ಅವರಪ್ಪನ ಮೇಲೆ ಆಣೆ ಹಾಕಲ್ಲ ಅಂತಾರೆ, ನಮ್ಮಪ್ಪನಾಣೆ ಜೆಡಿಎಸ್ ಅಧಿಕಾರಕ್ಕೆ ಬರಲ್ಲ: ಜಮೀರ್ ಅಹಮದ್

ಚಿತ್ರದುರ್ಗ: ಸಿಎಂ ಸಿದ್ದರಾಮಯ್ಯ ಅವರ ತಂದೆ ಮೇಲೆ ಆಣೆ ಹಾಕದೆ, ನಮ್ಮ ತಂದೆ ಮೇಲೆ ಯಾಕೆ ಆಣೆ ಮಾಡ್ತಾರೆ ಅಂತಾ ಹೆಚ್.ಡಿ.ಕುಮಾರಸ್ವಾಮಿ ಹೇಳ್ತಾರೆ. ತಗೊಳ್ಳಿ ಇಂದು ನಮ್ಮಪ್ಪಾಣೆ ಈ ಬಾರಿ ಕರ್ನಾಟಕದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಲ್ಲ ಅಂತಾ ಇತ್ತೀಚೆಗೆ ಕಾಂಗ್ರೆಸ್ ಸೇರಿದ್ದ ಜಮೀರ್ ಅಹಮದ್ ಭವಿಷ್ಯ ನುಡಿದಿದ್ದಾರೆ.

ಜಿಲ್ಲೆಯ ಹಿರಿಯೂರು ತಾಲೂಕಿನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಜಮೀರ್ ಅಹಮದ್, ಜೆಡಿಎಸ್ ಪಕ್ಷ ಸೆಕ್ಯೂಲರ್ ಅಲ್ಲವೇ ಅಲ್ಲ. ಕುಮಾರಸ್ವಾಮಿ ಅವರಲ್ಲಿ ಶೇ.10 ರಷ್ಟು ಜಾತ್ಯಾತೀತ ಅಂಶಗಳಿಲ್ಲ. ಈ ಚುನಾವಣೆಯಲ್ಲಿ ಏನಾದ್ರೂ ಜೆಡಿಎಸ್ 115 ಸೀಟ್ ಬಂದ್ರೆ, ನಮ್ಮ ತಾಯಾಣೆ ನಾನು ರಾಜಕೀಯದಿಂದ ನಿವೃತ್ತಿ ಪಡೆಯುವುದರ ಜೊತೆಗೆ ರಾಜ್ಯ ಬಿಟ್ಟು ಹೋಗ್ತೇನೆ ಅಂತ ಹೇಳಿದ್ದಾರೆ.

ನಾವು ಈ ಬಾರಿ 20 ರಿಂದ 30 ಕ್ಷೇತಗಳಲ್ಲಿ ಗೆಲವು ಸಾಧಿಸುತ್ತೇವೆ ಎಂಬುವುದು ಕುಮಾರಸ್ವಾಮಿ ಅವರಿಗೂ ಗೊತ್ತಿದೆ. ಸಿದ್ದರಾಮಯ್ಯ ಯಾವಾಗಲೂ ಹುಲಿ. ಅವರಿಗೆ ಹಿಂದೆ ಹೋಗುವುದು ಗೊತ್ತಿಲ್ಲ. ಭಯ ಬಂದಿರೋದು ಕುಮಾರಸ್ವಾಮಿ ಅವರಿಗೆ, ಹೀಗಾಗಿ ರಾಮನಗರ ಮತ್ತು ಚನ್ನಪಟ್ಟಣದಲ್ಲಿ ಸ್ಪರ್ಧಿಸಲು ಮುಂದಾಗಿದ್ದಾರೆ ಅಂತಾ ವ್ಯಂಗ್ಯ ಮಾಡಿದರು.

Comments

Leave a Reply

Your email address will not be published. Required fields are marked *