ಕಲಬುರಗಿ: ಹೆರಿಗೆಗೆ ಎಂದು ಆಸ್ಪತ್ರೆಗೆ ಬಂದ ಗರ್ಭಿಣಿಯೊಬ್ಬರು ಆಸ್ಪತ್ರೆಯ ಮುಖ್ಯ ದ್ವಾರದಲ್ಲಿಯೇ ಮಗುವಿಗೆ ಜನ್ಮ ನೀಡಿದ ಘಟನೆ ಕಲಬುರಗಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿಂದು ನಡೆದಿದೆ.

ಕಲಬುರಗಿ ತಾಲೂಕಿನ ಕಮಲಾಪೂರ ತಾಂಡಾ ನಿವಾಸಿ ಸುಮನ್ ಚೌವ್ಹಾಣ್ ಎಂಬ ಮಹಿಳೆ ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಲು ಆಟೋದಲ್ಲಿ ಬಂದಿದ್ದರು. ಆದರೆ ಆಸ್ಪತ್ರೆ ಒಳಗೆ ಪ್ರವೇಶಿಸಬೇಕು ಎನ್ನುವಷ್ಟರಲ್ಲೇ ಹೆರಿಗೆ ನೋವು ಕಾಣಿಸಿಕೊಂಡು ಕುಸಿದು ಕುಳಿತಿದ್ದಾರೆ. ಈ ಸಮಯದಲ್ಲಿ ಕುಳಿತಲ್ಲಿಯೇ ಸುಮನ್ ಅವರಿಗೆ ಹೆರಿಗೆಯಾಗಿದೆ. ಈ ವೇಳೆ ಆಸ್ಪತ್ರೆಗೆ ಬಂದಿದ್ದ ಇತರೇ ಮಹಿಳೆಯರು ನೆರವಾಗಿದ್ದಾರೆ.
ಆಸ್ಪತ್ರೆಯ ಪ್ರವೇಶ ದ್ವಾರದಲ್ಲಿಯೇ ಹೆರಿಗೆಯಾಗಿದರೂ ತಾಯಿ ಮಗು ಆರೋಗ್ಯವಾಗಿದ್ದಾರೆ. ಹೆರಿಗೆಯಾದ ನಂತರ ಇಬ್ಬರನ್ನು ಆಸ್ಪತ್ರೆಯ ವಾರ್ಡ್ ಗೆ ಶಿಫ್ಟ್ ಮಾಡಲಾಗಿದೆ.
https://www.youtube.com/watch?v=zUFXZZKMtwY



Leave a Reply