ಗನ್ ಹಿಡಿದು ‘ಕಿಲ್ಲರ್’ ಕಥೆ ಹೇಳೋಕೆ ಸಜ್ಜಾದ ಜ್ಯೋತಿ ರೈ

ನ್ನಡದ ಜೋಗುಳ, ಗೆಜ್ಜೆಪೂಜೆ ಸೀರಿಯಲ್ ಮೂಲಕ ಗಮನ ಸೆಳೆದಿದ್ದ ಕುಡ್ಲದ ಬೆಡಗಿ ಜ್ಯೋತಿ ರೈ (Jyoti Rai) ಅವರು ಸೌತ್‌ನಲ್ಲಿ ಬ್ಯುಸಿಯಾಗಿದ್ದಾರೆ. ಈ ಬಾರಿ ಗನ್ ಹಿಡಿದು ಕಿಲ್ಲರ್ ಕಥೆ ಹೇಳೋಕೆ ಅವರು ರೆಡಿಯಾಗಿದ್ದಾರೆ. ಇದನ್ನೂ ಓದಿ:ಮಂತ್ರವಾದಿ ಗೆಟಪ್‌ನಲ್ಲಿ ಬಂದ ಸಮಂತಾ- ಏನಿದು ಹೊಸ ಅವತಾರ?

‘ಕಿಲ್ಲರ್’ ಎಂಬ (Killer Film) ಸಿನಿಮಾದಲ್ಲಿ ಜ್ಯೋತಿ ರೈ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ನಟಿಯ ಪತಿ ಪೂರ್ವಜ್ (Poorvaj) ಅವರೇ ನಿರ್ದೇಶನ ಮಾಡಿದ್ದಾರೆ. ಕ್ರೈಮ್ ಥ್ರಿಲ್ಲರ್ ಕಥೆ ಹೇಳಲು ರೆಡಿಯಾಗಿದ್ದಾರೆ. ಕನ್ನಡ ಹಾಗೂ ತೆಲುಗಿನಲ್ಲಿ ಸಿನಿಮಾ ಮೂಡಿ ಬರಲಿದೆ. ಈ ಚಿತ್ರದ ಮೊದಲ ಗ್ಲಿಂಪ್ಸ್ ಏ.30ರಂದು ರಿವೀಲ್ ಆಗಲಿದೆ. ಇದನ್ನೂ ಓದಿ:‘ಥಾಮಾ’ ಚಿತ್ರಕ್ಕಾಗಿ ಊಟಿಯಲ್ಲಿ ಬೀಡುಬಿಟ್ಟ ರಶ್ಮಿಕಾ ಮಂದಣ್ಣ

‘ಕಿಲ್ಲರ್’ ಚಿತ್ರದ ಜೊತೆ ‘ಮಾಸ್ಟರ್ ಪೀಸ್’ ಎಂಬ ಚಿತ್ರ ಕೂಡ ಜ್ಯೋತಿ ಮಾಡುತ್ತಿದ್ದಾರೆ. ಅದನ್ನು ಪೂರ್ವಜ್ ಅವರೇ ನಿರ್ದೇಶನ ಮಾಡುತ್ತಿದ್ದು, ಮೇನಲ್ಲಿ ಶೂಟಿಂಗ್ ಶುರುವಾಗಲಿದೆ. ಸದ್ಯ ನಟಿಯ ಸಿನಿಮಾ ಸುದ್ದಿ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.