ಶಾಲೆಗೆ ಆಗಮಿಸಿದ ಸಚಿವ ಸುಧಾಕರ್‌ಗೆ ರಾಖಿ ಕಟ್ಟಿದ ವಿದ್ಯಾರ್ಥಿನಿಯರು

ಚಾಕ್ಲೇಟ್, ಗುಲಾಬಿ ಹೂ ಕೊಟ್ಟು ವಿದ್ಯಾರ್ಥಿಗಳಿಗೆ ಆತ್ಮಸೈರ್ಯ

ಚಿಕ್ಕಬಳ್ಳಾಪುರ: ಇಂದಿನಿಂದ ರಾಜ್ಯದಲ್ಲಿ 9, 10 ಸೇರಿದಂತೆ ಪಿಯು ಕಾಲೇಜುಗಳ ಆರಂಭ ಹಿನ್ನೆಲೆ, ಚಿಕ್ಕಬಳ್ಳಾಪುರ ನಗರದ ಸರ್ಕಾರಿ ಪ್ರೌಢ ಶಾಲೆ ಹಾಗೂ ವಾಪಸಂದ್ರ ಪ್ರೌಢ ಶಾಲೆಗಳಿಗೆ ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್ ಭೇಟಿ ನೀಡಿ, ಚಾಕಲೇಟ್, ಗುಲಾಬಿ ಹೂ ಕೊಟ್ಟು ವಿದ್ಯಾರ್ಥಿಗಳಿಗೆ ಸ್ವಾಗತ ಕೋರಿದರು.

ಮೊದಲು ನಗರದ ಜೂನಿಯರ್ ಕಾಲೇಜಿನ ಸರ್ಕಾರಿ ಪ್ರೌಢ ಶಾಲೆಗೆ ಭೇಟಿ ನೀಡಿ, ವಿದ್ಯಾರ್ಥಿಗಳಿಗೆ ಚಾಕಲೇಟ್ ಹಾಗೂ ಗುಲಾಬಿ ಹೂ ಕೊಟ್ಟು ಸ್ವಾಗತಿಸಿದರು. ನಂತರ ವಾಪಸಂದ್ರ ಪ್ರೌಢ ಶಾಲೆಗೆ ಭೇಟಿ ನೀಡಿದ ಸಚಿವರು ಅಲ್ಲೂ ವಿದ್ಯಾರ್ಥಿಗಳಿಗೆ ಚಾಕಲೇಟ್, ಹೂ ಕೊಟ್ಟು ಶುಭ ಹಾರೈಸಿದರು. ಇದೇ ವೇಳೆ ವಿದ್ಯಾರ್ಥಿನಿಯರು ಸಚಿವರಿಗೆ ರಾಖಿ ಕಟ್ಟಿ ರಕ್ಷಾ ಬಂಧನದ ಶುಭಾಶಯ ತಿಳಿಸಿದರು. ಇದನ್ನೂ ಓದಿ: ಜುಲೈ ನಂತರ ಕೊರೊನಾ ತವರೂರಿನಲ್ಲಿ ವರದಿಯಾಗಿಲ್ಲ ಪ್ರಕರಣ

ಈ ವೇಳೆ ಮಾತನಾಡಿದ ಅವರು, ಕೋವಿಡ್ ಬಂದ ನಂತರ ಕಳೆದ ಒಂದೂವರೆ ವರ್ಷದಿಂದ ಶಾಲೆಗಳ ಆರಂಭ ಆಗಿರಲಿಲ್ಲ. ಶಿಕ್ಷಣ ಕ್ಷೇತ್ರಕ್ಕೆ ಅಪಾರ ನಷ್ಟ ಸಂಭವಿಸಿದ್ದು. ಇದರಿಂದ ವಿದ್ಯಾರ್ಥಿಗಳ ಭವಿಷ್ಯ ಮಂಕಾಗಿತ್ತು. ವಿದ್ಯಾರ್ಥಿಗಳ ಆರೋಗ್ಯದ ಜೊತೆಗೆ ಶೈಕ್ಷಣಿಕ ಬದುಕು ರೂಪಿಸೋದು ಸರ್ಕಾರದ ಬಹುದೊಡ್ಡ ಹೊಣೆಗಾರಿಕೆ, ಜವಾಬ್ದಾರಿ, ಹೀಗಾಗಿ ಕೊರೊನಾ ಮುನ್ನೆಚ್ಚರಿಕೆ ಕ್ರಮಗಳ ಜೊತೆ ಶಾಲೆಗಳ ಆರಂಭ ಮಾಡಲಾಗಿದೆ ಎಂದರು. ಇದನ್ನೂ ಓದಿ: ವಿದ್ಯಾರ್ಥಿಗಳ ಕೈಯಲ್ಲಿ ದೀಪ ಬೆಳಗಿಸಿ ಸ್ವಾಗತ ಕೋರಿದ ಶಿಕ್ಷಕರು

ಮುಂದಿನ ದಿನಗಳಲ್ಲಿ ತಾಂತ್ರಿಕ ಸಲಹ ಸಮಿತಿ ಜೊತೆ ಚರ್ಚೆ ಮಾಡಿ ಎಲ್ಲಾ ತರಗತಿಗಳ ಪ್ರಾರಂಭದ ನಿರ್ಧಾರ ಕೈಗೊಳ್ಳಲಾಗುವುದು ಅಂತ ತಿಳಿಸಿದರು. ವಿದ್ಯಾರ್ಥಿಗಿಗೆ ಆತ್ಮಸ್ಥೈರ್ಯ ತುಂಬುವ ಸಲುವಾಗಿ ಶಾಲೆಗಳಿಗೆ ಭೇಟಿ ನೀಡಲಾಗಿದೆ. ಇದೇ ವೇಳೆ ಇಂದಿನಿಂದ ರಾಜ್ಯದಲ್ಲಿ ಉನ್ನತ ಶಿಕ್ಷಣಕ್ಕೆ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮಾಡಲಾಗಿದ್ದು. ಇದೊಂದು ಉತ್ತಮ ಶಿಕ್ಷಣ ನೀತಿ. ಈ ನೀತಿ ಜಾರಿಗೆ ಬರುವ ಮುನ್ನ ಚರ್ಚೆಗೆ ಅವಕಾಶ ಇತ್ತು. ಆಗ ಸಿದ್ದರಾಮಯ್ಯ ನವರು ಸಹ ಸಲಹೆ ಗಳನ್ನ ಕೊಡಬಹುದಿತ್ತು. ಆದರೆ ಈಗ ಅಪಸ್ವರ ಅನುಮಾನ ಪಡೋದಯ ಸರಿಯಲ್ಲ ಎಂದರು.

Comments

Leave a Reply

Your email address will not be published. Required fields are marked *