ಬೆಂಗಳೂರು: ಜೆಡಿಎಸ್ ನ ವರಿಷ್ಠ ಅಧಿಕಾರಿ ಎಚ್.ಡಿ.ದೇವೇಗೌಡರು ಕಾಂಗ್ರೆಸ್ ಹೈಕಮಾಂಡ್ ಗೆ ಮೂರು ಷರತ್ತು ವಿಧಿಸಿದ್ದಾರೆ.
ತಮ್ಮ ಮಗ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಸರ್ಕಾರದ ವಿರುದ್ಧ ತಿರುಗಿಬಿದ್ದಿರುವ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ದೇವೇಗೌಡರು ಹೈಕಮಾಂಡ್‍ಗೆ ದೂರು ನೀಡಿ ಮೂರು ಷರತ್ತುಗಳನ್ನು ವಿಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ದೇವೇಗೌಡ ಕಂಡೀಷನ್ ಲೆಕ್ಕಚಾರಕ್ಕೆ ಕೈ ಹೈಕಮಾಂಡ್ ಗೆ ತಲೆ ಬಿಸಿಯಾಗಿದೆ. ಇದನ್ನೂ ಓದಿ: ಒಂದು ಕಾಲ್, ಒಂದು ಡೋಸ್, ಒಂದು ಒಪ್ಪಂದ- ಚೆಕ್ ಕೊಟ್ಟು ಗೆದ್ದ ಎಚ್‍ಡಿಡಿ
ದೇವೇಗೌಡರ ಷರತ್ತು:
ಷರತ್ತು 1
ಸಿದ್ದರಾಮಯ್ಯ ಬೇಕೋ? ಲೋಕಸಭೆ ಚುನಾವಣೆ ಬೇಕೋ? ಈ ಆಯ್ಕೆ ಕಾಂಗ್ರೆಸ್ ಹೈಕಮಾಂಡಿಗೆ.
ಷರತ್ತು 2:
ಸಮನ್ವಯ ಸಮಿತಿ ಎಲ್ಲದಕ್ಕೂ ಅನ್ವಯವಾಗಲ್ಲ. ಪ್ರಮುಖ ವಿಚಾರಗಳು ಮಾತ್ರ ಇಲ್ಲಿ ಚರ್ಚೆಯಾಗಲಿ. ಉಳಿದ ವಿಚಾರಗಳನ್ನು ಸಿಎಂ, ಡಿಸಿಎಂ ನಿರ್ಧರಿಸಬೇಕು.
ಷರತ್ತು 3:
ನಿಮ್ಮ ನಾಯಕರಿಗೂ ನಮಗೂ ಸಂಬಂಧವಿಲ್ಲ. ನಿಮ್ಮವರನ್ನ ನೀವೇ ನಿಯಂತ್ರಿಸಬೇಕು. ಹೈಕಮಾಂಡ್ ಮಟ್ಟದಲ್ಲಿ ಮಾತ್ರ ಒಪ್ಪಂದ, ಜಾರಿ ನಿಮ್ಮ ಕರ್ತವ್ಯ
https://www.youtube.com/watch?v=Q32J9Q7ZATk

Leave a Reply