ಡಿವೋರ್ಸ್ ಬಳಿಕ ಪ್ರಿಯಾಂಕಾ ಜೊತೆ 2ನೇ ಮದುವೆಯಾದ್ರಾ ಜಯಂ ರವಿ?

ಸೌತ್ ನಟ ಜಯಂ ರವಿ (Jayama Ravi) ಇತ್ತೀಚೆಗೆ ಆರತಿ ಜೊತೆಗಿನ ಡಿವೋರ್ಸ್ ಕುರಿತು ಘೋಷಿಸಿದ ಬೆನ್ನಲ್ಲೇ ಪ್ರಿಯಾಂಕಾ ಮೋಹನ್ (Priyanka Mohan) ಜೊತೆ ಮದುವೆಯಾಗಿದ್ದಾರೆ ಎನ್ನಲಾದ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

15 ವರ್ಷಗಳ ದಾಂಪತ್ಯ ಅಂತ್ಯವಾಗಿರುವ ಬಗ್ಗೆ ಜಯಂ ರವಿ ಸೆ.10ರಂದು ಘೋಷಿಸಿದ್ದರು. ಬಳಿಕ ಗಾಯಕಿ ಕೆನಿಷಾ ಜೊತೆ ಜಯಂ ರವಿ ಎಂಗೇಜ್ ಆಗಿದ್ದಾರೆ ಎಂಬ ಸುದ್ದಿ ಕೇಳಿ ಬಂದ ಬೆನ್ನಲ್ಲೇ ಇದು ಸುಳ್ಳು ಸುದ್ದಿ ಎಂದು ನಟ ಜಯಂ ರವಿ ಸ್ಪಷ್ಟನೆ ನೀಡಿದ್ದರು. ಈಗ ಜಯಂ ರವಿ 2ನೇ ಮದುವೆ ಆಗಿದ್ದಾರೆ ಎನ್ನಲಾದ ಫೋಟೋವೊಂದು ಇಂಟರ್‌ನೆಟ್‌ನಲ್ಲಿ ಸದ್ದು ಮಾಡುತ್ತಿದೆ.

ಅಸಲಿಗೆ ಕನ್ನಡದ ನಟಿ ಪ್ರಿಯಾಂಕಾ ಮೋಹನ್ ಜೊತೆ ಜಯಂ ರವಿ ಮದುವೆ ಆಗಿಯೇ ಇಲ್ಲ. ಸದ್ಯ ವೈರಲ್ ಆಗಿರುವ ಫೋಟೋ ‘ಬ್ರದರ್’ ಸಿನಿಮಾದಲ್ಲಿರುವ ತುಣುಕಾಗಿದೆ. ಈ ಚಿತ್ರದಲ್ಲಿ ಜಯಂ ರವಿ ಮತ್ತು ಪ್ರಿಯಾಂಕಾ ಜೊತೆಯಾಗಿ ನಟಿಸಿದ್ದಾರೆ. ಚಿತ್ರದಲ್ಲಿನ ನಿಶ್ಚಿತಾರ್ಥದ ತುಣುಕು ನೋಡಿ ನಟನ 2ನೇ ಮದುವೆ ಆಗಿದೆ ಎಂದು ಅನೇಕರು ಭಾವಿಸಿದ್ದಾರೆ. ಆದರೆ ಇದು ಚಿತ್ರೀಕರಣ ಫೋಟೋ ಆಗಿದೆ. ಇದನ್ನೂ ಓದಿ:‘ನನ್ನ ಹೃದಯದ ಒಂದು ಭಾಗ’ ಎನ್ನುತ್ತಾ ಸಿಹಿಸುದ್ದಿ ಕೊಟ್ಟ ಶ್ರೀನಿಧಿ ಶೆಟ್ಟಿ

ಅಂದಹಾಗೆ, ಜಯಂ ರವಿ, ಪ್ರಿಯಾಂಕಾ ನಟನೆಯ ‘ಬ್ರದರ್’ ಸಿನಿಮಾ ಇದೇ ಅಕ್ಟೋಬರ್ 31ರಂದು ರಿಲೀಸ್ ಆಗುತ್ತಿದೆ.