ಜೆಡಿಎಸ್ ಮುಖವಾಡ ಕಳಚಿತು.. ಬಿಜೆಪಿಯೊಂದಿಗೆ ಮೈತ್ರಿ ಸ್ವಾಗತಿಸುತ್ತೇನೆ: ಹೆಬ್ಬಾಳ್ಕರ್

ಬೆಳಗಾವಿ: ಎಲೆಕ್ಷನ್ ಯಾವ ರೀತಿ ಮಾಡಬೇಕು ಎಂಬುದು ನಮಗೆ ಗೊತ್ತಿದೆ. ಜನರ ಆಶೋತ್ತರಗಳೇನು ಎಂಬ ಬಗ್ಗೆಯೂ ಗೊತ್ತು. ಅವುಗಳನ್ನು ಈಡೇರಿಸುತ್ತಿದ್ದು, ಒಳ್ಳೆಯ ರೀತಿಯಿಂದ ಸರ್ಕಾರ ನಡೆಸುತ್ತಿದ್ದೇವೆ. ಹೀಗಾಗಿ ಅವರು ಮೈತ್ರಿ ಮಾಡಿಕೊಂಡರೆ ನಾವು ಸ್ವಾಗತಿಸುತ್ತೇವೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಹೇಳಿಕೆ ನೀಡಿದ್ದಾರೆ.

ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಈ ಹಿಂದೆ ಜೆಡಿಎಸ್ (JDS) ಯುಪಿಎ ಒಕ್ಕೂಟದಲ್ಲಿತ್ತು ಎಂಬ ಪ್ರಶ್ನೆಗೆ ಉತ್ತರಿಸುತ್ತಾ, ಜೆಡಿಎಸ್‌ನವರ ಮುಖವಾಡ ಕಳಚಿತು. ಅದರ ಬಗ್ಗೆ ಹಿರಿಯರು, ದೊಡ್ಡವರು ಮಾತನಾಡುತ್ತಾರೆ ಎಂದರು.

ಬಿಜೆಪಿ-ಜೆಡಿಎಸ್‌ನವರು ಕಾಂಗ್ರೆಸ್ (Congress) ಸೇರ್ಪಡೆ ಆಗುತ್ತಿರುವ ಭಯದಿಂದ ಮೈತ್ರಿ (Alliance) ಮಾಡಿಕೊಳ್ಳುತ್ತಿದ್ದಾರಾ ಎಂಬ ವಿಚಾರಕ್ಕೆ, ಯರ‍್ಯಾರು ಕಾಂಗ್ರೆಸ್‌ಗೆ ಬರುತ್ತಿದ್ದಾರೆ ಮತ್ತು ಯಾರಿಗೆ ಭಯ ಇದೆ ಅಂತಾನೂ ನನಗೆ ಗೊತ್ತಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಕಾಂಗ್ರೆಸ್ ನಿರ್ನಾಮ ಮಾಡುವ ಸಲುವಾಗಿ ಬಿಜೆಪಿ-ಜೆಡಿಎಸ್ ಜೊತೆ ಮೈತ್ರಿ: ಈಶ್ವರಪ್ಪ

ಬೆಳಗಾವಿ ಲೋಕಸಭೆಯಿಂದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸ್ಪರ್ಧಿಸುತ್ತಾರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಹೆಬ್ಬಾಳ್ಕರ್, ಅಂತೆ ಕಂತೆಗಳಿಗೆ ನಾನು ಉತ್ತರ ಕೊಡುವುದಿಲ್ಲ. ಹೈಕಮಾಂಡ್ ಮತ್ತು ಬೆಳಗಾವಿ ಜಿಲ್ಲೆಯ ನಾಯಕರಿದ್ದಾರೆ. ಕುಳಿತುಕೊಂಡು ಚರ್ಚೆ ಮಾಡಿ ಯಾರು ಅಭ್ಯರ್ಥಿ ಆಗಬೇಕೆಂದು ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಜೆಡಿಎಸ್ ಮೈತ್ರಿಯನ್ನು ನಾನು ಸ್ವಾಗತ ಮಾಡ್ತೀನಿ: ಮುನಿರತ್ನ

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]