ಜೂಲಿ-2 ಟ್ರೇಲರ್ ಔಟ್: ಹಾಟ್ ಅವತಾರದಲ್ಲಿ ಲಕ್ಷ್ಮೀ ರೈ

ಮುಂಬೈ: ಬಾಲಿವುಡ್‍ನ ಬಹು ನಿರೀಕ್ಷಿತ ಜೂಲಿ-2 ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು, ಪಡ್ಡೆ ಹುಡುಗರ ನಿದ್ದೆಗೆ ನಟಿ ಲಕ್ಷ್ಮೀ ರೈ ಕನ್ನ ಹಾಕಿದ್ದಾರೆ.

ಈಗಗಾಲೇ ತಮಿಳು, ತೆಲಗು, ಮಲೆಯಾಳಂ ಮತ್ತು ಕೆಲವು ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ಲಕ್ಷ್ಮೀ ರೈ ಮೊದಲ ಬಾರಿಗೆ ಬಾಲಿವುಡ್ ಸಿನಿಮಾದಲ್ಲಿ ಮಿಂಚಲಿದ್ದು, ಸಾಕಷ್ಟು ಗ್ಲಾಮರ್ ಆಗಿ ಕಾಣಿಸಿಕೊಳ್ಳುವ ಮೂಲಕ ಹಾಟ್ ಆ್ಯಂಡ್ ಸೆಕ್ಸಿ ಲುಕ್ ನಲ್ಲಿ ಕಣ್ಮನ ಸೆಳೆದಿದ್ದಾರೆ.

ಸೆನ್ಸಾರ್ ಬೋರ್ಡ್ ನ ಮಾಜಿ ಮುಖ್ಯಸ್ಥ ಪಹ್ಲಾಜ್ ನಿಹಲಾನಿ ಸಾರಥ್ಯದಲ್ಲಿ ಜೂಲಿ-2 ಸಿನಿಮಾ ಮೂಡಿಬಂದಿದೆ. ಬಾಲಿವುಡ್ ಸಿನಿಮಾಗಳಲ್ಲಿ ಚಾನ್ಸ್ ಪಡೆಯುವ ಸಲುವಾಗಿ ನಟಿಯೊಬ್ಬಳು ಯಾವ ರೀತಿಯ ತೊಂದರೆ ಮತ್ತು ಲೈಂಗಿಕವಾಗಿ ಕಿರುಕುಳವನ್ನು ಅನುಭವಿಸುತ್ತಾಳೆ ಎನ್ನುವ ಕಥಾ ವಸ್ತುವನ್ನು ಚಿತ್ರ ಹೊಂದಿದೆ.

ನಿರ್ದೇಶಕ ದೀಪಕ್ ಶಿವ್‍ದಸಾನಿ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದು, ರತಿ ಅಗ್ನಿಹೋತ್ರಿ, ಸಾಹಿಲ್ ಸಲಾಥಿಯಾ, ಆದಿತ್ಯ ಶ್ರೀವಾತ್ಸವ್, ರವಿ ಕಿಶನ್ ಮತ್ತು ಪಂಕಜ್ ತ್ರಿಪಾಠಿ ಸಿನಿಮಾದಲ್ಲಿ ಪ್ರಧಾನ ಪಾತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ.

ಜೂಲಿ-2 ಚಿತ್ರ ರೋಮ್ಯಾಂಟಿಕ್, ಸಸ್ಪೆನ್ಸ್ ಕಥಾ ಹಂದರವನ್ನು ಹೊಂದಿದ್ದು, ಅಕ್ಟೋಬರ್ 6ರಂದು ದೇಶಾದ್ಯಂತ ಬಿಡುಗಡೆಗೊಳ್ಳಲಿದೆ. ಈ ಮೊದಲು 2004ರಲ್ಲಿ ತೆರೆಕಂಡಿದ್ದ ಜೂಲಿ ಸಿನಿಮಾದಲ್ಲಿ ನೇಹಾ ದೂಪಿಯಾ ಕಾಣಿಸಿಕೊಂಡಿದ್ದರು.

https://twitter.com/TrollAjithMemes/status/904658361269993472

https://twitter.com/RaaiLaxmiFan/status/904638034255024128

 

Comments

Leave a Reply

Your email address will not be published. Required fields are marked *