ಅವಕಾಶವಿದೆ ಆದರೆ ಪ್ರೇಕ್ಷಕರಿಂದ ಗೌರವ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಜಾನ್ವಿ

ಬಾಲಿವುಡ್ (Bollywood) ನಟಿ ಶ್ರೀದೇವಿ (Sridevi)  ಮತ್ತು ಬೋನಿ ಕಪೂರ್ ಪುತ್ರಿ ಜಾನ್ವಿ ಕಪೂರ್ (Janhvi Kapoor) ಕೂಡ ಕಳೆದ ಕೆಲವು ವರ್ಷಗಳಿಂದ ಚಿತ್ರರಂಗದಲ್ಲಿ ಆಕ್ಟೀವ್ ಆಗಿದ್ದಾರೆ. ಚಿತ್ರರಂಗದಲ್ಲಿ ಹೇಳಿಕೊಳ್ಳುವಂತಹ ಸಕ್ಸಸ್ ಕಾಣದೇ ಇದ್ದರು ಅವಕಾಶಗಳಿಗೆ ಕೊರತೆಯಿಲ್ಲ. ಪ್ರತಿಭೆ ಇದ್ದರೂ ಕೂಡ ಸಿನಿಮಾ ಸಕ್ಸಸ್ ಕಾಣುತ್ತಿಲ್ಲ. ಇದೀಗ ಈ ಬಗ್ಗೆ ನಟಿ ಮಾತನಾಡಿದ್ದಾರೆ. ಪ್ರೇಕ್ಷಕರಿಂದ ತನಗೆ ಗೌರವ ಸಿಗುತ್ತಿಲ್ಲ ಎಂದು ಸಂದರ್ಶನವೊಂದರಲ್ಲಿ ಜಾನ್ವಿ ಮೌನ ಮುರಿದಿದ್ದಾರೆ.

`ಧಡಕ್’ ಸಿನಿಮಾ ಮೂಲಕ ಬಾಲಿವುಡ್‌ಗೆ ಲಗ್ಗೆಯಿಟ್ಟ ನಟಿ ಜಾನ್ವಿ ಕಪೂರ್, ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಸ್ಟಾರ್ ಕಿಡ್ ಆಗಿರುವ ಜಾನ್ವಿ, ಅವಕಾಶಗಳಿದೆ ಆದರೆ ಪ್ರೇಕ್ಷಕರಿಂದ ಗೌರವ ಮಾತ್ರ ಸಿಗುತ್ತಿಲ್ಲ ಎಂದು ಸಂದರ್ಶನವೊಂದರಲ್ಲಿ ಬೇಸರ ಹೊರಹಾಕಿದ್ದಾರೆ. ಗೌರವ ಗಳಿಸುವ ನಿಟ್ಟಿನಲ್ಲಿ ಜಾನ್ವಿ ಕೆಲಸ ಮಾಡ್ತಿದ್ದಾರೆ. ಇದನ್ನೂ ಓದಿ: ಭಾವಿ ಪತ್ನಿ ಬರ್ತ್‌ಡೇಗೆ ರೊಮ್ಯಾಂಟಿಕ್ ಆಗಿ ವಿಶ್ ಮಾಡಿದ ಅಭಿಷೇಕ್

ಜಾನ್ವಿ ಈ ವಿಚಾರ ಹೇಳಿಕೊಂಡಿದ್ದಾರೆ. ನೀವು ಸ್ಕ್ರಿಪ್ಟ್ ಆಯ್ಕೆ ಮಾಡುವಾಗ ಗಮನಿಸುವ ಅಂಶಗಳು ಯಾವವು ಎಂದು ಜಾನ್ವಿಗೆ ಪ್ರಶ್ನೆ ಮಾಡಲಾಯಿತು. ಇದಕ್ಕೆ ಜಾನ್ವಿ ಉತ್ತರಿಸಿದ್ದಾರೆ. ನನ್ನ ಸಾಮರ್ಥ್ಯದ ಬಗ್ಗೆ ನನಗೆ ತಿಳಿದಿದೆ. ನನ್ನನ್ನು ಸಾಬೀತುಪಡಿಸಿಕೊಳ್ಳಲು ಹಾಗೂ ಹೊಸ ಚಾಲೆಂಜ್‌ಗಳನ್ನು ತೆಗೆದುಕೊಳ್ಳಲು ನಾನು ಬಯಸುತ್ತೇನೆ. ನನಗೆ ಸಾಕಷ್ಟು ಅವಕಾಶಗಳು ಸಿಕ್ಕಿವೆ. ಆದರೆ, ನಾನು ಇನ್ನೂ ಜನರಿಂದ ಗೌರವವನ್ನು ಗಳಿಸಲು ಸಾಧ್ಯವಾಗಿಲ್ಲ. ನಾನು ಅದಕ್ಕಾಗಿಯೇ ಕೆಲಸ ಮಾಡುತ್ತಿದ್ದೇನೆ ಅನ್ನೋದು ನನ್ನ ಅಭಿಪ್ರಾಯ. ಒಂದು ವ್ಯಕ್ತಿಯ ಮೇಲೆ ಅಭಿಪ್ರಾಯ ಮೂಡುವುದು ಮತ್ತು ಆ ಅಭಿಪ್ರಾಯವನ್ನು ಬದಲಿಸುವುದಕ್ಕೆ ಸಾಕಷ್ಟು ಸಮಯ ಬೇಕಾಗುತ್ತದೆ ಎಂದು ಜಾನ್ವಿ ಮಾತನಾಡಿದ್ದಾರೆ.

26ನೇ ವರ್ಷದ (ಫೆ.6) ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಜಾನ್ವಿ ಇದೀಗ ತಮ್ಮ ಹೊಸ ಚಿತ್ರವೊಂದನ್ನ ಅನೌನ್ಸ್ ಮಾಡಿದ್ದಾರೆ. ತೆಲುಗಿನ ಸೂಪರ್ ಸ್ಟಾರ್ ಜ್ಯೂ.ಎನ್‌ಟಿಆರ್‌ಗೆ ನಾಯಕಿಯಾಗಿ ಜಾನ್ವಿ ನಟಿಸಲಿದ್ದಾರೆ.

Comments

Leave a Reply

Your email address will not be published. Required fields are marked *