ಕೊಪ್ಪಳ: ಅನಾರೋಗ್ಯಕ್ಕೆ ಒಳಗಾಗಿದ್ದ ತಂದೆ, ತಾಯಿಯನ್ನು ಕಳೆದುಕೊಂಡಿರುವ ಇಬ್ಬರು ಮಕ್ಕಳನ್ನು ಕೆಆರ್‌ಪಿಪಿ ಪಕ್ಷದ ಸಂಸ್ಥಾಪಕ ಜನಾರ್ದನ ರೆಡ್ಡಿ (Janardhana Reddy) ದತ್ತು ಪಡೆದುಕೊಂಡರು.
ಕೊಪ್ಪಳದ (Koppala) ಗಂಗಾವತಿ ನಗರದ ವಿರುಪಾಪುರ ತಾಂಡದಲ್ಲಿ ಕೆಆರ್‌ಪಿಪಿ ಪಕ್ಷದ ವತಿಯಿಂದ ಭಾನುವಾರ ಹಮ್ಮಿಕೊಂಡ ಪ್ರಚಾರದ ಸಮಯದಲ್ಲಿ ಮಕ್ಕಳನ್ನು ದತ್ತು ಪಡೆದರು. ಇದನ್ನೂ ಓದಿ: ʻಉರಿಗೌಡ-ನಂಜೇಗೌಡʼ ಕಾಲ್ಪನಿಕ ಪಾತ್ರ ಅಂದೋರು ನಮ್ಮನ್ನ ಕ್ಷಮೆ ಕೇಳಬೇಕು – ಸಿ.ಟಿ ರವಿ
ವಿರುಪಾಪುರ ತಾಂಡದ ನಿವಾಸಿಯಾಗಿರುವ ಈ ಇಬ್ಬರು ಮಕ್ಕಳು ತಂದೆ-ತಾಯಿಯನ್ನು ಕಳೆದುಕೊಂಡು ಸೋದರ ಮಾವನ ಮನೆಯಲ್ಲಿ ವಾಸವಿದ್ದರು. ಸೋದರ ಮಾವನಿಗೂ ಕಷ್ಟ ಇರುವುದರಿಂದ ಜನಾರ್ದನ ರೆಡ್ಡಿಯವರು ಜ್ಯೋತಿ ಸ್ವರೂಪ್, ವೇಣು ಎನ್ನುವ ಇಬ್ಬರು ಮಕ್ಕಳನ್ನು ದತ್ತು ಪಡೆಕೊಂಡಿದ್ದಾರೆ. ಮಕ್ಕಳ ಶಿಕ್ಷಣ ಸೇರಿದಂತೆ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಂಡು ನನ್ನ ಮಕ್ಕಳಂತೆ ನೋಡಿಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.
ಕೆಆರ್‌ಪಿಪಿ ಪಕ್ಷದ ವತಿಯಿಂದ ಈಗಾಗಲೇ 12 ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ. ಮಾರ್ಚ್ 30ರ ಒಳಗೆ 30 ಕ್ಕೂ ಅಧಿಕ ಅಭ್ಯರ್ಥಿಗಳನ್ನು ಘೋಷಣೆ ಮಾಡುವೆ. ಬಿಜೆಪಿ ಪಕ್ಷದ ನಾಯಕರು ಗಂಗಾವತಿಗೆ ಸಾಲು ಸಾಲಾಗಿ ಆಗಮಿಸುತ್ತಿದ್ದಾರೆ. 5 ವರ್ಷಗಳ ಅವಧಿಯಲ್ಲಿ ಯಾರು ಸಹ ಗಂಗಾವತಿಗೆ ಬಂದಿರಲಿಲ್ಲ. ನನ್ನಿಂದ ಅವರು ಗಂಗಾವತಿಗೆ ಬರುತ್ತಿರುವುದು ಖುಷಿಯಾಗುತ್ತಿದೆ ಕಾಲೆಳೆದರು. ಇದನ್ನೂ ಓದಿ: ಯುಗಾದಿಗೆ ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆ: ಎಂಬಿ ಪಾಟೀಲ
ಪಕ್ಷದ ವಿಚಾರವಾಗಿ ಯಾರ ಬಗ್ಗೆ ಕೂಡ ನಾನು ಮಾತನಾಡುವುದಿಲ್ಲ. ಅವರವರ ಪಕ್ಷ ಅವರಿಗೆ ಬಿಟ್ಟ ವಿಚಾರವಾಗಿದೆ ಎಂದು ಸ್ಪಷ್ಟಪಡಿಸಿದರು.


Leave a Reply