯಿ ಮಾಡಿದೆ. ಆದರೆ, ಕಂಗನಾ ಅವರ ಸಿನಿಮಾವನ್ನು ಮಾತ್ರ ಪ್ರೇಕ್ಷಕರು ತಿರಸ್ಕರಿಸಿದ್ದಾರೆ. ಭರ್ಜರಿ ಮನರಂಜನೆ ಮತ್ತು ಒಂದೊಳ್ಳೆ ಕಥೆಯನ್ನು ಈ ಸಿನಿಮಾ ಹೊಂದಿದ್ದರೂ, ಪ್ರೇಕ್ಷಕರ ತಿರಸ್ಕಾರಕ್ಕೆ ಕಾರಣವೇನು ಎನ್ನುವುದನ್ನು ಚಿತ್ರತಂಡ ಹುಡುಕುತ್ತಿದೆಯಂತೆ.

Comments

Leave a Reply

Your email address will not be published. Required fields are marked *