ಮುಂಬೈ: ಮಣಿಕರ್ಣಿಕಾ 2019ರಲ್ಲಿ ತೆರೆಕಂಡ ಐತಿಹಾಸಿಕ ಕಥೆಯುಳ್ಳ ಸಿನಿಮಾ. ವಿವಾದಗಳ ಜೊತೆಯೇ ಸಿನಿಮಾ ಸೆಟ್ಟೇರಿ ತೆರೆಕಂಡು ನೂರು ಕೋಟಿಯ ಕ್ಲಬ್ ಸೇರಿಕೊಂಡಿದೆ. ಝಾನ್ಸಿ ರಾಣಿ ಲಕ್ಷ್ಮಿಭಾಯಿ ಪಾತ್ರದಲ್ಲಿ ಕಾಣಿಸಿಕೊಂಡ ನಟಿ ಬಾಲಿವುಡ್ ಕ್ವೀನ್ ಕಂಗನಾ ರಣಾವತ್ ತಮ್ಮ ಪ್ರಬುದ್ಧತೆಯ ನಟನೆಯ ಮೂಲಕವೇ ಚಿತ್ರಮಂದಿರದತ್ತ ನೋಡುಗರನ್ನು ಸೆಳೆದುಕೊಂಡರು. ಯುದ್ಧ ಸನ್ನಿವೇಶದ ಶೂಟಿಂಗ್ ವೇಳೆ ನಕಲಿ ಕುದುರೆಯನ್ನೇರಿದ ಕಂಗನಾ ಖಡ್ಗ ಬೀಸಿದ್ದಾರೆ.
ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಕಂಗಾನ ನಕಲಿ ಕುದುರೆ ಮೇಲಿನ ಚಿತ್ರೀಕರಣದ ದೃಶ್ಯದ ತುಣುಕು ಹರಿದಾಡುತ್ತಿದೆ. ಸಹ ಕಲಾವಿದರು ಕುದುರೆಯ ಮೇಲೆ ಬಂದ್ರೆ ಕಂಗನಾರಿಗಾಗಿಯೇ ವಿಶೇಷ ನಕಲಿ ಅಶ್ವವೊಂದನ್ನು ಸಿದ್ಧಪಡಿಸಲಾಗಿತ್ತು. ಆಟಿಕೆಯಂತೆ ಚಲಿಸುವ ರೀತಿಯಲ್ಲಿ ಸಿದ್ಧಪಡಿಸಲಾಗಿದ್ದ ಕುದುರೆಯ ಮೇಲೆ ಕುಳಿತ ಕಂಗನಾ ಎದುರಾಳಿಗಳೊಂದಿಗೆ ಯುದ್ಧ ಮಾಡುತ್ತಾರೆ.

ನೋಡುಗರಿಗೆ ಮಾತ್ರ ಎಲ್ಲಿಯೂ ಅದೊಂದು ನಕಲಿ ಅಶ್ವ ಎಂಬುವುದು ಗೊತ್ತಾಗಲ್ಲ. ಚಿತ್ರದ ಪೋಸ್ಟರ್ ಗಳಲ್ಲಿ ಸಹ ಇದೇ ಕುದುರೆಯ ಮೇಲೆ ಕಂಗನಾ ಕುಳಿತಿರುವುದನ್ನು ಕಾಣಬಹುದು. ಈ ಹಿಂದೆ ಬಂದಂತಹ ಚಿತ್ರಗಳಲ್ಲಿ ನಟಿಯರು ಸಿನಿಮಾಗಾಗಿ ಕುದುರೆ ಸವಾರಿಯನ್ನು ಕಲಿಯುತ್ತಿದ್ದರು. ಟಾಲಿವುಡ್ ಬಾಹುಬಲಿಯ ಸಿನಿಮಾದಲ್ಲಿ ತಂತ್ರಜ್ಞಾನದಿಂದಲೇ ಮಾಯಾ ಲೋಕ ಸೃಷ್ಟಿ ಮಾಡಲಾಗಿತ್ತು.
— Sailing Cloud (@twinitisha) February 21, 2019
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply