ಚಿನ್ನ, ಬೆಳ್ಳಿ ನಾಣ್ಯದಿಂದ ಜನಾರ್ದನ ರೆಡ್ಡಿ ತುಲಾಭಾರ

ಬಳ್ಳಾರಿ/ವಿಜಯನಗರ: ಚಿನ್ನ ಹಾಗೂ ಬೆಳ್ಳಿ ನಾಣ್ಯಗಳಿಂದ ಮಾಜಿ ಸಚಿವ ಜನಾರ್ದನ ರೆಡ್ಡಿ ತುಲಾಭಾರ ಸೇವೆ ನಡೆದಿದೆ.

ಇತ್ತೀಚೆಗಷ್ಟೇ ಜನಾರ್ದನ ರೆಡ್ಡಿ ಅವರಿಗೆ ಬಳ್ಳಾರಿಯಲ್ಲಿ ವಾಸ ಮಾಡಲು ಸುಪ್ರೀಂಕೋರ್ಟ್ ಅನುಮತಿ ನೀಡಿದೆ ಮತ್ತು ಇಂದು ಜನಾರ್ದನ ರೆಡ್ಡಿ ಅವರು 55ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಹೀಗಾಗಿ ಡಬಲ್ ಸಂಭ್ರಮದಲ್ಲಿರುವ ಅಭಿಮಾನಿಗಳು ಬಳ್ಳಾರಿಯ ದುರ್ಗಮ್ಮ ದೇಗುಲದಲ್ಲಿ ಜನಾರ್ದನ ರೆಡ್ಡಿಗೆ ತುಲಾಭಾರ ಸೇವೆ ನಡೆಸಿದ್ದಾರೆ. ಇದನ್ನೂ ಓದಿ: ಫಸ್ಟ್ ಟೈಂ ಮನುಷ್ಯನಿಗೆ ಹಂದಿ ಹೃದಯ ಕಸಿ ಶಸ್ತ್ರಚಿಕಿತ್ಸೆ ಯಶಸ್ವಿ

ಬಳ್ಳಾರಿಯ ಕನಕ ದುರ್ಗಮ್ಮ ದೇವಾಲಯಕ್ಕೆ ಜನಾರ್ದನ ರೆಡ್ಡಿ ಅವರು ಕುಟುಂಬ ಸಮೇತರಾಗಿ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ದೇವಸ್ಥಾನದ ಆವರಣದಲ್ಲಿ 55 ಬೆಳ್ಳಿ ನಾಣ್ಯ, 55 ಬಂಗಾರದ ನಾಣ್ಯ ಜೊತೆಗೆ ಐದು ರೂಪಾಯಿ ಮತ್ತು ಹತ್ತು ರೂಪಾಯಿ ನಾಣ್ಯದಿಂದ ತುಲಾಭಾರ ನಡೆಸಲಾಯಿತು. ಈ ವೇಳೆ ಜನಾರ್ದನ ರೆಡ್ಡಿ ಅವರೊಂದಿಗೆ ಸಾರಿಗೆ ಸಚಿವ ರಾಮುಲು, ಶಾಸಕ ಸೋಮಶೇಖರ್ ರೆಡ್ಡಿ ಉಪಸ್ಥಿತರಿದ್ದರು. ಇದನ್ನೂ ಓದಿ: ಮಕರ ಸಂಕ್ರಾಂತಿಗೆ ಗಾಳಿಪಟ ತಂತಿ ಮಾರಾಟ, ಸಂಗ್ರಹಣೆ ನಿಷೇಧ

ತುಲಾಭಾರ ಕಾರ್ಯಕ್ರಮದ ವೇಳೆ ಜನ ಮಾಸ್ಕ್ ಧರಿಸದೇ, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಕೊರೊನಾ ನಿಯಮ ಸಂಪೂರ್ಣ ಉಲ್ಲಂಘಿಸಿದ್ದರು.

Comments

Leave a Reply

Your email address will not be published. Required fields are marked *