ಮಕ್ಕಳ ವದಂತಿ ನಂಬಿ ಹತ್ಯೆ, 30 ಮಂದಿ ಅರೆಸ್ಟ್

ಬೀದರ್: ಮಕ್ಕಳ ಕಳ್ಳರೆಂದು ಮುಸುಕುಧಾರಿಗಳಿಗೆ ಗ್ರಾಮಸ್ಥರು ಗಂಭೀರ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಮಲಾನಗರ ಪೊಲೀಸರು 30 ಜನರನ್ನು ಬಂಧಿಸಿದ್ದಾರೆ.

ಶುಕ್ರವಾರ ತಡರಾತ್ರಿ ಪೊಲೀಸರು ಜನರನ್ನು ಬಂಧಿಸಿದ್ದಾರೆ. ಪೊಲೀಸರು ವಿಡಿಯೋ ನೋಡಿ ಆರೋಪಿಗಳನ್ನು ಬಂಧಿಸಿದ್ದಾರೆ. ಜಿಲ್ಲೆಯ ಔರಾದ್ ತಾಲೂಕಿನ ಮೂರ್ಕಿ ಗ್ರಾಮದ ಬಳಿ ಮಕ್ಕಳ ಕಳ್ಳರೆಂದು ಮುಸುಕುದಾರಿಗಳಿಗೆ ಗ್ರಾಮಸ್ಥರು ಹಿಗ್ಗಾ-ಮುಗ್ಗಾ ಥಳಿಸಿದ್ದರು. ಜನರು ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಅಜಮ್(26) ಆರೋಪಿ ಮೃತಪಟ್ಟಿದ್ದನು.

ಗ್ರಾಮಸ್ಥರು ಹೊಡೆದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ಬಳಿಕ ಈ ವಿಡಿಯೋವನ್ನು ಪೊಲೀಸರು ಗಮನಿಸಿ ಜನರನ್ನು ಬಂಧಿಸಲು ಮುಂದಾಗಿದ್ದರು. ಈ ಬಗ್ಗೆ ತಿಳಿದುಕೊಂಡು ಗ್ರಾಮಸ್ಥರು ಬಂಧನದ ಭೀತಿಯಿಂದ ಗ್ರಾಮವನ್ನು ತೊರೆದಿದ್ದರು.

ಶುಕ್ರವಾರ ತಡರಾತ್ರಿ ಪೊಲೀಸರು ಬಂಧಿಸಲು ಹೋದಾಗ ಜನರು ಗಲಾಟೆ ಮಾಡುತ್ತಿದ್ದರು. ಸ್ಥಳಕ್ಕೆ ಎಸ್.ಪಿ ದೇವರಾಜ್ ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಬಳಿಕ 30 ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಈ ಕುರಿತು ಕಮಲಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Comments

Leave a Reply

Your email address will not be published. Required fields are marked *