ಕಂಗನಾ ರಣಾವತ್ ಹಿಂದೆ ಬಿದ್ದಿದ್ದಾನಂತೆ ಹೆಣ್ಣುಬಾಕ ನಟ

ಸೋಷಿಯಲ್ ಮೀಡಿಯಾದಲ್ಲಿ ಒಂದಿಲ್ಲೊಂದು ಪೋಸ್ಟ್ ಹಾಕುವ ಮೂಲಕ ತನ್ನ ಸಿಟ್ಟನ್ನು ಹೊರ ಹಾಕುತ್ತಿರುವ ಕಂಗನಾ ರಣಾವತ್, ಈ ಬಾರಿ ಹೆಣ್ಣುಬಾಕ ನಟನೊಬ್ಬ ತನ್ನ ಹಿಂದೆ ಬಿದ್ದಿರುವ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಸದ್ಯ ಆ ನಟ ಮದುವೆಯಾಗಿ ಒಂದು ಮಗುವಿನ ತಂದೆಯಾಗಿದ್ದರೂ ತನ್ನ ಹಿಂದಿ ಬಿದ್ದು ಹಿಂಸೆ ಕೊಡುತ್ತಿದ್ದಾನೆ ಎಂದು ಹೇಳಿಕೊಂಡಿದ್ದಾರೆ. ಆ ನಟ ಬೇರೆ ಯಾರೂ ಅಲ್ಲ ರಣಬೀರ್ ಕಪೂರ್ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.

ಮೊನ್ನೆಯಷ್ಟೇ ಬಾಲಿವುಡ್ ಮಾಫಿಯಾ ಬಗ್ಗೆಯೂ ಕಂಗನಾ ರಣಾವತ್ (Kangana Ranaut) ಮಾತನಾಡಿದ್ದರು. ತಮ್ಮ ನಿರ್ಮಾಣದ ‘ಟೀಕು ವೆಡ್ಸ್ ಶೇರು’ ಸಿನಿಮಾ ಓಟಿಟಿಯಲ್ಲಿ ಲಭ್ಯವಿದೆ. ಸಿನಿಮಾವನ್ನೂ ನೋಡದೇ ಕೆಲವರು ಚಿತ್ರದ ಬಗ್ಗೆ ನೆಗೆಟಿವ್ ವಿಮರ್ಶೆಯನ್ನು ಬರೆಯುತ್ತಿದ್ದಾರಂತೆ. ಅಲ್ಲದೇ, ರೇಟಿಂಗ್ ಕೊಡುವ ವಿಚಾರದಲ್ಲೂ ಸಿನಿಮಾ ಸೋಲಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರಂತೆ. ಇದೆಲ್ಲವನ್ನೂ ಬಾಲಿವುಡ್ ಮೂವೀ ಮಾಫಿಯಾ (Movie Mafia) ಮಾಡಿಸುತ್ತಿದೆ ಎಂದು ಕಂಗನಾ ಗುಡುಗಿದ್ದರು.

ಬಾಲಿವುಡ್ (Bollywood) ನಲ್ಲಿ ಮೂವೀ ಮಾಫಿಯಾ ಇದೆ. ಅದು ಬೇರೆ ಚಿತ್ರಗಳನ್ನು ಬೆಳೆಯುವುದಕ್ಕೆ ಬಿಡುವುದಿಲ್ಲ ಎಂದು ಈ ಹಿಂದೆ ಇದೇ ಕಂಗನಾ ಆರೋಪಿಸಿದ್ದರು. ಕರಣ್ ಜೋಹಾರ್ ಸೇರಿದಂತೆ ಹಲವರ ಬಗ್ಗೆ ಈ ಕುರಿತು ನಿರಂತರ ಆರೋಪವನ್ನು ಮಾಡುತ್ತಲೇ ಬರುತ್ತಿದ್ದಾರೆ. ಈ ಬಾರಿಯೂ ಮೂವೀ ಮಾಫಿಯಾ ಬಗ್ಗೆ ಮತ್ತೆ ಮಾತನಾಡಿದ್ದಾರೆ. ನೀವು ನನ್ನನ್ನು ಎಷ್ಟೇ ತುಳಿದರು ಮತ್ತೆ ನಾನು ಎದ್ದು ನಿಲ್ಲುತ್ತೇನೆ ಎಂದಿದ್ದಾರೆ ಕಂಗನಾ.

ನವಾಜುದ್ದೀನ್ ಸಿದ್ಧಿಕಿ (Nawazuddin Siddiqui) ಅವರು ಸಾಕಷ್ಟು ವಿಭಿನ್ನ ಪಾತ್ರಗಳ ನಟಿಸಿ ಸೈ ಎನಿಸಿಕೊಂಡವರು. ಅವರ ಮನೋಜ್ಞ ನಟನೆಗೆ ಬಿಟೌನ್ ಭೇಷ್ ಎಂದಿದ್ದೂ ಇದೆ. ಈಗ ‘ಟೀಕು ವೆಡ್ಸ್ ಶೇರು’ (Tiku Weds Sheru) ಚಿತ್ರದ ಮೂಲಕ ಸದ್ದು ಮಾಡ್ತಿರೋ ನವಾಜುದ್ದೀನ್ ಮೇಲೆ ಅಭಿಮಾನಿಗಳು ಕಿಡಿಕಾರಿದ್ದಾರೆ. ಮಗಳ ವಯಸ್ಸಿನ ಹುಡುಗಿ ಜೊತೆ ರೊಮ್ಯಾನ್ಸ್ ಮತ್ತು ಲಿಪ್‌ಲಾಕ್ ಮಾಡಿರೋ ನವಾಜುದ್ದೀನ್‌ಗೆ ನೆಟ್ಟಿಗರು ತರಾಟೆ ತೆಗೆದುಕೊಂಡಿದ್ದಾರೆ.

ಈ ಚಿತ್ರದಲ್ಲಿ ನವಾಜುದ್ದೀನ್ ಅವರು ಶೇರು ಎಂಬ ಜ್ಯೂನಿಯರ್ ಆರ್ಟಿಸ್ಟ್ ಪಾತ್ರ ಮಾಡಿದ್ದಾರೆ. ಬಾಲಿವುಡ್‌ನಲ್ಲಿ ಸೆಟ್ಲ್ ಆಗಬೇಕು ಎಂಬುದು ಶೇರು ಕನಸಾಗಿರುತ್ತದೆ. ಟೀಕು (ಅವ್ನೀತ್) ಕೂಡ ಹೀರೋಯಿನ್ ಆಗಬೇಕು ಎಂದು ಕನಸು ಕಂಡವಳು. ಶೇರುನ ಮದುವೆ ಆದರೆ ಭೋಪಾಲ್ ಬಿಟ್ಟು ಮುಂಬೈ ಸೇರಬಹುದು, ಸಿನಿಮಾ ಆಫರ್ ಪಡೆಯಬಹುದು ಎಂಬುದು ಟೀಕು ಆಲೋಚನೆ. ಈ ಕಾರಣಕ್ಕೆ ಆಕೆ ಮದುವೆಗೆ ಒಪ್ಪಿಕೊಳ್ಳುತ್ತಾಳೆ. ಇದು ಟ್ರೈಲರ್‌ನಲ್ಲಿ ತೋರಿಸಿರುವ ಅಂಶವಾಗಿದೆ.

 

ನವಾಜುದ್ದೀನ್, ಅವ್ನೀತ್ ಕೌರ್ ಲಿಪ್ ಲಾಕ್ ದೃಶ್ಯ ಇದೆ. ನವಾಜುದ್ದೀನ್ ವಯಸ್ಸು 49. ಅವ್ನೀತ್‌ಗೆ 21 ವರ್ಷ. ಮಗಳ ವಯಸ್ಸಿನ ಹುಡುಗಿಯ ಜೊತೆ ನವಾಜುದ್ದೀನ್ ಲಿಪ್ ಲಾಕ್ ಮಾಡಿದ್ದು ಎಷ್ಟು ಸರಿ ಎಂಬುದು ಅನೇಕರ ಪ್ರಶ್ನೆಯಾಗಿದೆ. ಈ ಬಗ್ಗೆ ಸಾಕಷ್ಟು ಟೀಕೆ ಕೇಳಿ ಬಂದಿದೆ. 21 ವರ್ಷದ ಯುವತಿ ಜೊತೆ ರೊಮ್ಯಾನ್ಸ್ ಮಾಡೋ ಅವಶ್ಯಕತೆ ಇದ್ಯಾ.? ಇಬ್ಬರಿಗೂ ವಯಸ್ಸಿನ ಅಂತರ ಎಷ್ಟಿದೆ ಗೊತ್ತಾ ಅಂತಾ ಸಿನಿಮಾ ತಂಡಕ್ಕೂ ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದರು.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]