ಕಂಪ್ಲಿ ಗಣೇಶ್ ಕಣ್ಣಾ ಮುಚ್ಚಾಲೆ ಆಟ – ಮುಂಬೈನಲ್ಲಿ ಪೊಲೀಸರಿಗೆ ಚಳ್ಳೆಹಣ್ಣು!

ಬೆಂಗಳೂರು: ಈಗಲ್ಟನ್ ರೆಸಾರ್ಟಿನಲ್ಲಿ ಆನಂದ್ ಸಿಂಗ್ ಮೇಲೆ ಹಲ್ಲೆ ಮಾಡಿ ತಲೆ ತಪ್ಪಿಸಿಕೊಂಡಿರುವ ಕಂಪ್ಲಿಯ ಜೆ.ಎನ್. ಗಣೇಶ್ ಕಣ್ಣಾ ಮುಚ್ಚಾಲೆ ಆಡ್ತಿದ್ದಾರೆ.

ಒಂದ್ಸರಿ ಚೆನ್ನೈನಲ್ಲಿ, ಮತ್ತೊಂದು ಸಾರಿ ಗೋಕಾಕ್ ಶಾಸಕರ ನೆರವಿನೊಂದಿಗೆ ಮುಂಬೈನಲ್ಲಿದ್ದಾರೆ ಎನ್ನುವ ಶಂಕೆ ಎದ್ದಿದೆ. ಈ ನಿಟ್ಟಿನಲ್ಲಿ, ಮುಂಬೈ ಪೊಲೀಸರ ಸಹಾಯದೊಂದಿಗೆ ರಾಮನಗರ ಪೊಲೀಸರು ಅರೆಸ್ಟ್ ಮಾಡಲು ಮುಂದಾಗಿದ್ದರು. ಆದರೆ ಆ ವಿಚಾರ ಹೇಗೋ ತಿಳಿದು ಅಲ್ಲಿಂದ ಪರಾರಿಯಾಗಿದ್ದಾರೆ ಎನ್ನುವ ವಿಚಾರ ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಇದೆಲ್ಲವನ್ನೂ ನೋಡಿದ್ರೆ ಕೇಸ್ ಮುಚ್ಚಿ ಹಾಕಲು ಕಾಂಗ್ರೆಸ್ ಪ್ರಯತ್ನಿಸುತ್ತಿದ್ಯಾ ಎನ್ನುವ ಪ್ರಶ್ನೆ ಎದ್ದಿದೆ.

ಬಾಗಲಕೋಟೆಯಲ್ಲಿ ಮಾತನಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯನವರು, ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ. ಎರಡು ಕುಟುಂಬಗಳ ನಡುವೆ ರಾಜಿ ಮಾಡಿಸ್ತೇನೆ ಅಂತ ಸಚಿವ ತುಕಾರಾಂ ಹೇಳಿದರೆ, ಗಲಾಟೆಗೆ ಬಿಜೆಪಿಯೇ ಕಾರಣ ಅಂತ ಸಚಿವ ಜಿ.ಟಿ. ದೇವೇಗೌಡ ಚಾಮರಾಜನಗರದಲ್ಲಿ ದೂರಿದರು.

ಎಲ್ಲದರ ಮಧ್ಯೆ, ತನಿಖೆ ಹಂತ, ಆನಂದ್ ಸಿಂಗ್ ಹೇಳಿಕೆ ಪ್ರತಿ ಪಡೆಯಲು ಬಿಡದಿ ಪೊಲೀಸರಿಗೆ ಬಿಜೆಪಿ ಅರ್ಜಿ ಸಲ್ಲಿಸಿದೆ. ಇತ್ತ, ಕಂಪ್ಲಿಯ ಜನ ತಮ್ಮ ಶಾಸಕನ ಹುಡುಕಿಕೊಡಿ ಅಂತ ಕಂಪ್ಲೆಂಟ್ ಫೈಲ್ ಮಾಡಿದ್ದಾರೆ. ಈ ಮಧ್ಯೆ, ಆನಂದ್ ಸಿಂಗ್ ಚೇತರಿಕೆಗಾಗಿ ಅಭಿಮಾನಿಗಳು ಮೃತ್ಯುಂಜಯ ಹೋಮ ಮಾಡಿಸಿದ್ದಾರೆ.

https://www.youtube.com/watch?v=F1q42m7oBuA

 

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *