ಗೃಹಿಣಿ, ಮಗುವಿನ ತಾಯಿಯಾಗಬಯಸಿದ್ದಾರಂತೆ ಕಂಗನಾ- ಬಾಳ ಸಂಗಾತಿ ಬಗ್ಗೆ ನಟಿ ಸುಳಿವು!

ನವದೆಹಲಿ: ಸಿನಿಮಾ ರಂಗದಲ್ಲಿ ಅದ್ಭುತ ನಟನೆಯ ಮೂಲಕ ಪ್ರತಿಷ್ಠಿತ ಪ್ರಶಸ್ತಿಗಳನ್ನು ಬಾಚಿಕೊಳ್ಳುತ್ತಿರುವ ಬಾಲಿವುಡ್‌ ನಟಿ ಕಂಗನಾ ರಣಾವತ್‌ ಅವರು ತಾವು ಒಬ್ಬ ಲೈಫ್‌ ಪಾರ್ಟ್ನರ್‌ ಹೊಂದಿರುವ ಬಗ್ಗೆ ಸುಳಿವು ನೀಡಿದ್ದಾರೆ. ಅಷ್ಟೇ ಅಲ್ಲದೇ ಮುಂದಿನ ಐದು ವರ್ಷಗಳಲ್ಲಿ ತಾನು ವಿವಾಹಿತೆ ಹಾಗೂ ಮಗುವಿನ ತಾಯಿಯಾಗಬಯಸಿದ್ದಾರಂತೆ.

ಹೌದು, ಸಂದರ್ಶನವೊಂದರಲ್ಲಿ ಕಂಗನಾ ಈ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. “ನಾನು ವಿವಾಹಿತೆಯಾಗಿ ಮಕ್ಕಳನ್ನು ಹೊಂದಲು ಬಯಸಿದ್ದೇನೆ. ಇನ್ನು ಐದು ವರ್ಷಗಳಲ್ಲಿ ಪತ್ನಿಯಾಗಿ ಮತ್ತು ಮಕ್ಕಳ ತಾಯಿಯಾಗಿ ಬದುಕನ್ನು ಕಾಣಲು ಇಚ್ಛಿಸಿದ್ದೇನೆ” ಎಂದು ಹೇಳಿದ್ದಾರೆ. ಇದನ್ನೂ ಓದಿ: ಸ್ನೇಹಿತರೊಂದಿಗೆ ಶ್ವೇತಾ ಚೆಂಗಪ್ಪ ಮೋಜು, ಮಸ್ತಿ – ಫೋಟೋ ವೈರಲ್

ಕಂಗನಾ ರಣಾವತ್‌ ಯಾರೊಂದಿಗೂ ಹೆಚ್ಚು ಬೆರೆತವರಲ್ಲ, ಓಡಾಡಿದವರಲ್ಲ. ಅವರ ಬಾಳ ಸಂಗಾತಿ ಬಗ್ಗೆ ಯಾರಿಗೂ ಯಾವುದೇ ಮಾಹಿತಿ ಇಲ್ಲ. ಇದರ ನಡುವೆ ಸಂಗಾತಿ ಬಗ್ಗೆ ಕೇಳಿದಾಗ, ಆದಷ್ಟು ಬೇಗ ಗೊತ್ತಾಗಲಿದೆ. ಶೀಘ್ರವೇ ಜನತೆಗೆ ಗೊತ್ತಾಗುತ್ತದೆ ಎಂದು ಕಂಗನಾ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಜನವರಿ ಅಂತ್ಯಕ್ಕೆ ಬೊಮ್ಮಾಯಿ ಅಧಿಕಾರ ಹೋಗುತ್ತೆ: ಶಿವರಾಜ್ ತಂಗಡಗಿ

ಕಂಗನಾ ರಣಾವತ್‌ ಅವರು ಈಚೆಗೆ ಪದ್ಮಶ್ರೀ ಪ್ರಶಸ್ತಿಯನ್ನು ಸ್ವೀಕರಿಸಿದರು. “ನಾನು ವೃತ್ತಿ ಬದುಕು ಆರಂಭಿಸಿದಾಗ, ಹಲವಾರು ಪ್ರಶ್ನೆಗಳು ನನ್ನನ್ನು ಕಾಡಿದ್ದವು. ಹಲವರು ಹಣ ಬೇಕು ಎನ್ನುತ್ತಾರೆ. ಇನ್ನೂ ಕೆಲವರು ಅಭಿಮಾನಿಗಳು ಬೇಕೆನ್ನುತ್ತಾರೆ. ಮತ್ತೆ ಕೆಲವರು ಹೆಸರು ಮಾಡಬೇಕು ಎಂದು ಬಯಸುತ್ತಾರೆ. ಆದರೆ ನಾನೇನು ಬಯಸಲಿ? ನಾನೊಂದು ಹೆಣ್ಣಾಗಿ ಗೌರವವನ್ನು ಬಯಸುತ್ತೇನೆ. ಈ ಒಂದು ಅತ್ಯುತ್ತಮ ಗೌರವ ನೀಡಿದ ಭಾರತಕ್ಕೆ ಧನ್ಯವಾದಗಳು” ಎಂದು ಪ್ರಶಸ್ತಿ ಸ್ವೀಕರಿಸಿ ಇನ್‌ಸ್ಟಾ ಗ್ರಾಂನಲ್ಲಿ ಕಂಗನಾ ಬರೆದುಕೊಂಡಿದ್ದರು.

Comments

Leave a Reply

Your email address will not be published. Required fields are marked *