ಅಮಿತಾಭ್ ಹುಟ್ಟು ಹಬ್ಬಕ್ಕೆ ‘ಕಲ್ಕಿ’ ಫಸ್ಟ್ ಲುಕ್ ರಿಲೀಸ್

ಬಾಲಿವುಡ್ ಖ್ಯಾತ ನಟ ಅಮಿತಾಭ್ ಬಚ್ಚನ್  (Amitabh Bachchan) ಇಂದು ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ಹುಟ್ಟು ಹಬ್ಬದ (Birthday) ದಿನದಂದು ಕಲ್ಕಿ ಸಿನಿಮಾ ಟೀಮ್ ಅಮಿತಾಭ್ ಬಚ್ಚನ್ ಪಾತ್ರದ ಫಸ್ಟ್ ಲುಕ್(First Look)  ರಿಲೀಸ್ ಮಾಡಿದೆ. ವಿಚಿತ್ರ ವೇಷದಲ್ಲಿ ಅಮಿತಾಭ್ ಕಾಣಿಸಿಕೊಂಡಿದ್ದು ಪಾತ್ರದ ಬಗ್ಗೆ ಕುತೂಹಲ ಮೂಡಿಸಿದೆ.

ಈ ನಡುವೆ ಕಲ್ಕಿ (Kalki) ಸಿನಿಮಾದ ಫೋಟೋವೊಂದು ಲೀಕ್ ಆಗಿತ್ತು. ಸಿನಿಮಾದ ಪ್ರಮುಖ ಗೆಟಪ್ ಒಳಗೊಂಡಿದ್ದ ಆ ಫೋಟೋವನ್ನು ಯಾರು ಲೀಕ್ ಮಾಡಿದ್ದಾರೆ ಎಂದು ನಿರ್ಮಾಣ ಸಂಸ್ಥೆ ತಲೆಕೆಡಿಸಿಕೊಂಡಿತ್ತು. ಸಿನಿಮಾ ರಿಲೀಸ್ ಗೂ ಮುನ್ನ ಹೀಗೆ ಪಾತ್ರಗಳ ಬಗ್ಗೆ ರಿವಿಲ್ ಮಾಡುತ್ತಿರುವುದು ಕೋಪ ತರಿಸಿತ್ತು. ಇದೀಗ ನಿರ್ಮಾಪಕರು ಈ ಕುರಿತು ಪೊಲೀಸ್ ಠಾಣೆಯ ಮೆಟ್ಟಿಲು ಏರಿದ್ದಾರೆ.

ಕಲ್ಕಿ ಸಿನಿಮಾದ ವಿಎಫ್ಎಕ್ಷ್  ಮಾಡುತ್ತಿರುವ ಸಂಸ್ಥೆಯೇ ಫೋಟೋವನ್ನು ಲೀಕ್ ಮಾಡಿದೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಸಂಸ್ಥೆಯ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ನಿರ್ಮಾಪಕರು ಪೊಲೀಸ್ ಮೊರೆ ಹೋಗಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರುವುದಾಗಿ ಅವರು ತಿಳಿಸಿದ್ದಾರೆ.

ಭಾರೀ ಬಜೆಟ್ ನಲ್ಲಿ ರೆಡಿ ಆಗಿರುವ ಕಲ್ಕಿ ಚಿತ್ರಕ್ಕೆ ಈ ಹಿಂದೆ ಪ್ರಾಜೆಕ್ಟ್ ಕೆ (Project K) ಹೆಸರಿನಿಂದ ಕರೆಯಲಾಗುತ್ತಿತ್ತು. ಸಿನಿಮಾದ ಗ್ಲಿಂಪ್ಸ್  (Glimpse) ರಿಲೀಸ್ ದಿನ ಅಸಲಿ ಹೆಸರನ್ನು ಅನೌನ್ಸ್ ಮಾಡಲಾಯಿತು. ಈ ಗ್ಲಿಂಪ್ಸ್ ನಲ್ಲಿ ಸಾಕಷ್ಟು ಸಂಗತಿಗಳನ್ನು ನಿರ್ದೇಶಕರು ಹೇಳಿದ್ದರು.

 

ಈ ಸಿನಿಮಾದ ಶೂಟಿಂಗ್ ಈಗಾಗಲೇ ಶುರುವಾಗಿದ್ದು, ಪ್ರಭಾಸ್ ಜೊತೆ ಕಮಲ್ ಹಾಸನ್ (Kamal Haasan),  ರಾಣಾ ದಗ್ಗುಬಾಟಿ ಈಗಾಗಲೇ ಅಮೆರಿಕಾಗೆ ಪ್ರವಾಸ ಬೆಳೆಸಿದ್ದಾರೆ. ಸುಮಾರು 600 ಕೋಟಿಗೂ ಅಧಿಕ ಬಜೆಟ್ ನಲ್ಲಿ ಈ ಸಿನಿಮಾ ತಯಾರಾಗಲಿದ್ದು, ಅನೇಕ ದಿಗ್ಗಜ ಕಲಾವಿದರು ಈ ಚಿತ್ರಕ್ಕಾಗಿ ಒಂದಾಗಿದ್ದಾರೆ. ಇಷ್ಟೊಂದು ನಿರೀಕ್ಷೆ ಇಟ್ಟುಕೊಂಡಿರುವ ಸಿನಿಮಾದ ಫಸ್ಟ್ ಲುಕ್ (First Look) ಬೇರೆ ಹಂತದಲ್ಲಿ ಇರಬೇಕಿತ್ತು ಎಂದು ಅಭಿಮಾನಿಗಳು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]