ಕಾಂಗ್ರೆಸ್, ಜೆಡಿಎಸ್ ಸೇರಿ ಒಳ್ಳೆಯ ಆಡಳಿತ ಕೊಡ್ತೀವಿ- ಎಚ್‍ಡಿಕೆ

ಬೆಂಗಳೂರು: ಕಾಂಗ್ರೆಸ್ ಮತ್ತು ಜೆಡಿಎಸ್ ಸೇರಿ ಒಳ್ಳೆ ಆಡಳಿತ ಕೊಡುತ್ತೇವೆ. ಖಾತೆ ಹಂಚಿಕೆ ಬಗ್ಗೆ ಇದೂವರೆಗೆ ಯಾವುದೇ ಚರ್ಚೆ ನಡೆದಿಲ್ಲ. ಕಾಂಗ್ರೆಸ್ ನಾಯಕರ ಭೇಟಿ ನಂತರ ತೀರ್ಮಾನ ಕೈಗೊಳ್ಳಲಾಗುವುದು ಅಂತ ಎಚ್‍ಡಿ ಕುಮಾರಸ್ವಾಮಿ ಹೇಳಿದ್ದಾರೆ. ಇದನ್ನೂ ಓದಿ: ಬುಧವಾರ ಸಿಎಂ ಆಗಿ ಹೆಚ್‍ಡಿಕೆ ಪ್ರಮಾಣವಚನ- ಕಾಂಗ್ರೆಸ್‍ಗೆ 20, ಜೆಡಿಎಸ್ ಗೆ 12 ಸಚಿವ ಸ್ಥಾನ

ತಮ್ಮ ಹುಟ್ಟೂರು ಹಾಸನಕ್ಕೆ ತೆರಳುವ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ನಮ್ಮ ಊರಿಗೆ ಹುಟ್ಟೂರಿಗೆ ಹೋಗುತ್ತಿದ್ದೇನೆ. ಅಲ್ಲಿಂದ 11 ಗಂಟೆಗೆ ಮತ್ತೆ ವಾಪಾಸ್ ಬೆಂಗಳೂರಿಗೆ ಬರುತ್ತೇನೆ. ಬೆಂಗಳೂರಿನಿಂದ ದೆಹಲಿಗೆ ತೆರಳುತ್ತೇನೆ. ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡುತ್ತೇನೆ ಅಂತ ತಿಳಿಸಿದ್ರು. ಇದನ್ನೂ ಓದಿ: ಲಾಬಿ ಮಾಡೋಕೆ ದೆಹಲಿಗೆ ಬರಬೇಡಿ – ಕೈ ನಾಯಕರಿಗೆ ಹೈಕಮಾಂಡ್ ಸೂಚನೆ!

ಈ ವೇಳೆ ಖಾತೆ ಒಂದೇ ಅಲ್ಲ ಹಲವಾರು ವಿಷಯಗಳ ಬಗ್ಗೆ ಚರ್ಚೆ ಮಾಡುವುದಾಗಿ ತಿಳಿಸಿದ ಅವರು, ಮತ್ತೆ ಸಂಜೆ 6 ಗಂಟೆಗೆ ಬೆಂಗಳೂರಿಗೆ ವಾಪಸ್ ಬರುತ್ತೇನೆ. ಹಲವಾರು ರಾಷ್ಟ್ರೀಯ ನಾಯಕರು ಪ್ರಮಾಣವಚನ ಸಮಾರಂಭಕ್ಕೆ ಭಾಗವಹಿಸ್ತಾರೆ. ಈ ಹಿನ್ನೆಲೆಯಲ್ಲಿ ಇಂದು ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಸೇರಿದಂತೆ ಹಲವರನ್ನು ಭೇಟಿ ಮಾಡಿ ಪ್ರಮಾಣ ವಚನ ಸ್ವೀಕಾರಕ್ಕೆ ಆಹ್ವಾನ ನೀಡುತ್ತೇನೆ. ಪಶ್ವಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಜೊತೆ ಕೂಡ ಫೋನಿನಲ್ಲಿ ಮಾತಾನಾಡಿದ್ದೇನೆ. ಅವರೂ ಕೂಡ ಪ್ರಮಾಣ ವಚನಕ್ಕೆ ಬರುವ ನಿರೀಕ್ಷೆಯಲ್ಲಿದ್ದೇನೆ ಅಂತ ವಿಶ್ವಾಸ ವ್ಯಕ್ತಪಡಿಸಿದ್ರು. ಇದನ್ನೂ ಓದಿ: ಶನಿವಾರ ರಾತ್ರಿ ಎಚ್‍ಡಿಕೆಗೆ ಮುಖ್ಯವಾದ ಒಂದು ಸೂಚನೆ ಕೊಟ್ಟ ಎಚ್‍ಡಿಡಿ!

Comments

Leave a Reply

Your email address will not be published. Required fields are marked *