3 ವರ್ಷಗಳ ಬಳಿಕ ಮತ್ತೆ ಹಾರಾಟ ಪ್ರಾರಂಭಿಸಲಿವೆ ಜೆಟ್ ಏರ್‌ವೇಸ್

ನವದೆಹಲಿ: ಜೆಟ್ ಏರ್‌ವೇಸ್ ವಿಮಾನಯಾನ ಸಂಸ್ಥೆ 3 ವರ್ಷಗಳ ಬಳಿಕ ಮತ್ತೆ ಹಾರಾಟಕ್ಕೆ ಸಿದ್ಧತೆ ನಡೆಸುತ್ತಿದೆ. ಜೆಟ್ ಏರ್‌ವೇಸ್‌ಗೆ ವಾಯುಯಾನ ನಿಯಂತ್ರಕ ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್(ಡಿಜಿಸಿಎ) ವಾಣಿಜ್ಯ ವಿಮಾನಯಾನ ಪುನರಾರಂಭಿಸಲು ಪರವಾನಗಿ ನೀಡಿದೆ.

2019ನೇ ಇಸವಿಯಲ್ಲಿ ಜೆಟ್ ಏರ್‌ವೇಸ್ ತನ್ನ ಕಾರ್ಯಾಚರಣೆಯನ್ನು ನಿಲ್ಲಿಸಿತ್ತು. ಇದೀಗ ಜೆಟ್ ಆಪರೇಟರ್ ಪ್ರಮಾಣಪತ್ರ ಲಭಿಸಿರುವುದರಿಂದ ಜೆಟ್ ಏರ್‌ವೇಸ್ ಸಂಸ್ಥೆಗೆ ವಾಣಿಜ್ಯ ವಿಮಾನಯಾನ ಪುನರಾರಂಭಿಸಲು ಅನುಮತಿ ಸಿಕ್ಕಂತಾಗಿದೆ. ಇದನ್ನೂ ಓದಿ: ಬೀಳ್ಕೊಡುಗೆ ಸಮಾರಂಭದಲ್ಲಿ ಭಾವುಕರಾದ ಬ್ರೆಂಡನ್ ಮೆಕಲಮ್

ಜೆಟ್ ಏರ್‌ವೇಸ್ ಈ ವರ್ಷ ಜುಲೈ ನಿಂದ ಸೆಪ್ಟೆಂಬರ್ ತಿಂಗಳ ಒಳಗಾಗಿ ವಾಣಿಜ್ಯ ಕಾರ್ಯಾಚರಣೆ ಪುನರಾರಂಭಿಸುವುದಾಗಿ ಸಂಸ್ಥೆ ಅಧಿಕೃತ ಮಾಹಿತಿ ನೀಡಿದೆ. ಇದನ್ನೂ ಓದಿ: ರಾಜ್ಯದಲ್ಲಿ 95 ಕೇಸ್ – ಇಂದು 20,444 ಕೋವಿಡ್ ಟೆಸ್ಟ್

ನರೇಶ್ ಗೋಯಲ್ ಒಡೆತನದಲ್ಲಿದ್ದ ಜೆಟ್ ಏರ್‌ವೇಸ್ 2019ರ ಏಪ್ರಿಲ್ 17ರಂದು ಕೊನೆಯ ಬಾರಿ ಹಾರಾಟ ನಡೆಸಿತ್ತು. ಪ್ರಸ್ತುತ ಜಲನ್-ಕಾಲ್‌ರಾಕ್ ಒಕ್ಕೂಟ ಜೆಟ್ ಏರ್‌ವೇಸ್‌ಅನ್ನು ಮುನ್ನಡೆಸುತ್ತಿದೆ.

Comments

Leave a Reply

Your email address will not be published. Required fields are marked *