ಬೆಂಗಳೂರು: ಕರುನಾಡಲ್ಲಿ ಯಾವ ಊರಿಗೆ ಹೋದರೂ ದೇವಸ್ಥಾನ ತರಹ ಡಾ. ರಾಜ್‍ಕುಮಾರ್ ಪ್ರತಿಮೆ ಇರುತ್ತೆ. ರಾಜ್ ಕುಮಾರ್ ಪ್ರತಿಮೆ ಫೋಟೋ ಅಥವಾ ಕಟೌಟ್ ಕಂಡರೆ ಸಾಕು ಜನ ನಿಂತು ಕೈಮುಗಿಯುತ್ತಾರೆ. ಇದೀಗ ಅಂಥಹ ಅಭಿಮಾನಿ ದೇವರುಗಳಿಗೆ ಇಲ್ಲಿದೆ ಒಂದು ಖುಷಿ ವಿಷಯ. ಇದೇ ಶುಕ್ರವಾರ ನಗರದ ಮುಖ್ಯ ಚಿತ್ರಮಂದಿರಗಳಲ್ಲಿ ರಾಜ್ ಕಟೌಟ್ ರಾರಾಜಿಸಲಿದೆ.
ರಾಜ್‍ಕುಮಾರ್ ಆದರ್ಶಗಳನ್ನು ಇಟ್ಟುಕೊಂಡು ಅನೇಕ ಸಿನಿಮಾಗಳು ಕನ್ನಡದಲ್ಲಿ ಬಂದಿವೆ. ಹಾಗೆಯೇ ಈ ವಾರ ರಾಜ್ ನೆರಳಿನ ಕನಕ ಚಿತ್ರ ತೆರೆ ಮೇಲೆ ಬರುವುದಕ್ಕೆ ಸಿದ್ಧವಾಗಿದೆ. ಬ್ಲ್ಯಾಕ್ ಕೋಬ್ರಾ ದುನಿಯಾ ವಿಜಯ್ ಆಟೋ ಚಾಲಕ ಕನಕ ಪಾತ್ರದಲ್ಲಿ ಮಿಂಚಿರುವ ಚಿತ್ರವಿದು.

ಚಿತ್ರದಲ್ಲಿ ನಾಯಕ ದುನಿಯಾ ವಿಜಿ ಅಣ್ಣಾವ್ರ ಅಭಿಮಾನಿಯಾಗಿರುತ್ತಾರೆ. ಅವರ ಕನ್ನಡ ಪ್ರೀತಿ ಆದರ್ಶವನ್ನು ಪಾಲಿಸುತ್ತಾರೆ. ಹೀಗಾಗಿ ಅಣ್ಣಾವ್ರ ಬೃಹತ್ ಕಟೌಟ್ ಅನ್ನು ರಿಲೀಸ್ ಆಗುವ ಮುಖ್ಯ ಚಿತ್ರಮಂದಿರಗಳಲ್ಲಿ ನಿಲ್ಲಿಸಲಾಗುತ್ತೆ. ಕನಕ ಚಿತ್ರ ಹೆಸರಾಂತ ನಿರ್ದೇಶಕ ಆರ್. ಚಂದ್ರು ಕಲ್ಪನೆಯಲ್ಲಿ ಮೂಡಿ ಬಂದಿದೆ.
ಅಣ್ಣಾವ್ರ ಅಭಿಮಾನಿಯಾಗಿ ವಿಜಯ್ ಅಭಿನಯಿಸಿದ್ದರೆ, ನಾಯಕಿಯರಾಗಿ ಹರಿಪ್ರಿಯಾ ಮತ್ತು ಮಾನ್ವಿತಾ ಹರೀಶ್ ನಟಿಸಿದ್ದಾರೆ. ನವೀನ್ ಸಜ್ಜು ಸಂಗೀತ ಈ ಚಿತ್ರದಲ್ಲಿದೆ. ಗುರುಕಿರಣ್ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ನೀಡಿದ್ದಾರೆ. ಎಲ್ಲಾ ವರ್ಗಗಳಿಗೂ ಹಿಡಿಸುವ ಒಂದು ಆದರ್ಶಮಯಿ ಕಥೆ ಚಿತ್ರದಲ್ಲಿದೆ.
https://www.youtube.com/watch?v=VGOrvWbcMZU





Leave a Reply