ಪತ್ರಕರ್ತರು ಏನೇ ಬರೆದ್ರೂ ಅರೆಸ್ಟ್ ಮಾಡುವಂತಿಲ್ಲ: ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ವಕ್ತಾರ

ವಾಷಿಂಗ್ಟನ್: ಪತ್ರಕರ್ತರು ಏನು ಬರೆಯುತ್ತಾರೆ, ಅವರು ಏನು ಟ್ವೀಟ್ ಮಾಡುತ್ತಾರೆ ಈ ಕಾರಣಕ್ಕೆ ಅವರನ್ನು ಜೈಲಿಗೆ ಹಾಕಬಾರದು ಎಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಅವರ ವಕ್ತಾರರು ಹೇಳಿದ್ದಾರೆ.

ಭಾರತದಲ್ಲಿ ಆಲ್ಟ್ ನ್ಯೂಸ್ ಸಹ-ಸಂಸ್ಥಾಪಕ ಮೊಹಮ್ಮದ್ ಜುಬೇರ್ ಬಂಧನವನ್ನು ಉಲ್ಲೇಖಿಸಿ ಆಂಟೋನಿಯೊ ವಕ್ತಾರ ಸ್ಟೀಫನ್ ಡುಜಾರಿಕ್ ಪ್ರತಿಕ್ರಿಯಿಸಿ, ಮೊದಲನೆಯದಾಗಿ ನಾನು ಪ್ರಪಂಚದಾದ್ಯಂತ ಯಾವುದೇ ಸ್ಥಳದಲ್ಲಿ ಜನರು ಮುಕ್ತವಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಅವಕಾಶ ನೀಡುವುದು ಬಹಳ ಮುಖ್ಯ ಎಂದು ಭಾವಿಸುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: AltNews ಸಂಸ್ಥಾಪಕ, ಪತ್ರಕರ್ತ ಮೊಹಮ್ಮದ್ ಜುಬೇರ್ ಅರೆಸ್ಟ್‌

ಪತ್ರಕರ್ತರು ಮುಕ್ತವಾಗಿ ಮತ್ತು ಯಾವುದೇ ಕಿರುಕುಳ, ಬೆದರಿಕೆಯಿಲ್ಲದೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಅವಕಾಶ ಮಾಡಿಕೊಡಬೇಕು. ಪತ್ರಕರ್ತರು ಏನು ಬರೆಯುತ್ತಾರೆ, ಅವರು ಏನು ಟ್ವೀಟ್ ಮಾಡುತ್ತಾರೆ ಎಂದು ಅವರನ್ನು ಜೈಲಿಗೆ ಹಾಕಬಾರದು. ಪತ್ರಕರ್ತ ಮೊಹಮ್ಮದ್ ಜುಬೇರ್ ಬಂಧನವು ಪತ್ರಿಕಾ ಸ್ವಾತಂತ್ರ್ಯಕ್ಕೆ ಧಕ್ಕೆ ಬಂದಂತಾಗಿದೆ ಎಂದು ಹೇಳಿದರು.

ಫ್ಯಾಕ್ಟ್ ಚೆಕ್ ವೆಬ್‍ಸೈಟ್ AltNews ಸಂಸ್ಥಾಪಕ, ಪತ್ರಕರ್ತ ಮೊಹಮ್ಮದ್ ಜುಬೇರ್ ಅವರನ್ನು ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದ ಮತ್ತು ದ್ವೇಷವನ್ನು ಉತ್ತೇಜಿಸುವ ಆರೋಪದ ಅಡಿ ದೆಹಲಿ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: 3 ದಿನದ ಮಗುವನ್ನು ಆಸ್ಪತ್ರೆಯಿಂದ ಹೊತ್ತೊಯ್ದು ಕಚ್ಚಿ ಕೊಂದ ಬೀದಿನಾಯಿ

Live Tv

Comments

Leave a Reply

Your email address will not be published. Required fields are marked *