‘ಶುಗರ್ ಫ್ಯಾಕ್ಟರಿ’ಗಾಗಿ ಹಾಡು ಬರೆದ ಜಯಂತ್ ಕಾಯ್ಕಿಣಿ

ದೀಪಕ್ ಅರಸ್ (Deepak Urs) ನಿರ್ದೇಶನದಲ್ಲಿ ಡಾರ್ಲಿಂಗ್ ಕೃಷ್ಣ (Darling Krishna) ನಾಯಕರಾಗಿ ನಟಿಸಿರುವ ‘ಶುಗರ್ ಫ್ಯಾಕ್ಟರಿ’ (Sugar Factory) ಚಿತ್ರಕ್ಕಾಗಿ ಖ್ಯಾತ ಗೀತರಚನೆಕಾರ ಜಯಂತ ಕಾಯ್ಕಿಣಿ (Jayant Kaykini) ಅವರು ‘ಜಹಾಪನಾ’ ಎಂಬ ಸುಮಧುರ ಪ್ರೇಮಗೀತೆ ಬರೆದಿದ್ದಾರೆ. ಇತ್ತೀಚೆಗೆ ಈ ಹಾಡು ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ.

ನಿಹಾಲ್ ತಾವ್ರೊ ಹಾಗೂ ಅಮೃತಾ ನಾಯಕ್ ಅವರ ಕಂಠಸಿರಿಯಲ್ಲಿ ಈ ಹಾಡು ಮಧುರವಾಗಿ ಮೂಡಿಬಂದಿದೆ. ಧನಂಜಯ್ ಅವರ ನೃತ್ಯ ನಿರ್ದೇಶನದಲ್ಲಿ ಡಾರ್ಲಿಂಗ್ ಕೃಷ್ಣ ಹಾಗೂ ಸೋನಾಲ್ ಮೊಂತೆರೊ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಕಬೀರ್ ರಫಿ  ಸಂಗೀತ ನೀಡಿದ್ದಾರೆ.

ಈಗಾಗಲೇ ಶುಗರ್ ಫ್ಯಾಕ್ಟರಿ ಟ್ರೈಲರ್ ಎಲ್ಲರ ಮನಗೆದ್ದು, ಆಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ. ನವೆಂಬರ್ 24 ರಂದು ಬಹು ನಿರೀಕ್ಷಿತ ಈ ಚಿತ್ರ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಡಾರ್ಲಿಂಗ್ ಕೃಷ್ಣ ಅವರ ಸಿನಿಜರ್ನಿಯಲ್ಲೇ ಶುಗರ್ ಫ್ಯಾಕ್ಟರಿ ಬಿಗ್ ಬಜೆಟ್ ಚಿತ್ರವೆಂದು ಹೇಳಲಾಗುತ್ತಿದೆ. ಅಭಿಮಾನಿಗಳು ಸಹ ಈ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡು, ಬಿಡುಗಡೆಗೆ ಕಾತುರದಿಂದ ಕಾಯುತ್ತಿದ್ದಾರೆ.

ಆರ್ ಗಿರೀಶ್ ನಿರ್ಮಿಸಿರುವ ಈ ಚಿತ್ರದಲ್ಲಿ  ಡಾರ್ಲಿಂಗ್ ಕೃಷ್ಣ ಅವರಿಗೆ ನಾಯಕಿಯರಾಗಿ ಸೋನಾಲ್ ಮಾಂತೆರೊ, ಅದ್ವಿತಿ ಶೆಟ್ಟಿ, ರುಹಾನಿ ಶೆಟ್ಟಿ ಕೃಷ್ಣ ಅವರಿಗೆ ನಾಯಕಿಯರಾಗಿ ನಟಿಸಿದ್ದಾರೆ.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]