58 ಜೆಡಿಎಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ: ಯಾವ ಕ್ಷೇತ್ರದಲ್ಲಿ ಯಾರು ಸ್ಪರ್ಧೆ?

ಬೆಂಗಳೂರು: ಜೆಡಿಎಸ್ ಎರಡನೇ ಪಟ್ಟಿಯನ್ನು ಪಕ್ಷದ ಕಚೇರಿಯಲ್ಲಿ ಇಂದು ಮಾಜಿ ಪ್ರಧಾನಿ ದೇವೇಗೌಡರು ಬಿಡುಗಡೆಗೊಳಿಸಿದ್ದಾರೆ.

ಕೈ ತೊರೆದು ಜೆಡಿಎಸ್ ಸೇರಿದ್ದ ನಟ ಶಶಿಕುಮಾರ್ ಗೆ ಹೊಸದುರ್ಗದಿಂದ ಟಿಕೆಟ್ ಸಿಕ್ಕಿದೆ. ಅತ್ತ ಶಿಗ್ಗಾಂವಿಯಿಂದ ಬೇವಿನಮರದ, ಭಾಲ್ಕಿಯಿಂದ ಪ್ರಕಾಶ್ ಖಂಡ್ರೆಗೆ ಟಿಕೆಟ್ ಘೋಷಣೆಯಾಗಿದೆ.

58 ಅಭ್ಯರ್ಥಿಗಳ 2ನೇ ಪಟ್ಟಿಯಲ್ಲಿ ಕಾಗವಾಡ ದಿಂದ ಮೊಗ್ಗಣ್ಣವರ್, ಕುಡಚಿಯಿಂದ ರಾಜೇಂದ್ರಣ್ಣಪ್ಪ, ಹುಕ್ಕೇರಿಯಿಂದ ಎಂಬಿ ಪಾಟೀಲ್, ಗೋಕಾಕ್ ನಿಂದ ಕರಿಯಪ್ಪಲಕ್ಷ್ಮಣ್ ತಲ್ವಾರ್, ಯಮಕನಮರಡಿಯಿಂದ ಶಂಕರ್, ಬೆಳಗಾವಿ ಉತ್ತರದಿಂದ ಧರ್ಮರಾಜ್, ಖಾನಪುರದಿಂದ ನಾಸೀರ್‍ಭಗವಾನ್, ಸವದತ್ತಿಯಿಂದ ಡಿಎಫ್ ಪಾಟೀಲ್ ಹೆಸರು ಘೋಷಣೆಯಗಿದೆ.

 

 

Comments

Leave a Reply

Your email address will not be published. Required fields are marked *