ಕರ್ನಾಟಕ ಹೈಕೋರ್ಟ್ ಸಿಜೆಯಾಗಿ ನ್ಯಾ.ವಿಭು ಬಾಖರೂ ಹೆಸರು ಶಿಫಾರಸು

– ಸುಪ್ರೀಂ ಕೋರ್ಟ್ ಕೊಲಿಜಿಯಂ ಸಭೆಯಲ್ಲಿ ತೀರ್ಮಾನ

ನವದೆಹಲಿ: ಕರ್ನಾಟಕ ಹೈಕೋರ್ಟ್‌ನ (Karnataka High Court) ಮುಖ್ಯ ನ್ಯಾಯಮೂರ್ತಿಯಾಗಿ ವಿಭು ಬಾಖರೂ (Vibhu Bakhru) ಹೆಸರನ್ನು ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸು ಮಾಡಿದೆ.

ಹಾಲಿ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಅವರು ಸುಪ್ರೀಂ ಕೋರ್ಟ್ ಜಡ್ಜ್ ಆಗಿ ಪದೋನ್ನತಿ ಮಾಡಲು ಕೊಲಿಜಿಯಂ ಸಭೆ ಇಂದು ನಡೆದ ಸಭೆಯಲ್ಲಿ ಶಿಫಾರಸು ಮಾಡಿತ್ತು. ಇದನ್ನೂ ಓದಿ: ಕರ್ನಾಟಕ ಸಿಜೆ ಸೇರಿ ಮೂವರ ಹೆಸರು ಸುಪ್ರೀಂ ಕೋರ್ಟ್ ಜಡ್ಜ್ ನೇಮಕಕ್ಕೆ ಶಿಫಾರಸು

ಈ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ವಿಭು ಬಾಖರೂ ಹೆಸರನ್ನು ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಾಧೀಶರ ಹುದ್ದೆಗೆ ಶಿಫಾರಸು ಮಾಡಿದೆ. ನ್ಯಾ. ವಿಭು ಅವರು ಸದ್ಯ ದೆಹಲಿ ಹೈಕೋರ್ಟ್ ಜಡ್ಜ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ನ್ಯಾ. ವಿಭು ಅವರ ಜೊತೆಗೆ ಇನ್ನೂ ನಾಲ್ವರು ಜಡ್ಜ್ ಗಳ ಪದೋನ್ನತಿಗೆ ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸು ಮಾಡಿದೆ. ಇದನ್ನೂ ಓದಿ: ಭಯೋತ್ಪಾದನೆ ವಿರುದ್ಧ ಭಾರತದ ದಿಟ್ಟ ಹೋರಾಟಕ್ಕೆ ಬೆಂಬಲ – ಸ್ಲೊವೇನಿಯಾದಲ್ಲಿ ಸಂಸದ ಕ್ಯಾ. ಚೌಟ ಒಳಗೊಂಡ ಸರ್ವಪಕ್ಷ ನಿಯೋಗ