ಸಹಜ ಸ್ಥಿತಿಯತ್ತ ಕಲ್ಲಡ್ಕ- ಪ್ರಮುಖ ಆರೋಪಿ ಪೊಲೀಸರಿಂದ ಎಸ್ಕೇಪ್

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕಲ್ಲಡ್ಕದಲ್ಲಿ ಗುಂಪು ಘರ್ಷಣೆಯಿಂದ ನಲುಗಿದ್ದ ಈಗ ಸಹಜ ಸ್ಥಿತಿಗೆ ಮರಳಿದೆ. ಈ ನಡುವೆ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾಗಿ ಆಸ್ಪತ್ರೆಗೆ ದಾಖಲಾಗಿದ್ದ ಹಿಂದೂ ಮುಖಂಡನೊಬ್ಬ ಪೊಲೀಸರ ಕೈಯಿಂದ ತಪ್ಪಿಸಿಕೊಂಡಿದ್ದಾನೆ.

ಇರಿತಕ್ಕೊಳಗಾಗಿ ಮಂಗಳೂರು ಜಿಲ್ಲೆಯ ಪುತ್ತೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹಿಂದೂ ಜಾಗರಣ ವೇದಿಕೆ ಮುಖಂಡ ರತ್ನಾಕರ ಶೆಟ್ಟಿ ಪೊಲೀಸರ ಕಾವಲಿನ ಮಧ್ಯೆಯೇ ರಾತ್ರಿ ಹೊತ್ತಿನಲ್ಲಿ ಪರಾರಿಯಾಗಿದ್ದಾನೆ.

ಪ್ರಕರಣ ಸಂಬಂಧಿಸಿ ಕಾವಲಿದ್ದ ಪುತ್ತೂರು ಠಾಣೆಯ ಪಿಎಸ್‍ಐ ಓಮನ, ಹೆಡ್ ಕಾನ್ಸ್ ಟೇಬಲ್ ರಾಧಾಕೃಷ್ಣ ಹಾಗೂ ಪೇದೆ ರಮೇಶ್ ಲಮಾಣಿ ಅವರನ್ನು ದ.ಕ. ಎಸ್ಪಿ ಭೂಷಣರಾವ್ ಬೋರಸೆ ಅಮಾನತು ಮಾಡಿದ್ದಾರೆ.

ರಾತ್ರಿ ಹೊತ್ತಿನಲ್ಲಿ ಪೊಲೀಸರು ನಿದ್ದೆಗೆ ಜಾರಿದ್ದ ವೇಳೆ ಆರೋಪಿ ಪರಾರಿಯಾಗಿದ್ದರಿಂದ ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಅಮಾನತು ಶಿಕ್ಷೆ ವಿಧಿಸಲಾಗಿದೆ.

 

ಕಳೆದ ಜೂನ್ 13ರಂದು ರತ್ನಾಕರ ಶೆಟ್ಟಿ ಮತ್ತು ಖಲೀಲ್ ಎಂಬುವರ ನಡುವಿನ ಜಗಳದ ನೆಪದಲ್ಲಿ ಕಲ್ಲಡ್ಕದಲ್ಲಿ ಗುಂಪು ಘರ್ಷಣೆ, ಕಲ್ಲು ತೂರಾಟ ನಡೆದಿತ್ತು. ಇವರಿಬ್ಬರೂ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು.

Comments

Leave a Reply

Your email address will not be published. Required fields are marked *