ಬೆಂಗ್ಳೂರಿನಲ್ಲಿ ಕೆಲಸ ಹುಡುಕುತ್ತಿರುವ ಯುವತಿಯರೇ ಎಚ್ಚರ ಎಚ್ಚರ

ಬೆಂಗಳೂರು: ವಿದ್ಯಾಭ್ಯಾಸ ಮುಗಿಸಿ ಉದ್ಯೋಗ ಹುಡುಕುತ್ತಿರುವ ಯುವತಿಯರೇ, ನೀವು ಕೆಲಸಕ್ಕೆ ಸೇರುವ ಮುನ್ನ ಈ ಸ್ಟೋರಿ ನೋಡ್ಲೇ ಬೇಕು.

ಕಾಲ್ ಸೆಂಟರ್ ಕೆಲಸ, ಕೈತುಂಬ ವೇತನ ಕೊಡುವುದಾಗಿ ಹೇಳಿ ವೇಶ್ಯಾವಾಟಿಕೆಗೆ ಯುವಕರಿಗೆ ಪ್ರಚೋದನೆ ಮಾಡಿ ಅಂತಾರಂತೆ. ಇಂತಹ ಕೆಲಸಕ್ಕೆ ಒಪ್ಪದ ಯುವತಿಯರಿಗೆ ಟಾರ್ಚರ್ ನೀಡುತ್ತಿದ್ದ ಆರೋಪಿಗಳನ್ನು ಬೆಂಗಳೂರಿನ ಪೊಲೀಸರು ಬಂಧಿಸಿದ್ದಾರೆ.

ಶ್ರವಣಬೆಳಗೊಳ ಮೂಲದ ದಿನೇಶ್, ಕೆ.ಆರ್ ಪೇಟೆ ಮೂಲದ ಪ್ರಜ್ವಲ್ ಹಾಗೂ ಕಿರಣ್ ಬಂಧಿತ ಆರೋಪಿಗಳು. ನೆಲಮಂಗಲ ಪಟ್ಟಣದ ಕುಣಿಗಲ್ ಬೈಪಾಸ್‍ನಲ್ಲಿರುವ ವುಡ್‍ಲ್ಯಾಂಡ್ ಹೋಟೆಲ್‍ನಲ್ಲಿ ಕೂಡಿಹಾಕಿದ್ದ ಮೂರು ಜನ ಯುವತಿಯರನ್ನು ಪೊಲೀಸರು ರಕ್ಷಿಸಿದ್ದಾರೆ.

Locanto ಎನ್ನುವ ಆನ್‍ಲೈನ್ ಅಪ್ಲಿಕೇಷನ್ ಮೂಲಕ ಯುವ ಜನತೆಯನ್ನು ಸೆಳೆಯಲಾಗುತ್ತದೆ. ಈ ಯುವಕರಿಗೆ ಕಾಲ್ ಮಾಡಿ ಲೈಂಗಿಕತೆಗೆ ಪ್ರಚೋದನೆ ಮಾಡುವ ಕೆಲಸವನ್ನು ಮಾಡುವಂತೆ ಆರೋಪಿಗಳು ಯುವತಿಯರಿಗೆ ಟಾರ್ಚರ್ ಮಾಡುತ್ತಿದ್ದರು. ಈ ಕೆಲಸ ನಾನು ಮಾಡುವುದಿಲ್ಲ ಅನ್ನೋ ಯುವತಿಯರಿಗೆ ಕಿರುಕುಳ ನೀಡಿ, ನೆಲಮಂಗಲ ಪಟ್ಟಣದ ಕುಣಿಗಲ್ ಬೈಪಾಸ್‍ನಲ್ಲಿರುವ ವುಡ್‍ಲ್ಯಾಂಡ್ ಹೋಟೆಲ್‍ನಲ್ಲಿ ಕೂಡಿಹಾಕಲಾಗಿತ್ತು. ಖಚಿತ ಮಾಹಿತಿಯ ಮೇರೆಗೆ ನೆಲಮಂಗಲ ಟೌನ್ ಪಿಎಸ್‍ಐ ಮಂಜುನಾಥ್ ನೇತೃತ್ವದಲ್ಲಿ ದಾಳಿ ನಡೆಸಿ, ಮೂರು ಜನ ಯುವತಿಯರನ್ನು ರಕ್ಷಿಸಿದ್ದಾರೆ.

ಮೂವರು ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿರುವ ನೆಲಮಂಗಲ ಟೌನ್ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ. ಈ ಪ್ರಕರಣದಲ್ಲಿ ದೊಡ್ಡ ಜಾಲವೇ ಇದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ಕಿಂಗ್‍ಪಿನ್‍ಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *