ಕೊಲ್ಲೂರು ಮೂಕಾಂಬಿಕೆ ದೇಗುಲದಲ್ಲಿ ಜೂ.ಎನ್‌ಟಿಆರ್

– ರಿಷಬ್, ಪ್ರಶಾಂತ್ ನೀಲ್, ಪ್ರಮೋದ್ ಕುಟುಂಬ ಜೊತೆ ದೇವರ ದರ್ಶನ

ಉಡುಪಿ: ಕೊಲ್ಲೂರು ಮೂಕಾಂಬಿಕೆ (Kollur Mookambika Temple) ದೇವಿಯ ದರ್ಶನಕ್ಕೆ ನಟ ಜೂ.ಎನ್‌ಟಿಆರ್ (Junior NTR) ಕುಟುಂಬ ಆಗಮಿಸಿದೆ. ಕರಾವಳಿ ಜಿಲ್ಲೆ ಉಡುಪಿ (Udupi) ಎರಡನೇ ದಿನದ ಪ್ರವಾಸದಲ್ಲಿರುವ ತಾರಕ್ ರಾಮ್ ಮಧ್ಯಾಹ್ನ ಮಹಾಪೂಜೆ ಸಂದರ್ಭಗಳಲ್ಲಿ ದೇವಸ್ಥಾನಕ್ಕೆ ಆಗಮಿಸಿ ತಾಯಿ ಕೊಲ್ಲೂರಮ್ಮನ ದರ್ಶನ ಮಾಡಿದ್ದಾರೆ.

ಉಡುಪಿ ಜಿಲ್ಲೆಯ ಬೈಂದೂರಿನ ಕೊಲ್ಲೂರು ದೇಗುಲದಲ್ಲಿ ನಟ, ನಿರ್ದೇಶಕ ರಿಷಬ್ ಶೆಟ್ಟಿ, ಕೆಜಿಎಫ್ ಖ್ಯಾತಿಯ ಡೈರೆಕ್ಟರ್ ಪ್ರಶಾಂತ್ ನೀಲ್ ಕುಟುಂಬವೂ ಜೊತೆಯಾಯಿತು. ಲಾಫಿಂಗ್ ಬುದ್ಧ ನಟ ಪ್ರಮೋದ್ ಶೆಟ್ಟಿ ಸಹ ಜೊತೆಗೆ ಬಂದು ದೇವರ ದರ್ಶನ ಮಾಡಿದರು. ನಾಲ್ಕು ಕುಟುಂಬಗಳು ಕೊಲ್ಲೂರಿನಲ್ಲಿ ಜೊತೆಯಾಗಿ ಬಂದು ದರ್ಶನ ಪಡೆದು ಪ್ರಸಾದ ಸ್ವೀಕಾರ ಮಾಡಿದರು. ಇದನ್ನೂ ಓದಿ: ಚಿತ್ರರಂಗದಲ್ಲಿ ಬಾಲಯ್ಯ ಹಾಫ್ ಸೆಂಚುರಿ – ತಲೈವಾ ಗ್ರೇಟ್ ವಿಶ್!

ನಾಲ್ಕು ದಶಕದ ನಂತರ ಜೂ.ಎನ್‌ಟಿಆರ್ ತಾಯಿ ಶಾಲಿನಿ ನಂದಮೂರಿ ಕರಾವಳಿಗೆ ಬಂದಿದ್ದಾರೆ. ಪತ್ನಿ ಲಕ್ಷ್ಮಿ ಪ್ರಣತಿ, ಪ್ರಗತಿ ರಿಷಬ್, ಪ್ರಶಾಂತ್ ನೀಲ್, ಲಿಖಿತಾ ನೀಲ್ ಮೂಕಾಂಬಿಕೆಯ ದರ್ಶನ ಮಾಡಿ ಪ್ರಾಂಗಣದಲ್ಲಿರುವ ಗುಡಿಗಳಿಗೆ ಭೇಟಿ ಕೊಟ್ಟು ಪ್ರಸಾದ ಸ್ವೀಕರಿಸಿದರು. ಕೊಲ್ಲೂರು ಆಡಳಿತದಿಂದ ನಟರಿಗೆ ಗೌರವ ಸಮರ್ಪಣೆ ಮಾಡಲಾಯಿತು. ಇದನ್ನೂ ಓದಿ: ಕೈದಿ ನಂಬರ್‌ ಆಯ್ತು.. ಈಗ ದರ್ಶನ್‌ ಧರಿಸಿದ್ದ ಟೀ ಶರ್ಟ್‌ ಟ್ರೆಂಡ್‌

ಈ ಸಂದರ್ಭದಲ್ಲಿ ಮಾತನಾಡಿದ ತಾರಕ್ ರಾಮ್, ಕೊಲ್ಲೂರು ದೇವಿಯ ದರ್ಶನ ತುಂಬಾ ಚೆನ್ನಾಗಿ ಆಯಿತು. ದರ್ಶನ ಮಾಡಿಸಿದ್ದಕ್ಕೆ ರಿಷಬ್‌ಗೆ ತುಂಬಾ ಧನ್ಯವಾದ. ಮುಂದಿನ ಸಿನಿಮಾ ದೇವರಾ ಬಗ್ಗೆ ದೇವಸ್ಥಾನದಲ್ಲಿ ನಾನು ಏನು ಮಾತನಾಡುವುದಿಲ್ಲ. ದೇಗುಲ ಭೇಟಿ ಬಿಟ್ಟು ದೇವಸ್ಥಾನದಲ್ಲಿ ಬೇರೇನೂ ವಿಚಾರ ಮಾತನಾಡಲು ನಾನು ಬಯಸುವುದಿಲ್ಲ ಎಂದರು. ಇದನ್ನೂ ಓದಿ: ಕೇರಳ ಚಿತ್ರರಂಗ ಆಯ್ತು, ಟಾಲಿವುಡ್‌ನಲ್ಲೂ ಕಂಪನ; ʻದಿ ವಾಯ್ಸ್ ಆಫ್ ವುಮನ್ʼ ವರದಿ ಬಹಿರಂಗಕ್ಕೆ ಸಮಂತಾ ಒತ್ತಾಯ!

ರಿಷಬ್ ಜೊತೆ ಗೆಳೆತನ ಓಡಾಟ ಮಾಡುತ್ತಿರೋದರಿಂದ ಕಾಂತಾರ ಫ್ರೀಕ್ವೆಲ್‌ನಲ್ಲಿ ತಾರಕ್ ನಟಿಸುತ್ತಾರಾ ಎಂಬ ಪ್ರಶ್ನೆ ಓಡಾಡುತ್ತಿದೆ. ಇದಕ್ಕೆ ಉತ್ತರಿಸಿದ ಅವರು, ರಿಷಬ್ ಶೆಟ್ಟಿ ಅವರೇ ಈ ಬಗ್ಗೆ ಪ್ಲಾನ್ ಮಾಡಬೇಕು. ಅವರು ಏನು ಪ್ಲಾನ್ ಮಾಡಿದರೂ ನಾನು ರೆಡಿ ಎಂದರು. ದೇವಸ್ಥಾನದಲ್ಲಿ ಆ ವಿಚಾರ ನಾನು ಮಾತನಾಡುವುದಿಲ್ಲ. ಪ್ರಮೋದ್ ಶೆಟ್ಟಿ ನಟನೆಯ ಲಾಫಿಂಗ್ ಬುದ್ಧ ಸಿನಿಮಾ ನೋಡುತ್ತೇನೆ. ಲಾಫಿಂಗ್ ಬುದ್ಧ ಯಶಸ್ಸಿಗೆ ಪ್ರಮೋದ್ ಶೆಟ್ಟಿಗೆ ರಿಷಬ್ ಅಭಿನಂದಿಸಿದರು. ಇದನ್ನೂ ಓದಿ: ನಾನು ಪವರ್ ಗ್ರೂಪ್‌ನಲ್ಲಿಲ್ಲ, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ – ಹೇಮಾ ಕಮಿಷನ್ ವರದಿಗೆ ಮೋಹನ್‌ಲಾಲ್ ರಿಯಾಕ್ಷನ್‌

ಆಂಧ್ರ ಪ್ರದೇಶದಲ್ಲಿ ವಾಯ್ಸ್ ಆಫ್ ವುಮೆನ್ಸ್ ವರದಿ ಬಿಡುಗಡೆಗೆ ನಟಿಯರು ಆಗ್ರಹಿಸಿದ ವಿಚಾರ, ನಟ ದರ್ಶನ್ ಪ್ರಕರಣ ವಿಚಾರವಾಗಿ ಪ್ರತಿಕ್ರಿಯೆ ನೀಡಲು ಜೂ.ಎನ್‌ಟಿಆರ್, ರಿಷಬ್ ಶೆಟ್ಟಿ ಹಿಂದೇಟು ಹಾಕಿದರು. ಇದನ್ನೂ ಓದಿ: ‘ದಿ ಗೋಟ್’ ಅಡ್ಡಾದಿಂದ ಧೂಳೆಬ್ಬಿಸೋ ಸಾಂಗ್ : ದಳಪತಿ ಫ್ಯಾನ್ಸ್ ದಿಲ್ ಖುಷ್