ಕಾಂಗ್ರೆಸ್‌ ಸರ್ಕಾರ ಸುಭದ್ರವಾಗಿದೆ, ಅದೃಷ್ಟ ಒಲಿದು ಬಂದಾಗ ಡಿಕೆಶಿ ಸಿಎಂ ಆಗ್ತಾರೆ: ಜಿಟಿಡಿ

ಮೈಸೂರು: ಸದ್ಯ ಕಾಂಗ್ರೆಸ್‌ ಸರ್ಕಾರ (Congress Government) ಸುಭದ್ರವಾಗಿದೆ. ಅದೃಷ್ಟ ಒಲಿದು ಬಂದಾಗ ಡಿ.ಕೆ ಶಿವಕುಮಾರ್‌ ಸಿಎಂ ಆಗ್ತಾರೆ ಎಂದು ಮಾಜಿ ಸಚಿವ ಜಿ.ಟಿ ದೇವೇಗೌಡ (GT Deve Gowda) ಹೇಳಿದ್ದಾರೆ.

ಮೈಸೂರಿನಲ್ಲಿಂದು (Mysuru) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಕರ್ನಾಟಕದಲ್ಲಿ ಭಾರೀ ಗಟ್ಟಿಯಾಗಿದೆ. 138 ಸ್ಥಾನಗಳಿಂದ ಸುಭದ್ರವಾಗಿದೆ. ಸಿಎಂ ಆಗಿ ಸಿದ್ದರಾಮಯ್ಯ (Siddaramaiah), ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ ಶಿವಕುಮಾರ್ (DK Shivakumar) ಇದ್ದಾರೆ. ಅದೃಷ್ಟ ಒಲಿದು ಬಂದಾಗ ಡಿಕೆಶಿ ಸಿಎಂ ಆಗುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ. ಇದನ್ನೂ ಓದಿ: ಬದರಿನಾಥದಲ್ಲಿ ಹಿಮಪಾತ, 47 ಕಾರ್ಮಿಕರ ರಕ್ಷಣೆ – ಮೂವರ ಸ್ಥಿತಿ ಗಂಭೀರ, ಮೋದಿಯಿಂದ ಅಗತ್ಯ ನೆರವಿನ ಭರವಸೆ

1996 ರಿಂದ 2004ರ ವರೆಗೆ ಸಿದ್ದರಾಮಯ್ಯ ಸಿಎಂ ಆಗ್ತಾರೆ ಅನ್ಕೊಂಡು ಬಂದ್ರು ಅದು ಆಗಲಿಲ್ಲ. ಈಗ ಡಿ.ಕೆ ಶಿವಕುಮಾರ್ ನಡೆ ಬಗ್ಗೆ ಹೆಚ್ಚಿನ ಬಗ್ಗೆ ನನಗೆ ಗೊತ್ತಿಲ್ಲ. ಆ ರಾಜಕೀಯದ ಬಗ್ಗೆ ನಾನು ಹೆಚ್ಚು ತಲೆಕೆಡಿಸಿಕೊಳ್ಳುತ್ತಿಲ್ಲ. ಈ ಬಗ್ಗೆ ಡಿ.ಕೆ ಶಿವಕುಮಾರ್ ಜೊತೆ ಮಾತನಾಡಿಲ್ಲ ಎಂದು ಜಿಟಿಡಿ ಹೇಳಿದ್ದಾರೆ. ಇದನ್ನೂ ಓದಿ: ಸಿಲಿಂಡರ್ ಸ್ಫೋಟ ಪ್ರಕರಣ – ಗಾಯಾಳು ಸಾವು