ಆರ್.ಆರ್.ಆರ್ ಸಿನಿಮಾ ಮೂಲಕ ಕನ್ನಡ ಸಿನಿಮಾ ರಂಗಕ್ಕೂ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟಿರುವ ಜ್ಯೂನಿಯರ್ ಎನ್.ಟಿ.ಆರ್ ಇದೀಗ ಬ್ಯಾಕ್ ಟು ಬ್ಯಾಕ್ ಕನ್ನಡ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಹಾಗಂತ ನೇರವಾಗಿ ಈ ಸಿನಿಮಾಗಳು ಕನ್ನಡದಲ್ಲಿ ನಿರ್ಮಾಣವಾಗದೇ ಇದ್ದರೂ, ಮೂಲ ಸಿನಿಮಾಗಳ ಜೊತೆಗೆ ಕನ್ನಡದಲ್ಲೂ ಅವುಗಳು ಡಬ್ ಆಗಿ ಬಿಡುಗಡೆ ಆಗಲಿವೆ. ಇದನ್ನೂ ಓದಿ : ‘ಧಾಕಡ್’ ಸೋಲಿಗೆ ಕಂಗೆಟ್ಟ ಕಂಗನಾ ರಣಾವತ್ : ವೀಕೆಂಡ್ ನಲ್ಲೂ ವೀಕ್ ಕಲೆಕ್ಷನ್

ಆರ್.ಆರ್.ಆರ್ ಸಿನಿಮಾ ಕನ್ನಡದಲ್ಲಿ ಯಶಸ್ವಿಯಾದ ನಂತರ ಬಹುತೇಕ ಬಹುಕೋಟಿ ಬಜೆಟ್ ಚಿತ್ರಗಳು ಕನ್ನಡ ಭಾಷೆಗೂ ಡಬ್ ಮಾಡಿ ಬಿಡುಗಡೆ ಮಾಡುತ್ತಿದ್ದಾರೆ. ಹೀಗಾಗಿ ಜ್ಯೂನಿಯರ್ ಎನ್.ಟಿ.ಆರ್ ನಟನೆಯ ಎರಡು ಚಿತ್ರಗಳು ಇದೀಗ ಕನ್ನಡಕ್ಕೆ ಡಬ್ ಆಗಲಿವೆ. ಮೊನ್ನೆಯಷ್ಟೇ ಎರಡೂ ಸಿನಿಮಾಗಳ ಫಸ್ಟ್ ಲುಕ್ ಮತ್ತು ಟೀಸರ್ ಅನ್ನು ಬಿಡುಗಡೆ ಮಾಡಿವೆ ಆಯಾ ಚಿತ್ರತಂಡ. ಇದನ್ನೂ ಓದಿ : ಶೀಘ್ರದಲ್ಲೇ ಶಿವರಾಜ್ ಕುಮಾರ್ ಮತ್ತು ಪ್ರಭುದೇವ ಸಿನಿಮಾ ಶುರು : ಯೋಗರಾಜ್ ಭಟ್ ನಿರ್ದೇಶಕ

ಒಂದು ಚಿತ್ರವನ್ನು ಕೋರಟಾಲ ಶಿವ ನಿರ್ದೇಶನ ಮಾಡುತ್ತಿದ್ದರೆ, ಮತ್ತೊಂದು ಸಿನಿಮಾವನ್ನು ಕನ್ನಡದವರೇ ಆದ ಪ್ರಶಾಂತ್ ನೀಲ್ ಡೈರೆಕ್ಷನ್ ಮಾಡುತ್ತಿದ್ದಾರೆ. ಎರಡೂ ಚಿತ್ರಗಳ ಫಸ್ಟ್ ಲುಕ್ ಜ್ಯೂನಿಯರ್ ಹುಟ್ಟು ಹಬ್ಬದ ದಿನದಂದು ಬಿಡುಗಡೆ ಆಗಿವೆ. ಅದರಲ್ಲೂ ಕೋರಟಾಲ ಶಿವ ನಿರ್ದೇಶನದ ಚಿತ್ರದ ಟೀಸರ್ ರಿಲೀಸ್ ಆಗಿದ್ದು, ಸ್ವತಃ ಜೂ.ಎನ್.ಟಿ.ಆರ್ ಅವರೇ ಕನ್ನಡದಲ್ಲಿ ಡೈಲಾಗ್ ಹೊಡೆದಿದ್ದಾರೆ. ಅವರಿಗೆ ಅಲ್ಪಸ್ವಲ್ಪ ಕನ್ನಡವೂ ಬರುವುದರಿಂದ, ಚೆನ್ನಾಗಿಯೇ ಕನ್ನಡದಲ್ಲಿ ಡಬ್ ಮಾಡಿದ್ದಾರೆ. ಇದನ್ನೂ ಓದಿ: ವೀಲ್‍ಚೇರ್ ರೋಮಿಯೋಗೆ ಮಯೂರಿ ಜೂಲಿಯಟ್ – ‘ಆ’ ಸವಾಲಿನ ಪಾತ್ರ ಒಪ್ಪಿಕೊಂಡಿದ್ದರ ಹಿಂದಿದೆ ಒಂದು ಕಥಾನಕ!

ಕೆಲವು ಬಾರಿ ಧೈರ್ಯಕ್ಕೆ ಕೂಡ ಗೊತ್ತಿರಲ್ಲ, ಅವಶ್ಯಕತೆ ಮೀರಿ ತಾನಿರಕೂಡದು ಅಂತ. ಆಗ ಭಯಕ್ಕೆ ಗೊತ್ತಾಗ್ಬೇಕು ತಾನು ಬರಬೇಕಾದ ಸಮಯ ಬಂದಿದೆ ಅಂತ. ಬರ್ತಾ ಇದ್ದೀನಿ.. ಎನ್ನುವ ಖಡಕ್ ಡೈಲಾಗ್ ಅನ್ನು ಜ್ಯೂನಿಯರ್ ಹೊಡೆದಿದ್ದಾರೆ. ಇದು ಇವರ 30ನೇ ಸಿನಿಮಾವಾದರೆ, 31ನೇ ಸಿನಿಮಾವನ್ನು ಪ್ರಶಾಂತ್ ನೀಲ್ ನಿರ್ದೇಶನ ಮಾಡಲಿದ್ದಾರೆ.

Leave a Reply