ಸಮಂತಾ, ನಾಗಚೈತನ್ಯ ವಿಚ್ಛೇದನ ಸ್ಟೋರಿಗೆ ಅಮೀರ್‌ ಖಾನ್‌ರನ್ನು ಎಳೆತಂದ ಕಂಗನಾ

kangana ranaut

ಮುಂಬೈ: ಟಾಲಿವುಡ್ ನಟ ನಾಗಚೈತನ್ಯ ಹಾಗೂ ಸಮಂತಾ ವಿಚ್ಛೇದನಕ್ಕೆ ಬಾಲಿವುಡ್ ನಟ ಅಮೀರ್ ಖಾನ್ ಅವರನ್ನು ಎಳೆ ತಂದು ಕಂಗನಾ ರಣಾವತ್ ಸ್ಟೋರಿ ಪ್ರಕಟಿಸಿದ್ದಾರೆ.

ಈ ಕುರಿತಂತೆ ಕಂಗನಾ ರಣಾವತ್ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಎರಡು ಸ್ಟೋರಿಗಳನ್ನು ಬರೆದು ಪೋಸ್ಟ್ ಮಾಡಿದ್ದಾರೆ. ವಿಚ್ಛೇದನದಲ್ಲಿ ಯಾವಾಗಲೂ ತಪ್ಪು ಪುರುಷರದ್ದೇ ಆಗಿರುತ್ತದೆ. ಪುರುಷ ಬೇಟೆಗಾರ ಆಗಿದ್ದರೆ ಮಹಿಳೆ ಪೋಷಕಿಯಾಗಿರುತ್ತಾಳೆ. ಮಹಿಳೆಯರನ್ನು ಬಟ್ಟೆಯಂತೆ ಬದಲಿಸಿ ನಂತರ ನಾವು ಉತ್ತಮ ಸ್ನೇಹಿತರೆಂದು ಹೇಳಿಕೊಳ್ಳುವವರ ಮೇಲೆ ದಯೆ ತೋರಿಸುವುದನ್ನು ನಿಲ್ಲಿಸಿ. ನೂರು ಜನ ಮಹಿಳೆಯರಲ್ಲಿ ಒಂದು ಮಹಿಳೆ ತಪ್ಪು ಮಾಡುವುದು ನಿಜ, ಆದರೆ ಎಲ್ಲರೂ ಅಲ್ಲ. ಮೀಡಿಯಾ ಹಾಗೂ ಅಭಿಮಾನಿಗಳಿಂದ ಪ್ರೋತ್ಸಾಹ ಪಡೆದು ಇಂತಹ ಕೆಲಸ ಮಾಡುವವರಿಗೆ ನಾಚಿಕೆ ಆಗಬೇಕು ಎಂದು ಕಿಡಿಕಾರಿದ್ದಾರೆ.

kangana ranaut

ದಕ್ಷಿಣ ಭಾರತದ ಈ ನಟ ಹಲವು ವರ್ಷಗಳಿಂದ ರಿಲೇಶನ್ ಶಿಪ್‍ನಲ್ಲಿದ್ದು, ಮದುವೆಯಾಗಿ 4 ವರ್ಷಗಳ ನಂತರ ಇದೀಗ ಇದ್ದಕ್ಕಿದಂತೆ ಹೆಂಡತಿಗೆ ಡಿವೋರ್ಸ್ ನೀಡಿದ್ದಾರೆ. ಇವರು ಇತ್ತೀಚೆಗೆ ಬಾಲಿವುಡ್ ಡಿವೋರ್ಸ್ ಎಕ್ಸ್ ಪರ್ಟ್ ಬಾಲಿವುಡ್ ಸೂಪರ್ ಸ್ಟಾರ್ ಭೇಟಿಯಾಗಿದ್ದರು. ಅನೇಕ ಮಹಿಳೆಯರು ಮತ್ತು ಮಕ್ಕಳ ಜೀವನ ಹಾಳು ಮಾಡಿ. ಈಗ ಮಾರ್ಗದರ್ಶಕರಾಗಿದ್ದಾರೆ. ಇದಕ್ಕೂ ಮುಂಚೆ ಎಲ್ಲವೂ ಸರಿಯಾಗಿಯೇ ಇತ್ತು. ಆದರೆ ಬಳಿಕ ಎಲ್ಲವೂ ಬದಲಾಯಿತು. ನಾನು ಯಾರ ಬಗ್ಗೆ ಮಾತನಾಡುತ್ತಿದ್ದೇನೆ ಎಂಬುವುದು ನಿಮಗೆ ಗೊತ್ತಾಗುತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ಭಾರವಾದ ಹೃದಯದಿಂದ ಸೊಸೆ ಕುರಿತಾಗಿ ಬರೆದ ನಾಗರ್ಜುನ್

kangana ranaut

ನಾಗಚೈತನ್ಯ ಹಾಗೂ ಸಮಂತಾ, ಹೆಚ್ಚು ಆಲೋಚನೆಯ ನಂತರ ಚಾಯ್ ಮತ್ತು ನಾನು ನಮ್ಮ ಸ್ವಂತ ದಾರಿಗಳನ್ನು ಅನುಸರಿಸಲಿದ್ದೇವೆ. ಗಂಡ ಮತ್ತು ಹೆಂಡತಿಯಾಗಿ ಬೇರೆಯಾಗಲು ನಿರ್ಧರಿಸಿದ್ದೇವೆ. ಒಂದು ದಶಕದ ಸ್ನೇಹವನ್ನು ಹೊಂದಲು ನಾವು ಅದೃಷ್ಟಶಾಲಿಯಾಗಿದ್ದೇವೆ. ನಮ್ಮ ಸಂಬಂಧ ಯಾವಾಗಲೂ ನಮ್ಮ ನಡುವೆ ವಿಶೇಷ ಬಾಂಧವ್ಯವನ್ನು ಹೊಂದಿರುತ್ತದೆ ಎಂದು ನಾವು ನಂಬುತ್ತೇವೆ ಎಂದು ಹೇಳಿದ್ದರು. ಇದನ್ನೂ ಓದಿ: 200 ಕೋಟಿ ಜೀವನಾಂಶ ರಿಜೆಕ್ಟ್ ಮಾಡಿದ ಸಮಂತಾ

 

View this post on Instagram

 

A post shared by Samantha (@samantharuthprabhuoffl)

ಈ ಕಷ್ಟದ ಸಮಯದಲ್ಲಿ ನಮ್ಮ ಅಭಿಮಾನಿಗಳು, ಹಿತೈಷಿಗಳು ಮತ್ತು ಮಾಧ್ಯಮಗಳು ನಮ್ಮನ್ನು ಬೆಂಬಲಿಸಬೇಕು. ನಾವು ಮುಂದುವರಿಯಲು ಬೇಕಾದ ಪ್ರೈವೆಸಿಯನ್ನು ನಮಗೆ ನೀಡಬೇಕೆಂದು ನಾವು ವಿನಂತಿಸುತ್ತೇವೆ. ನಿಮ್ಮ ಬೆಂಬಲಕ್ಕೆ ಧನ್ಯವಾದಗಳು ಎಂದು ಬರೆದುಕೊಂಡು ತಾವಿಬ್ಬರು ವಿಚ್ಛೇದನ ಪಡೆದುಕೊಳ್ಳುತ್ತಿರುವ ವಿಚಾರವನ್ನು ಸೋಶಿಯಲ್ ಮೀಡಿಯಾ ಮೂಲಕ ತಿಳಿಸಿದ್ದರು.

Comments

Leave a Reply

Your email address will not be published. Required fields are marked *