ಬೊಮ್ಮಾಯಿಗೆ ಸಂಪೂರ್ಣ ಬೆಂಬಲ: ನಿರಾಣಿ

ಕಲಬುರಗಿ: ಬಸವರಾಜ್ ಬೊಮ್ಮಾಯಿ ಒಳ್ಳೆ ಕೆಲಸ ಮಾಡುತ್ತಿದ್ದಾರೆ. ಬೊಮ್ಮಾಯಿಗೆ ನಮ್ಮ ಸಂಪೂರ್ಣ ಬೆಂಬಲ ಇದೆ ಎಂದು ಕೈಗಾರಿಕಾ ಸಚಿವ ಮುರಗೇಶ್ ನಿರಾಣಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವರಾಜ ಬೊಮ್ಮಾಯಿ ತಂದೆಯವರು ಸಿಎಂ ಆಗಿ ಕೆಲಸ ಮಾಡಿದ್ದಾರೆ. ಅವರು ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ಅವರೇ ಸಿಎಂ ಆಗಿ ಮುಂದುವರೆಯುತ್ತಾರೆ ಎಂದ ಅವರು ನಾನು ಸಿಎಂ ಆಗುವ ಮಾತೆ ಬರೋದಿಲ್ಲ. ನಾನು ಸಿಎಂ ಆಕಾಂಕ್ಷಿಯಲ್ಲ ಎಂದರು.

2023ರಲ್ಲಿ ಬೊಮ್ಮಾಯಿ ನೇತೃತ್ವದಲ್ಲಿ ನಾವು ಚುನಾವಣೆಗೆ ಹೊಗುತ್ತೇವೆ. ಅಷ್ಟೇ ಅಲ್ಲದೇ 2023ರಲ್ಲಿ ನಡೆಯುವ ಚುನಾವಣೆಯಲ್ಲಿ 125ಕ್ಕಿಂತ ಹೆಚ್ಚು ಸೀಟುಗಳು ಗೆಲ್ಲುವ ವಿಶ್ವಾಸ ಇದೆ ಎಂದ ಅವರು, 125ಕ್ಕಿಂತ ಹೆಚ್ಚು ಸೀಟು ಬಂದ ಮೇಲೆ ಸಂಘ ಪರಿವಾರ, ಹೈಕಮಾಂಡ್ ಯಾರು ಸಿಎಂ ಆಗಬೇಕು ಅಂತಾ ತಿರ್ಮಾನ ಮಾಡುತ್ತಾರೆ ಎಂದು ತಿಳಿಸಿದರು.

ನಾನಂತು ಸಿಎಂ ಆಗುವ ಆಸೆಯು ಇಟ್ಟುಕೊಂಡಿಲ್ಲ. ಆ ಕನಸನ್ನು ಕಂಡಿಲ್ಲ. ಮುಂದೆ ನನಗೆ ಪಕ್ಷ ಏನಾದರೂ ಶಾಸಕ ಸ್ಥಾನಕ್ಕೆ ನಿಲ್ಲಬೇಡ. ಪಕ್ಷದ ಕೆಲಸ ಮಾಡಿಕೊಂಡು ಇರೋದಕ್ಕೆ ಹೇಳಿದರೂ, ಅದಕ್ಕೂ ಸಿದ್ಧ ಎಂದರು.ಇದನ್ನೂ ಓದಿ: ಕೆಬಿಸಿ ನಿರೂಪಣೆ ಒಪ್ಪಿಕೊಳ್ಳಲು ನಿಜವಾದ ಕಾರಣ ಬಿಚ್ಚಿಟ್ಟ ಬಿಗ್ ಬಿ

ಕೊರೊನಾ ಮೂರನೇ ಅಲೆ ತಡೆಗೆ ಸಿಎಂ ಬೊಮ್ಮಾಯಿ ಮತ್ತು ಆರೋಗ್ಯ ಸಚಿವರು ಕೆಲಸ ಮಾಡುತ್ತಿದ್ದಾರೆ. ಯಾವುದೆ ರೀತಿಯಲ್ಲಿ ತೊಂದರೆ ಆಗದ ಹಾಗೆ ಸರ್ಕಾರ ಕೆಲಸ ಮಾಡೋದಕ್ಕೆ ಮುಂದಾಗಿದೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಸಾಮಾನ್ಯ ವ್ಯಕ್ತಿಯಲ್ಲ ಶಿವರಾಂ, ಅವರಂತೆ ಯಾರು ಮತ್ತೆ ಹುಟ್ಟಿ ಬರಲು ಸಾಧ್ಯವಿಲ್ಲ: ದ್ವಾರಕೀಶ್

Comments

Leave a Reply

Your email address will not be published. Required fields are marked *