ಗುಜರಾತ್ ಹತ್ಯಾಕಾಂಡದ ಸಿನಿಮಾ ಬಂದ್ರೆ ಸಿದ್ದರಾಮಯ್ಯ ಊರು ಬಿಟ್ಟು ಓಡಬೇಕಾಗುತ್ತದೆ: ಕಲ್ಲಡ್ಕ ಪ್ರಭಾಕರ ಭಟ್

ಮಂಗಳೂರು: ದಿ ಕಾಶ್ಮೀರ್ ಫೈಲ್ಸ್ ಚಿತ್ರದ ಕುರಿತು ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿದ್ದಾರೆ. ಜೊತೆಗೆ ಗುಜರಾತ್ ಹತ್ಯಾಕಾಂಡ ಬಗ್ಗೆ ಸಿನಿಮಾ ಮಾಡಿ ಎಂದು ಹೇಳುತ್ತಿದ್ದಾರೆ. ಗುಜರಾತ್ ಹತ್ಯಾಕಾಂಡದ ಸಿನಿಮಾ ಮಾಡಿದ್ರೆ ಸಿದ್ದರಾಮಯ್ಯ ಊರು ಬಿಟ್ಟು ಓಡಬೇಕಾಗುತ್ತದೆ ಎಂದು ಆರ್‌ಎಸ್‌ಎಸ್‌ನ ಹಿರಿಯ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ವ್ಯಂಗ್ಯವಾಡಿದ್ದಾರೆ.

ಮಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಶ್ಮೀರ್ ಫೈಲ್ಸ್ ಚಿತ್ರದಲ್ಲಿ ಬಂದಿರೋದು ಎಲ್ಲವೂ ಸುಳ್ಳು ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಗುಜರಾತ್‍ನಲ್ಲಿ ಮುಸಲ್ಮಾನರು ಮಾಡಿದ ಅತ್ಯಾಚಾರವನ್ನು ಯಾರು ಒಪ್ಪಿಕೊಳ್ಳಲು ಸಾಧ್ಯವಿಲ್ಲ, ಸಿದ್ದರಾಮಯ್ಯ ಬೇಕಾದರೆ ಒಂದು ಸಲ ಹೋಗಿ ಬರಲಿ, 56 ಜನರನ್ನು ರೈಲಿನಲ್ಲಿ ಬೆಂಕಿ ಹಾಕಿ ಕೊಂದಿದ್ದರು. ಅವರ ಮನೆಗೆ ಹೋಗಿ ಕುಟುಂಬದ ದುಃಖ ಏನು ಎಂದು ಕೇಳಿದಾಗ ಗೊತ್ತಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ:  ಭಗವದ್ಗೀತೆಯನ್ನು ಪಠ್ಯಪುಸ್ತಕದಲ್ಲಿ ಸೇರಿಸಲು ಸಿಎಂಗೆ ಒತ್ತಾಯಿಸುವೆ: ಬಿಎಸ್‍ವೈ

ಸಿದ್ದರಾಮಯ್ಯ ಬದುಕಿರೋದು ಅವರ ತಾಯಿ, ಹೆಂಡ್ತಿ ಮಾಡಿರೋ ಪುಣ್ಯದ ಫಲದಿಂದ:
ರಸ್ತೆ ಮಧ್ಯೆ ದನದ ಮಾಂಸ ತಿನ್ನುತ್ತೇವೆ ಎನ್ನುವ ಸಿದ್ದರಾಮಯ್ಯ ಇವತ್ತು ಬದುಕಿರುವುದು ಅವರ ತಾಯಿ ಹಾಗೂ ಹೆಂಡತಿ ಬೆಳಗ್ಗೆಯಿಂದ ರಾತ್ರಿವರೆಗೆ ದೇವರ ಪೂಜೆ ಮಾಡಿರುವುದರಿಂದ ಅನ್ನೋದು ಅವರಿಗೆ ಗೊತ್ತಿರಲಿ. ಸಿದ್ದರಾಮಯ್ಯನವರ ಮನೆಯಲ್ಲಿ ಪೂಜೆ ಮಾಡುತ್ತಾರೆ ಎಂದು ಅವರ ಹೆಂಡತಿ ಮತ್ತು ತಾಯಿಯನ್ನು ಮನೆಯಿಂದ ಹೊರಗೆ ಹಾಕ್ತಾರ, ಅವರ ಪುಣ್ಯದ ಫಲದಿಂದ ಸಿದ್ದರಾಮಯ್ಯ ಬದುಕಿದ್ದಾರೆ ಅನ್ನೋದು ಅವರಿಗೆ ಗೊತ್ತಿರಬೇಕು. ಹಿಂದೂ ಸಮಾಜವನ್ನು ಹೀಯಾಳಿಸುವ ಕೆಲಸ ಅವರು ಮಾಡಬಾರದು ಎಂದು ಕಿವಿಮಾತು ಹೇಳಿದರು. ಇದನ್ನೂ ಓದಿ: ಭಗವದ್ಗೀತೆ ಹೊಟ್ಟೆ ತುಂಬಿಸುವುದಿಲ್ಲ, ತಲೆಯನ್ನು ತುಂಬಿಸುತ್ತದೆ: ಪ್ರತಾಪ್‍ಸಿಂಹ

ಹಿಜಬ್ ಪ್ರಕರಣದಲ್ಲಿ ಇವರಿಗೆ ಹಿಜಬ್ ದೊಡ್ಡ ವಿಷಯ ಆಗಿಲ್ಲ, ಹುಡುಗರು ಕೇಸರಿ ಶಾಲು ಹಾಕಿರೋದು ದೊಡ್ಡ ವಿಷಯ ಆಗಿದೆ. ಹಿಜಬ್‍ನ ಬಗ್ಗೆ ಇವರಿಗೆ ಮಾತನಾಡಲು ಧೈರ್ಯವಿಲ್ಲ. ಆ ಕಡೆ ಮಾತನಾಡಿದ್ರು ವೋಟು ಹೋಗುತ್ತೆ, ಈ ಕಡೆ ಮಾತನಾಡಿದ್ರು ವೋಟ್ ಹೋಗುತ್ತೆ ಎಂಬ ಭಯ ಇದೆ. ಸಿದ್ದರಾಮಯ್ಯ ಬಗ್ಗೆ ಗೌರವವಿದೆ ಆದ್ರೆ ಹುಚ್ಚುಚ್ಚಾಗಿ ಮಾತನಾಡಬಾರದು ಎಂದು ಕಿಡಿಕಾರಿದರು.

Comments

Leave a Reply

Your email address will not be published. Required fields are marked *