ಸೋಶಿಯಲ್ ಮೀಡಿಯಾದಲ್ಲಿ ನಿಂದಿಸಿದ್ದಕ್ಕೆ ಯುವಕನ ಅಪಹರಿಸಿ ಕೊಂದರು!

ನವದೆಹಲಿ: ಯುವಕ ಸೋಶಿಯಲ್ ಮೀಡಿಯಾದಲ್ಲಿ ನಿಂದಿಸಿನೆಂಬ ಕಾರಣಕ್ಕೆ ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ದೆಹಲಿಯಲ್ಲಿ ನಡೆದಿದೆ.

ಸೋಶಿಯಲ್ ಮೀಡಿಯಾದಲ್ಲಿ ಹಾಕಿದ ರೀಲ್ ಅನ್ನು 17 ವರ್ಷದ ಯುವಕ ನಿಂದಿಸಿದ್ದಾನೆ. ಈ ಕ್ಷುಲಕ ಕಾರಣಕ್ಕೆ ಕೋಪಗೊಂಡ ರೀಲ್ ಹಾಕಿದ ಯುವಕರ ಗುಂಪು ಮತ್ತು ಸ್ಥಳೀಯ ರೌಡಿಗಳು ಆತನನ್ನು ಅಪಹರಿಸಿ ಇರಿದು ಕೊಂದಿದ್ದಾರೆ. ಇದನ್ನೂ ಓದಿ: ಬುಕ್ ಮಾಡಿದ್ದು 1 ಲಕ್ಷ ರೂ. ಐಫೋನ್ ಆದ್ರೆ ಬಂದಿದ್ದು ಚಾಕೊಲೇಟ್

ಘಟನೆ ಸಂಬಂಧ ಉತ್ತಮ್ ನಗರ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ. ಈಗಾಗಲೇ ಪೊಲೀಸರು ಮೂವರನ್ನು ಬಂಧಿಸಿದ್ದು, ಇನ್ನುಳಿದ ಆರೋಪಿಗಳನ್ನು ಹಿಡಿಯಲು ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಪೊಲೀಸರು, ಮೃತ ಮೊಹಮ್ಮದ್ ಶೌಕತ್ ತನ್ನ ಪೋಷಕರು ಮತ್ತು ಮೂವರು ಸಹೋದರಿಯರೊಂದಿಗೆ ದೆಹಲಿಯಲ್ಲಿ ವಾಸ ಮಾಡುತ್ತಿದ್ದ. ಈ ಕೃತ್ಯ ಭಾನುವಾರ ಸಂಜೆ ನಡೆದಿದ್ದು, ಆತನ ಸ್ನೇಹಿತರು ಈತನನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆ ಮಾಡಿದ್ದಾರೆ. ತಕ್ಷಣ ಮೊಹಮ್ಮದ್ ಕುಟುಂಬಕ್ಕೆ ತಿಳಿಸಿದ್ದಾರೆ ಎಂದು ವಿವರಿಸಿದರು.

ಮೊಹಮ್ಮದ್ ಕುಟುಂಬದವರು ಆತನನ್ನು ಡಿಡಿಯು ಆಸ್ಪತ್ರೆಗೆ ದಾಖಲಿಸಿದರು. ಅಷ್ಟರಲ್ಲಾಗಲೇ ಮೊಹಮ್ಮದ್ ಸಾವನ್ನಪ್ಪಿದ್ದಾನೆ. ಆತನ ದೇಹದಲ್ಲಿ ಎಂಟು ಗಾಯಗಳಾಗಿದ್ದು, ಐಸ್ ಪಿಕ್ ನಿಂದ ಆರೋಪಿಗಳು ಇರಿದಿದ್ದಾರೆ. ಆತನ ಮುಖದ ಮೇಲೆ ಗಾಯದ ಗುರುತುಗಳು ಕಂಡುಬಂದಿವೆಯೆಂದು ವೈದ್ಯರು ತಿಳಿಸಿದ್ದಾರೆ ಎಂದರು.

ಮೃತನ ಸಹೋದರಿ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ನನ್ನ ಸಹೋದರ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ. ಭಾನುವಾರ ರಜೆಯಲ್ಲಿದ್ದ. ಸ್ನೇಹಿತರನ್ನು ಭೇಟಿ ಮಾಡುತ್ತೇನೆ ಎಂದು ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಹೋಗಿದ್ದ. ಆದರೆ ರಾತ್ರಿಯಾದರೂ ಹಿಂತಿರುಗಲಿಲ್ಲ. ಆರೋಪಿಗಳು ನನ್ನ ಸಹೋದರನನ್ನು ಸ್ಥಳೀಯ ಮಾರುಕಟ್ಟೆಯಿಂದ ಅಪಹರಿಸಿ ಫ್ಲಾಟ್‍ಗೆ ಕರೆದೊಯ್ದ ಕೊಂದಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ:  ನೈಟ್ ಕರ್ಫ್ಯೂ – ಸರ್ಕಾರದ ವಿರುದ್ಧ ಹೋಂಸ್ಟೇ, ರೆಸಾರ್ಟ್ ಮಾಲೀಕರ ಅಸಮಾಧಾನ

ಇದಕ್ಕೆ ಕಾರಣವೇನು ಎಂದು ಪ್ರಶ್ನಿಸಿದಕ್ಕೆ ಉತ್ತರಿಸಿದ ಆಕೆ, ಸೋಶಿಯಲ್ ಮೀಡಿಯಾದಲ್ಲಿ ಆರೋಪಿಗಳು ರೀಲ್ ಮಾಡಿದ್ದು, ಅದನ್ನು ಪೋಸ್ಟ್ ಮಾಡಿದ್ದರು. ಅದನ್ನು ನನ್ನ ಸಹೋದರ ಟೀಕಿಸಿದ್ದ. ಈ ಪರಿಣಾಮ ಆರೋಪಿಗಳು ಕೋಪಗೊಂಡು ಈ ಕೃತ್ಯವನ್ನು ಎಸಗಿದ್ದಾರೆ ಎಂದು ತಿಳಿಸಿದರು.

Comments

Leave a Reply

Your email address will not be published. Required fields are marked *