ಪತ್ರಕರ್ತ ಧೀರಜ್ ಪೊಯ್ಯೆಕಂಡ ಅವರ “ಪರಾಶರ” ಕಾದಂಬರಿ ಬಿಡುಗಡೆ

ಮಂಗಳೂರು: ಪತ್ರಕರ್ತ, ಕಾದಂಬರಿಕಾರ ಧೀರಜ್ ಪೊಯ್ಯೆಕಂಡ ಬರೆದ “ಪರಾಶರ” ಎಂಬ ಕಾದಂಬರಿ ಲೋಕಾರ್ಪಣೆ ಗೊಂಡಿದೆ.

ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್ ಆರ್, ಕಾದಂಬರಿಯನ್ನು ಬಿಡುಗಡೆಗೊಳಿಸಿದ್ದಾರೆ. ಉದಯೋನ್ಮುಖ ಬರಹಗಾರ ಧೀರಜ್ ಪೊಯ್ಯೆಕಂಡ ಬರೆದ ಎರಡನೇ ಕಾದಂಬರಿ “ಪರಾಶರ” ಅತ್ಯಂತ ಹೆಚ್ಚು ಮಾರಾಟವಾಗಲಿ ಮತ್ತು ಮುಂದಿನ ದಿನಗಳಲ್ಲಿ ಇನ್ನಷ್ಟು ಪುಸ್ತಕಗಳನ್ನು ಧೀರಜ್ ಹೊರ ತರಲಿ ಎಂದು ಹಾರೈಸಿದರು. ಇದನ್ನೂ ಓದಿ: ಸಾಹಿತಿ ಧೀರಜ್ ಪೊಯ್ಯೆಕಂಡ ಬರೆದ ಮಿತಿ ಕಾದಂಬರಿ ಬಿಡುಗಡೆ

ಪರಾಶರ ಕಾದಂಬರಿ ಕ್ರೈಂ,ಸಸ್ಪೆನ್ಸ್ ಕಾದಂಬರಿ ಆಗಿದ್ದು, ಪ್ರಸ್ತುತ ಕಾಲಘಟ್ಟದಲ್ಲಿ ಕಾಣಸಿಗುವ ಚಂಚಲ ಸ್ವಭಾವದ ಮಾನವ ಸಂಬಂಧಗಳು ಹಾಗೂ ಸ್ನೇಹ ಹಾಗೂ ಪ್ರೀತಿಯ ವಿವಿಧ ಆಯಾಮಗಳ ವಿಷಯದ ಕುರಿತು ಈ ಕಾದಂಬರಿ ರಚಿತವಾಗಿದೆ ಎಂದು ಕಾದಂಬರಿಯ ಬರಹಗಾರ ಧೀರಜ್ ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಅಪಪ್ರಚಾರಕ್ಕೆ ಜನ ಉತ್ತರಿಸಿದ್ದಾರೆ: ಕೋಟ

Comments

Leave a Reply

Your email address will not be published. Required fields are marked *