ಸತೀಶ್ ನೀನಾಸಂ ಹುಟ್ಟುಹಬ್ಬಕ್ಕೆ ಭರ್ಜರಿ ಗಿಫ್ಟ್ಸ್‌: ದಾಖಲೆ ರೀತಿಯಲ್ಲಿ ಅಭಿಮಾನಿಗಳಿಗೆ ಉಡುಗೊರೆ

ಲೂಸಿಯಾ, ಬ್ಯೂಟಿಫುಲ್ ಮನಸುಗಳು, ಅಯೋಗ್ಯ, ಸಿನಿಮಾಗಳ ಮೂಲಕ ಸಿನಿಪ್ರೇಕ್ಷಕರ ಮನಗೆದ್ದ ನಟ ಸತೀಶ್ ನೀನಾಸಂ ಹುಟ್ಟು ಹಬ್ಬಕ್ಕೆ ಒಂದೇ ದಿನ ಬಾಕಿಯಿದ್ದು, ದಾಖಲೆಯ ರೀತಿಯಲ್ಲಿ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ಕೊಡಲಿದ್ದಾರೆ.

ಅಮೋಘ ನಟನೆಯ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಗಿಟ್ಟಿ ನೆಲೆ ಕಂಡಿರುವ ಪ್ರತಿಭಾವಂತ ನಟ ಸತೀಶ್ ನೀನಾಸಂ (ಜೂ.20)ಕ್ಕೆ ಹುಟ್ಟುಹಬ್ಬವಾಗಿದ್ದು, ಈ ವಿಶೇಷ ದಿನದಂದು ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ನೀಡಲಿದ್ದಾರೆ. ಸತೀಶ್ ನಟನೆಯ ಸಿನಿಮಾ ಅಪ್‌ಡೇಟ್ ಜತೆಗೆ ಚಿತ್ರದ ಲುಕ್, ಟೀಸರ್ ಮೂಲಕ ಅಭಿಮಾನಿಗಳಿಗೆ ಭರ್ಜರಿ ಉಡುಗೊರೆ ಕೊಡಲಿದ್ದಾರೆ.

ಇನ್ನು ಅಯೋಗ್ಯ ಸೂಪರ್ ಸಕ್ಸಸ್ ನಂತರ ರಚಿತಾ ರಾಮ್ ಜತೆ ಸತೀಶ್ ನೀನಾಸಂ ನಟಿಸಿರುವ `ಮ್ಯಾಟ್ನಿ’, ಶ್ರದ್ಧಾ ಶ್ರೀನಾಥ್ ಜತೆ `ಡಿಯರ್ ವಿಕ್ರಮ್’, `ದಸರಾ’, ಹರಿಪ್ರಿಯಾ ಜತೆ `ಪೆಟ್ರೋಮ್ಯಾಕ್ಸ್’ ಮತ್ತು ತಮಿಳಿನ ಸಿನಿಮಾದಲ್ಲೂ ನಟಿಸಿದ್ದು, ಈ ಎಲ್ಲಾ ಚಿತ್ರದ ಪೋಸ್ಟರ್ಸ್ ಸತೀಶ್ ಹುಟ್ಟುಹಬ್ಬದಂದು ರಿವೀಲ್ ಆಗಲಿದೆ.‌ ಇದನ್ನೂ ಓದಿ: ವೈರಲ್ ಆಯ್ತು ಪರಿಣಿತಿ ಚೋಪ್ರಾ ಸ್ಕೂಬಾ ಡೈವಿಂಗ್ ವಿಡಿಯೋ

ಕಳೆದ ವರ್ಷ ಕೊರೊನಾ ನಿಮಿತ್ತ ನಟ ಸತೀಶ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರಲಿಲ್ಲ. ಈ ವರ್ಷವು ವಯಕ್ತಿಕ ಕಾರಣಗಳಿಂದ ಅಭಿಮಾನಿಗಳ ಜೊತೆ ತಮ್ಮ ಹುಟ್ಟಹಬ್ಬಕ್ಕೆ ಆಚರಿಸಿಕೊಳ್ಳಲಾಗುತ್ತಿಲ್ಲ. ಇದೀಗ ಬರ್ತಡೇ ಪ್ರಯುಕ್ತ ತಮ್ಮ ಅಭಿಮಾನಿಗಳಿಗೆ ಚಿತ್ರದ ಹೊಸ ಲುಕ್ ಮೂಲಕ ಗುಡ್ ನ್ಯೂಸ್ ಕೊಡ್ತಿದ್ದಾರೆ. ಅಭಿಮಾನಿಗಳು ಕೂಡ ಕಾತರದಿಂದ ಕಾಯ್ತಿದ್ದಾರೆ.

Live Tv

Comments

Leave a Reply

Your email address will not be published. Required fields are marked *