ರಮ್ಯಾ ಪರ ಜಯಮಾಲಾ ಬ್ಯಾಟಿಂಗ್ – ಅಂಬರೀಶ್ ವೈಕುಂಠಕ್ಕೆ ಬರಬಹುದು

ಉಡುಪಿ: ನಟ, ಮಾಜಿ ಸಚಿವ ಅಂಬರೀಶ್ ಅಂತ್ಯ ಸಂಸ್ಕಾರ ಸಂದರ್ಭ ಕಾಣಿಸಿಕೊಳ್ಳದ ಮಾಜಿ ಸಂಸದೆ ನಟಿ ರಮ್ಯಾ ಅಂಬಿಯ ವೈಕುಂಟ ಸಮಾರಂಭಕ್ಕೆ ಬರಬಹುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಜಯಮಾಲಾ ಹೇಳಿದ್ದಾರೆ.

ಅಂಬರೀಶ್ ನಿಧನರಾದಾಗ ನಟಿ ರಮ್ಯಾ ಅನುಪಸ್ಥಿತಿಯ ಬಗ್ಗೆ ಉಡುಪಿಯಲ್ಲಿ ಮಾತನಾಡಿದ ಅವರು, ‘ಐ ಆಂ ಸಾರಿ’ ಈ ಬಗ್ಗೆ ಮಾತಾಡಲ್ಲ ಅಂತ ಹೇಳಿದರು. ಆದರೆ ಬಳಿಕ ರಮ್ಯಾ ಪರ ಬ್ಯಾಟ್ ಬೀಸಿದ ಅವರು, ಅಂಬರೀಶ್ ಅವರ ವೈಕುಂಠ ಸಮಾರಾಧನೆಗಾದ್ರೂ ರಮ್ಯಾ ಬರಬಹುದು. ತನಗೆ ಹುಷಾರಿಲ್ಲ ಎಂದು ರಮ್ಯಾ ಅವರು ಮಾಹಿತಿ ನೀಡಿದ್ದಾರೆ. ಇದನ್ನು ಹೊರತುಪಡಿಸಿ ಬಾರದಿರಲು ಬೇರೆ ರಾಜಕೀಯ ಕಾರಣ ಇರಲಿಕ್ಕಿಲ್ಲ ಎಂದರು.

ರಾಜಕೀಯವಾಗಿ ಬೆಳೆಸಿ, ಗೆಲ್ಲಿಸಿದ ಅಂಬಿ ಬಗ್ಗೆ ರಮ್ಯಾ ಅಸಡ್ಡೆ ಮಾಡಿದ್ದಾರಲ್ವಾ ಅಂದಿದ್ದಕ್ಕೆ, ಹೆಣ್ಮಕ್ಕಳಿಗೆ ಹಲವಾರು ಸಮಸ್ಯೆಗಳು ಇರುತ್ತದೆ. ಎಲ್ಲವನ್ನೂ ಮಾಧ್ಯಮಗಳ ಮುಂದೆ ಹೇಳಿಕೊಳ್ಳಲು ಆಗುವುದಿಲ್ಲ ಎಂದು ಡಾ. ಜಯಮಾಲಾ ಹೇಳಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

 

Comments

Leave a Reply

Your email address will not be published. Required fields are marked *