ಜೈಲಿನಲ್ಲೇ ವೈಭೋಗ – ಜೆಸಿಬಿ ನಾರಾಯಣನ ರಾಯಲ್ ಜೈಲ್ ಲೈಫ್ ಸ್ಟೋರಿ

ಬೆಂಗಳೂರು: ಕಳೆದ ಒಂದೂವರೆ ವರ್ಷದಿಂದ ಜೈಲಿನಲ್ಲಿರುವ ಆರೋಪಿ ಜೆಸಿಬಿ ನಾರಾಯಣನಿಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ವೈಭೋಗದ ಉಪಾಚಾರ ದೊರಕುತ್ತಿದೆ.

ಕೊಲೆ, ಕೊಲೆ ಸುಪಾರಿ, ಜಮೀನು ವಿವಾದಗಳು, ಸೇರಿದಂತೆ 25 ಕ್ಕೂ ಹೆಚ್ಚು ಪ್ರಕರಣಗಳ ಆರೋಪಿ ಆಗಿರುವ ರೌಡಿ ಜೆಸಿಬಿ ನಾರಾಯಣ ಜೈಲಿನಲ್ಲಿ ಮೋಜು, ಮಸ್ತಿ ಮಾಡುತ್ತಿರುವ ಎಕ್ಸ್​ಕ್ಲೂಸಿವ್ ವೀಡಿಯೋ ಪಬ್ಲಿಕ್ ಟಿವಿ ಲಭ್ಯವಾಗಿದೆ. ಇದನ್ನೂ ಓದಿ: ಪಂಜಾಬ್‍ನಲ್ಲಿ ಕಾಳಿ ವಿಗ್ರಹ ವಿರೂಪಗೊಳಿಸಲು ಯತ್ನ

ಸೆರೆಮನೆಯನ್ನೇ ತನ್ನ ಅಡ್ಡ ಮಾಡಿಕೊಂಡಿರುವ ಜೆಸಿಬಿ ನಾರಾಯಣ ಇಸ್ಪೀಟ್ ಆಟವಾಡುತ್ತಾ, ಮದ್ಯ ಸೇವಿಸುತ್ತಾ ಕೂಲ್ ಆಗಿ ಜೈಲಿನಲ್ಲಿ ಕಾಲ ಕಳೆಯುತ್ತಿದ್ದಾನೆ. ಇನ್ನೂ ನಾರಾಯಣನಿಗೆ ಜೈಲು ಸಿಬ್ಬಂದಿಯೇ ಮುಂದೆ ನಿಂತು ಎಲ್ಲವನ್ನು ಸಪ್ಲೈ ಮಾಡುತ್ತಿರುವ ಸಂಪೂರ್ಣ ಚಿತ್ರಣ ಪಬ್ಲಿಕ್ ಟಿವಿ ಬಯಲು ಮಾಡಿದೆ. ಇದನ್ನೂ ಓದಿ: ಉತ್ತರಾಖಂಡ ಚುನಾವಣೆ: ರಾಮನಗರದಿಂದ ಮಾಜಿ ಸಿಎಂ ಹರೀಶ್ ರಾವತ್ ಕಣಕ್ಕೆ

ಜೈಲಿನಲ್ಲಿದ್ದರೂ ರಾಜ ಮಾರ್ಯಾದೆ ಪಡೆಯುತ್ತಿರುವ ಜೆಸಿಬಿ ನಾರಾಯಣ ತನಗೆ ಬೇಕಾದ ಸೌಲಭ್ಯಗಳನ್ನು ಕೊಠಡಿಯಲ್ಲಿ ಕುಳಿತ ಜಾಗದಲ್ಲಿಯೇ ಪಡೆದುಕೊಳ್ಳುತ್ತಿದ್ದಾನೆ. ಈತ ಇರುವ ಕೋಣೆಯಲ್ಲಿ ಎಣ್ಣೆ, ಕಾರ್ಡ್ಸ್, ಟಿವಿ, ಮೊಬೈಲ್, ಮಂಚ, ಸೋಫಾ, ಫ್ಯಾನ್ ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸಿಕೊಡಲಾಗಿದೆ. ಈ ಎಲ್ಲ ವೈಭವಗಳನ್ನು ಪಡೆಯಲು ನಾರಾಯಣ ಜೈಲು ಸಿಬ್ಬಂದಿಗೆ ವಾರಕ್ಕೆ 2,100ರೂ. ಹಣವನ್ನು ಲಂಚವಾಗಿ ನೀಡುತ್ತಿರುವ ಸತ್ಯ ಬಯಲಾಗಿದ್ದು, ಹಣ ನೀಡುತ್ತಿರುವ ವೀಡಿಯೋ ಕೂಡಾ ಬಹಿರಂಗವಾಗಿದೆ.

ನಾರಾಯಣ ಸದಾ ತನ್ನೊಟ್ಟಿಗೆ ಮೊಬೈಲ್ ಫೋನ್ ಇಟ್ಟುಕೊಂಡಿದ್ದು, ಜೈಲಿನ ಒಳಗೆ ಕುಳಿತುಕೊಂಡು ಯಾರಿಗಾದರೂ ಕೊಲೆಗೆ ಸ್ಕೆಚ್ ಹಾಕಬೇಕು ಅಂದರೆ ಹಾಕುತ್ತಾನೆ. ಜೊತೆಗೆ ಹೊರಗಡೆ ಈತನ ಬಗ್ಗೆ ಯಾರಾದರೂ ಮಾತನಾಡಿದರೆ ಬೆದರಿಕೆಯೊಡ್ಡುತ್ತಾನೆ. ರಿಯಲ್ ಎಸ್ಟೇಟ್ ಡೀಲ್ ಕೂಡ ಜೈಲಿನೊಳಗೆ ಕುದುರಿಸುತ್ತಾನೆ. ಈ ಎಲ್ಲದರ ಮಧ್ಯೆ ಜೈಲು ಸಿಬ್ಬಂದಿ ನಾರಾಯಣನೊಂದಿಗೆ ಒಟ್ಟು ಮೂರು ಜನ ಇದ್ದೀರಾ.. ತಲೆಗೆ 400 ರೂಪಾಯಿ ಕೊಡಿ.. ಒಟ್ಟು 1200 ರೂಪಾಯಿ ಕೊಡು.. ಅವನೆಲ್ಲಿ ಒಳಗೆ ಇದ್ದಾನಾ? ಒಳಗೆ ಕುಳಿತುಕೊಂಡು ಏನು ಮಾಡುತ್ತಿದ್ದಾನೆ. ದುಡ್ಡು ಕೊಡಿ. ಗಲಾಟೆ ಏನು ಮಾಡಿಕೊಳ್ಳಬೇಡಿ ಎಂದೆಲ್ಲಾ ಸಂಭಾಷಣೆ ನಡೆಸುತ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಇದನ್ನೂ ಓದಿ: ದೇಶದಲ್ಲಿ 2,55,874 ಕೊರೊನಾ ಕೇಸ್ – ಪಾಸಿಟಿವಿಟಿ ರೇಟ್ ಶೇ.15.52ಕ್ಕೆ ಇಳಿಕೆ

25ಕ್ಕೂ ಹೆಚ್ಚು ಕೇಸ್‍ಗಳಿರುವ ಜೆಸಿಬಿ ನಾರಾಯಣನ ಮೇಲೆ ಕಳೆದ ಡಿಸೆಂಬರ್ ನಲ್ಲಿ ಬೇಗೂರು ಠಾಣಾ ವ್ಯಾಪ್ತಿಯಲ್ಲಿ ಐವರು ರೌಡಿಗಳು ಹಲ್ಲೆ ನಡೆಸಲು ಯತ್ನಿಸಿದ್ದರು. ಆದರೆ ಅದೃಷ್ಟವಶಾತ್ ಜೆಸಿಬಿ ನಾರಾಯಣ ಪಾರಾಗಿದ್ದ. ಅದಾದ ನಂತರ ಇಲ್ಲಿವರೆಗೂ ಯಾವುದೇ ಕೇಸ್‍ಗಳು ದಾಖಲಾಗಿಲ್ಲ. ಇದನ್ನೂ ಓದಿ: ವರ್ಕೌಟ್ ವೇಳೆ ವೃದ್ಧ ದಂಪತಿ ಕಿಸ್ಸಿಂಗ್ ವೀಡಿಯೋ ವೈರಲ್

Comments

Leave a Reply

Your email address will not be published. Required fields are marked *