ದೇಶಭಕ್ತಿಯ ಜೋಶ್ ಆಕಾಶವನ್ನು ಬಿಟ್ಟಿಲ್ಲ: ಮೆಹಬೂಬಾ ಮುಫ್ತಿ ಕಿಡಿ

ನವದೆಹಲಿ: ಏರ್ ಇಂಡಿಯಾ ವಿಮಾನದ ಸಿಬ್ಬಂದಿಗಳಿಗೆ ‘ಜೈ ಹಿಂದ್’ ಎಂದು ಹೇಳುವುದು ಕಡ್ಡಾಯಗೊಳಿಸಿದ್ದ ಅಧಿಕಾರಿಗಳ ಕ್ರಮವನ್ನು ಜಮ್ಮು ಕಾಶ್ಮೀರದ ಮಾಜಿ ಸಿಎಂ ಮೆಹಾಬೂಬಾ ಮುಫ್ತಿ ಟೀಕೆ ಮಾಡಿ ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿರುವ ಪಿಡಿಪಿ ಪಕ್ಷದ ಮುಖ್ಯಸ್ಥೆ ಮೊಹಬೂಬಾ ಮುಫ್ತಿ, ಚುನಾವಣೆಯ ಸಂದರ್ಭದಲ್ಲಿ, ದೇಶಭಕ್ತಿಯ ಜೋಶ್ ಅಕಾಶವನ್ನು ಬಿಟ್ಟಿಲ್ಲ ಎಂದಿದ್ದಾರೆ. ಅಲ್ಲದೇ ಇದು ಸ್ವಲ್ಪ ಅಚ್ಚರಿಯನ್ನು ತಂದಿದೆ ಎಂದಿದ್ದಾರೆ.

ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಕರಿಗೆ ಸೂಚನೆ ನೀಡಿದ ಬಳಿಕ ‘ಜೈ ಹಿಂದ್’ ಹೇಳುವುದು ಕಡ್ಡಾಯಗೊಳಿಸಿ ಆದೇಶ ನೀಡಿದ ಒಂದು ದಿನದ ಬಳಿಕ ಮುಫ್ತಿ ಅವರು ಈ ಹೇಳಿಕೆ ನೀಡಿದ್ದಾರೆ. ನಿನ್ನೆಯಷ್ಟೇ ಏರ್ ಇಂಡಿಯಾ ಸಂಸ್ಥೆ ತನ್ನ ವಿಮಾನ ಸೇವಾ ಸಿಬ್ಬಂದಿಗೆ ವಿಮಾನದಲ್ಲಿ ಪ್ರಯಾಣಿಕರಿಗೆ ಸೂಚನೆ ನೀಡಿದ ಬಳಿಕ ‘ಜೈ ಹಿಂದ್’ ಎಂದು ಹೇಳುವುದು ಕಡ್ಡಾಯ ಎಂದು ಆದೇಶ ಮಾಡಿತ್ತು.

ಏರ್ ಇಂಡಿಯಾ ನಿರ್ದೇಶಕ ಅಮಿತಾಬ್ ಸಿಂಗ್ ಅವರು ಈ ಆದೇಶ ಹೊರಡಿಸಿದ್ದರು. ಕೇವಲ ವಿಮಾನ ಸೇವಾ ಸಿಬ್ಬಂದಿ ಮಾತ್ರವೇ ಅಲ್ಲದೆ ಕಾಕ್ ಪಿಟ್ ನಿಂದ ಹೊರಡುವ ಸೂಚನೆಗಳ ನಂತರವೂ ‘ಜೈ ಹಿಂದ್’ ಎಂದು ಹೇಳುವಂತೆ ಸೂಚಿಸಲಾಗಿದೆ. ಅಲ್ಲದೇ ತತ್‍ಕ್ಷಣದಿಂದಲೇ ಈ ಆದೇಶ ಪಾಲಿಸುವಂತೆ ತಿಳಿಸಲಾಗಿದೆ.

ಈ ಹಿಂದೆ 2016ರಲ್ಲೂ ಕೂಡ ಏರ್ ಇಂಡಿಯಾದ ಚೇರ್‍ಮನ್ ಆಗಿದ್ದ ಅಶ್ವಿನಿ ಲೋಹಾನಿ ಅವರು ಇಂತಹದ್ದೇ ಆದೇಶ ನೀಡಿದ್ದರು. ಆದರೆ ಆ ಆದೇಶವನು ಕಾರಣಾಂತರಗಳಿಂದ ಪಾಲಿಸಲಾಗಿರಲಿಲ್ಲ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *