ನಿಖಿಲ್‍ಗೆ ಮೂರು ನಿಂಬೆಹಣ್ಣು ಕೊಟ್ಟ ಜೆಡಿಎಸ್ ಕಾರ್ಯಕರ್ತರು!

ಮೈಸೂರು: ಮಂಡ್ಯ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಇಂದು ಕೆ.ಆರ್.ನಗರದಲ್ಲಿ ಪ್ರಚಾರ ನಡೆಸಿದ್ದು, ಈ ವೇಳೆ ಜೆಡಿಎಸ್ ಕಾರ್ಯಕರ್ತರು ಮೂರು ನಿಂಬೆ ಹಣ್ಣು ನೀಡಿದ್ದಾರೆ.

ಹೌದು. ಜೆಡಿಎಸ್ ಕಾರ್ಯಕರ್ತರು ಮೂರು ನಿಂಬೆಹಣ್ಣನ್ನು ಸಚಿವ ಸಾರಾ ಮಹೇಶ್ ಕೈಗೆ ಕೊಟ್ಟು ನಿಖಿಲ್‍ಗೆ ಕೊಡಿ ಎಂದ ಹೇಳಿದ್ದಾರೆ. ಹಾಗೆಯೇ ಸಚಿವರು ನಿಂಬೆಹಣ್ಣನ್ನು ನಿಖಿಲ್ ಕೈಗಿತ್ತಿದ್ದಾರೆ. ಈ ವೇಳೆ ನಿಖಿಲ್, ಹೇ ನಂಗೆ ಯಾಕೆ ಅಣ್ಣ ನಿಂಬೆ ಹಣ್ಣು. ನಾನಿದನ್ನು ನಂಬಲ್ಲ ಎಂದು ಹೇಳಿ ಬೇಡ ಕೊಟ್ಟು ಬಿಡಣ್ಣ ಅಂದಿದ್ದಾರೆ. ಹೀಗಾಗಿ ಸಚಿವರು ನಿಂಬೆ ಹಣ್ಣನ್ನು ತಕ್ಷಣವೇ ಕೆಳಗೆ ಇದ್ದ ಜೆಡಿಎಸ್ ಕಾರ್ಯಕರ್ತರಿಗೆಯೇ ವಾಪಸ್ ನೀಡಿದರು.

ಕೆ.ಆರ್.ನಗರ ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ `ನೀವ್ ನಮ್ಮೂರಿಗೆ ಬರಲೇ ಬೇಕು. ಊರಿನ ಗೇಟ್‍ಗೆ ಬಂದ್ರೆ ಆಗಲ್ಲ. ಊರಿನ ಒಳಗಡೆ ಬರಲೇ ಬೇಕು’ ಎಂದು ನಿಖಿಲ್ ಕಾರು ಎದುರೇ ಜೆಡಿಎಸ್ ಕಾರ್ಯಕರ್ತರು ಕೂಗಾಡಿದ್ರು. ಕಾರ್ಯಕರ್ತರ ಒತ್ತಾಯಕ್ಕೆ ಮಣಿದು ನಿಖಿಲ್ ಗ್ರಾಮಕ್ಕೆ ಹೋದರು. ಈ ವೇಳೆ ದಣಿವರಿಸಿಕೊಳ್ಳಲು ನಿಖಿಲ್‍ಗೆ ಕಾರ್ಯಕರ್ತರು ಎಳನೀರು ಕೊಟ್ಟರು.

ಡಿಬಾಸ್ ಘೋಷಣೆ:
ಮಂಡ್ಯ ಜಿಲ್ಲೆ ಕೆ ಆರ್ ನಗರ ತಾಲೂಕಿನ ಬ್ಯಾಡರಹಳ್ಳಿಯಲ್ಲಿ ನಿಖಿಲ್ ಪ್ರಚಾರ ಮುಗಿಸಿ ವಾಪಸ್ ತೆರಳುವ ವೇಳೆ ದರ್ಶನ್ ಅಭಿಮಾನಿಗಳು ಡಿ ಬಾಸ್ ಘೋಷಣೆ ಕೂಗಿದ್ರು. ನಿಖಿಲ್ ವಾಹನವನ್ನೇ ಹಿಂಬಾಲಿಸಿ ಅಭಿಮಾನಿಗಳು ಘೋಷಣೆ ಕೂಗುತ್ತಿದ್ದು, ಈ ವೇಳೆ ಪೊಲೀಸರು ದರ್ಶನ್ ಅಭಿಮಾನಿಗಳನ್ನ ಚದುರಿಸಿದ ಘಟನೆಯೂ ನಡೆಯಿತು.

ಕೆ.ಆರ್.ನಗರ ಪಟ್ಟಣ ಪ್ರದೇಶದಲ್ಲಿ ನಡೆದ ಪ್ರಚಾರದ ವೇಳೆ ನಿಖಿಲ್‍ಗೆ ಸಚಿವ ಸಾ.ರಾ ಮಹೇಶ್, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಹಾಗೂ ಎಐಸಿಸಿ ವಕ್ತಾರೆ ಐಶ್ವರ್ಯ ಮಹಾದೇವ್ ಸಾಥ್ ನೀಡಿದ್ರು.

Comments

Leave a Reply

Your email address will not be published. Required fields are marked *